ಮಹಿಳೆ-ಮನೆ-ಬದುಕು

ಕಳ್ಳಿಯರ ಸಂತೆ

ಕಳ್ಳಿಯರ ಸಂತೆ
Published On :

'ಚೀಟಿ ವ್ಯವಹಾರ ಮಾಡ್ತಿದ್ಳು ಕಣೇ... ಒಂದಿನಾ ಇದ್ದಕ್ಕಿದ್ದ ಹಾಗೆ ಎಲ್ಲೋ ಹೊರಟ್ಹೋಗಿಬಿಟ್ಳು. ನಂದು ಇಪ್ಪತ್ತು ಸಾವ್ರ ಹೋಯ್ತು..., ಮಗು ಆಪರೇಶನ್‌ಗೆ ಅಂತ ಸಾಲ ಕೇಳಿದ್ಲು. ಪಾಪ! ಅಂತ ಹತ್ತು ಸಾವ್ರ ಕೊಟ್ರೆ ಹತ್ತು ವರ್ಷ ಆದ್ರೂ ವಾಪಸ್ ಕೊಟ್ಟಿಲ್ಲ. ದಿನಾ ಏನಾದ್ರೂ ಸಬೂಬು ಹೇಳ್ತಾ, ಹಾಯಾಗಿದ್ದಾಳೆ.'
ಇಂಥ ಮಾತುಗಳನ್ನು ನಿತ್ಯ ಅಲ್ಲಿ ಇಲ್ಲಿ ಕೇಳ್ತಲೇ ಇರ್ತೀವಿ. ಪುರುಷರಿಗಿಂತಲೂ ಸ್ತ್ರೀಯರೇ ಆಸೆ- ಆಮಿಷಗಳಿಗೆ ಒಳಗಾಗೋದು, ಮರುಳಾಗೋದು, ಇತರರನ್ನೂ ಮರುಳು ಮಾಡೋದು ಜಾಸ್ತಿ ಅನ್ನೋ ಮಾತು ನಿಜವಾಗುತ್ತಿದೆ. ಸುಶಿಕ್ಷಿತರೆನಿಸಿಕೊಂಡವರ ಮಧ್ಯನೂ ನಯವಂಚಕಿಯರು, ಸುಳ್ಳಿಯರು, ಕಳ್ಳಿಯರಿಗೇನೂ ಕೊರತೆ ಇಲ್ಲ.
ಫ್ರೆಂಡ್‌ಶಿಪ್ ನೆಪದಲ್ಲಿ ಅದೂ-ಇದೂ ಎರವಲು ತಗೊಂಡು ಅವನ್ನು ಮರಳಿಸದೆ ಇರುವವರು ಅದೆಷ್ಟೋ ಮಂದಿ. ಇಂಥವರನ್ನು ನಂಬಿ ಅಮೂಲ್ಯ ವಸ್ತುಗಳನ್ನು ಕೊಟ್ಟಿರೆಂದರೆ ಮೋಸ ಹೋಗುವುದು ಗ್ಯಾರಂಟಿ. ಇಂದು ಎಷ್ಟೆಷ್ಟೋ ವಂಚನೆಯ ಪ್ರಕರಣಗಳಲ್ಲಿ ಮಹಿಳೆಯರೇ ರೂವಾರಿಗಳು! ಲಂಚಕ್ಕಾಗಿ ಕೈಯೊಡ್ಡುವ ಉದ್ಯೋಗಸ್ಥ ಮಹಿಳೆಯರಿಗೇನೂ ಕಮ್ಮಿ ಇಲ್ಲ. ಲಂಚ ಕೇಳುವಂತೆ ಗಂಡಂದಿರನ್ನು ಪುಸಲಾಯಿಸುವ ಪತ್ನಿಯರೂ ಇಲ್ಲದಿಲ್ಲ.
ಬೆಣ್ಣೆಯಂಥ ನಯವಾದ ಮಾತು, ಸತ್ಯಕ್ಕೆ ರಾಚುವಂತೆ ಹೇಳುವ ಅಪ್ಪಟ ಸುಳ್ಳು... ಇಂಥವರಿಗೆ ಇದೇ ಬಂಡವಾಳ! ಒಟ್ಟಿನಲ್ಲಿ ಯಾವುದೇ ಶ್ರಮವಿಲ್ಲದೆ ದುಡ್ಡು ಮಾಡಿಕೊಳ್ಳಬೇಕು; ಸುಲಭ ಮಾರ್ಗದಲ್ಲಿ ಐಷಾರಾಮಿ ಜೀವನ ಸಾಗಿಸಬೇಕು. ಲೋಕದ ಸಕಲ ಸವಲತ್ತುಗಳನ್ನೂ ಅನುಭವಿಸಬೇಕು. ಆದರೆ ಬರೀ ದುಡಿಮೆಯಿಂದ ಇದೆಲ್ಲ ಸಾಧ್ಯವೇ? ಅದಕ್ಕೇ ಒಳ್ಳೆಯತನದ ಸೋಗು ಹಾಕಿ ಏಮಾರಿಸಿಬಿಡುತ್ತಾರೆ. ಯಾವುದೇ ಮುಲಾಜಿಲ್ಲದೆ ತಮಗೆ ಬೇಕಾದ್ದನ್ನು ಸಲೀಸಾಗಿ ಲಪಟಾಯಿಸಿಬಿಡುತ್ತಾರೆ. ಅಪರಿಚಿತರನ್ನು ಬಿಡಿ, ಅಕ್ಕಪಕ್ಕದವರು, ಸ್ನೇಹಿತರು, ಬಡಪಾಯಿಗಳು, ಸಾಮಾನ್ಯರು... ಹೀಗೆ ಯಾರಾದರೂ ಸರಿ, ಅವರಿಗೆ ನಗಣ್ಯ. ಬೇಕಾದ್ದನ್ನು ಪಡೆಯುವುದಷ್ಟೇ ಅವರ ಗುರಿ.
ಇಂಥವರ ಬಗ್ಗೆ ಎಚ್ಚರದಿಂದಿರಿ...
    ಬಣ್ಣಬಣ್ಣದ ಮಾತುಗಳಿಗೆ ಮರುಳಾಗದಿರಿ. ನಯವಂಚಕರ ಚೀಟಿಗೆ ಹಣ ಸುರಿದು ನಷ್ಟ ಅನುಭವಿಸುವುದಕ್ಕಿಂತ ಅಂಚೆಕಚೇರಿಯಲ್ಲೋ, ಬ್ಯಾಂಕ್‌ನಲ್ಲೋ ಹಣ ಜಮಾ ಮಾಡುವುದು ಒಳ್ಳೆಯದು.
    ಸ್ನೇಹ, ವಿಶ್ವಾಸ ಎಂದು ಕಂಡಕಂಡವರಿಗೆಲ್ಲ ಅಮೂಲ್ಯ ವಸ್ತುಗಳನ್ನು, ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕೊಡಲು ಹೋಗದಿರಿ; ಕೊಡಲೇಬೇಕೆಂದಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಿ.
    ಒಂಟಿ ಮಹಿಳೆಯರು, ನೌಕರಿಗೆ ಹೊಸದಾಗಿ ಸೇರಿಕೊಂಡಿರುವವರು, ಪತಿ-ಮಕ್ಕಳಿಂದ ದೂರದಲ್ಲಿರುವ ಗೃಹಿಣಿಯರು, ಮುಗ್ಧರು- ಇಂಥವರ ಮೇಲೆ ತಮ್ಮ 'ಜಾಣ್ಮೆ' ತೋರಲು ನಯವಂಚಕಿಯರು ಸದಾ ಕಾದಿರುತ್ತಾರೆ. ಅವರ ಬಗ್ಗೆ ಎಚ್ಚರದಿಂದಿರಿ.

= ರಾಜೇಶ್ವರಿ ಜಯಕೃಷ್ಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.