ಮಹಿಳೆ-ಮನೆ-ಬದುಕು

ಸೀನಿಯರ್ ನಿಲಯ

ಸೀನಿಯರ್ ನಿಲಯ
Published On :

ನಿವೃತ್ತರು, ವೃದ್ಧರಿಗಾಗಿ ಬ್ರಿಗೇಡ್ ಗ್ರೂಪ್ ಹೊಸ ನಿವಾಸಗಳನ್ನು ರೂಪಿಸಿದೆ. ವೃದ್ಧರನ್ನೇ ಮುಖ್ಯ ಗುರಿಯಾಗಿಸಿಕೊಂಡು ಹೊಸ ಹೊಸ ಬಗೆಯ ವಿನ್ಯಾಸಗಳನ್ನು ಬ್ರಿಗೇಡ್ ಗ್ರೂಪ್ ಈ ಮನೆಗಳನ್ನು ತಯಾರಿಸಿದೆ.
ಈ ಗ್ರೂಪ್ ಈಗಾಗಲೇ ಬೆಂಗಳೂರು, ಕೊಚ್ಚಿನ್, ಚೆನ್ನೈ, ಕೊಯಮತ್ತೂರು, ಪುಣೆ, ಗೋವಾ, ಕೋಲ್ಕತಾ, ಹೈದರಾಬಾದ್, ಮುಂಬೈ, ಭೋಪಾಲ್, ದೆಹಲಿ, ನಾಗ್ಪುರ ಮತ್ತು ಪಂಜಾಬ್ನಲ್ಲಿ ಈ ನಿವೃತ್ತರ ಮನೆಗಳ ಯೋಜನೆ ಜಾರಿಗೆ ಬರುತ್ತಿದೆ.

ಸಾಮಾನ್ಯ ಅಪಾರ್ಟ್ಮೆಂಟ್ಗಿಂತ ಭಿನ್ನವಾಗಿ ಈ ನಿವಾಸಗಳನ್ನು ನಿರ್ಮಿಸಲಾಗುತ್ತದೆ. ಇಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ಪ್ರಮುಖವಾಗಿ ಭದ್ರತೆ ಒದಗಿಸುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಹಿರಿಯ ನಾಗರಿಕರ ಅನುಕೂಲಕ್ಕೆ ಅನುಗುಣವಾಗಿ ಪಾದಚಾರಿ ಮಾರ್ಗಗಳು, ಸುಂದರ ಉದ್ಯಾನಗಳು, ಜಿಮ್ಗಳನ್ನು ನಿರ್ಮಿಸಲಾಗುತ್ತದೆ. ಹಿರಿಯರಿಗಾಗಿ ಸ್ಕಿಡ್ ಆಗದ ಟೈಲ್ಸ್ಗಳನ್ನು ಬಳಸಲಾಗಿದೆ. ವ್ಹೀಲ್ ಚೇರ್ಗಳನ್ನು ಬಳಸಲು ಅವಕಾಶ ಇರುವ ರೀತಿಯಲ್ಲಿ ಬಾಗಿಲುಗಳಿರುತ್ತವೆ.

ಪಾರ್ಕ್ಗಳು, ವಿಸ್ತಾರವಾದ ಕೋಣೆಗಳು, ಕಾರಿಡಾರ್ಗಳು, ರ್ಯಾಂಪ್ಗಳು, ನಾನ್ ಸ್ಕಿಡ್ ಟೈಲ್ಸ್, ವ್ಹೀಲ್ಚೇರ್, ವೈಜ್ಞಾನಿಕ ರೀತಿಯಲ್ಲಿ ಬೆಳಕಿನ ಸೌಲಭ್ಯ ಇರುವುದು ಈ ಮನೆಗಳ ವಿಶೇಷ. ನಾಗರಿಕ ಸ್ನೇಹಿ ಲಿಫ್ಟ್ಗಳು, ತುರ್ತು ವೇಳೆ ವೈದ್ಯಕೀಯ ಸೇವೆಗಳು, 24 ಗಂಟೆಯೂ ವೈದ್ಯರ ಸೇವೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.