ಹೇ, ರೂಂ!
ಕುಟುಂಬದ ಜೊತೆ, ಮನೆಗೆ ಬಂದ ಅತಿಥಿಗಳೊಂದಿಗೆ ಕಾಲ ಕಳೆಯಲು ಮನೆಯಲ್ಲಿ ಲಿವಿಂಗ್ ರೂಮ್ ಅಥವಾ ಫ್ಯಾಮಿಲಿ ರೂಮಿನಂಥ ...

ಕುಟುಂಬದ ಜೊತೆ, ಮನೆಗೆ ಬಂದ ಅತಿಥಿಗಳೊಂದಿಗೆ ಕಾಲ ಕಳೆಯಲು ಮನೆಯಲ್ಲಿ ಲಿವಿಂಗ್ ರೂಮ್ ಅಥವಾ ಫ್ಯಾಮಿಲಿ ರೂಮಿನಂಥ ಸೂಕ್ತ ಸ್ಥಳ ಬೇರೊಂದಿಲ್ಲ. ಅಷ್ಟೇ ಅಲ್ಲ, ಮನೆಯವರೊಂದಿಗೆ ಸಂಭ್ರಮದಿಂದ ಬೆರೆಯಲೂ ಇದು ಸೂಕ್ತ ಸ್ಥಳ.
ಟಿವಿ ನೋಡುವುದು, ಪುಸ್ತಕ ಓದುವುದು ಮತ್ತು ಮಕ್ಕಳು ಈ ಸ್ಥಳವನ್ನು ಹೋಮ್‌ವರ್ಕ್ ಮಾಡಲೂ ಈ ಕೋಣೆಯನ್ನು ಬಳಸಿಕೊಳ್ಳಬಹುದು. ಮನೆಯ ಕೇಂದ್ರಬಿಂದು ಲಿವಿಂಗ್ ರೂಮ್. ಆರಾಮದಾಯಕ ಸ್ಥಳ ಇದಕ್ಕಿರುವ ಪರ್ಯಾಯ ಹೆಸರು.
ಈ ರೂಮಿನಲ್ಲಿ ದೊಡ್ಡ ಸ್ಕ್ರೀನ್ ಟಿವಿ, ಪ್ರಾಯೋಗಿಕ ಪೀಠೋಪಕರಣಗಳು, ಬುಕ್ ತುಂಬಿದ ಶೆಲ್ಫ್‌ಗಳು ಇದ್ದರೆ, ಸಂಬಂಧಿಕರೊಂದಿಗೆ ಅಥವಾ ಸ್ನೇಹಿತರೊಂದಿಗಿನ ಹರಟೆಗೆ ಒಂದಿಷ್ಟು ಮೆರುಗು ನೀಡಬಲ್ಲದು. ಹೀಗಾಗಿ ಕೇವಲ ಸಂತೋಷ ಮಾತ್ರವಲ್ಲ, ಸಂಕಷ್ಟ ವಿಷಯಗಳನ್ನೂ ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಾಗವೇ ಕಡಿಮೆ ಇರುವಾಗ ಇನ್ನೆಲ್ಲಿ ಲಿವಿಂಗ್ ರೂಮ್ ಎಂದು ಉದ್ಗಾರ ತೆಗೆಯುವವರೇ ಹೆಚ್ಚಿದ್ದಾರೆ. ಜಾಗ ಜಾಸ್ತಿಯಾಗಿದ್ದರೆ ಇಂಥ ಆರಾಮದಾಯಕ ಕೋಣೆಯನ್ನು ರೂಪಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಈ ರೂಮ್ ಹೇಗಿದ್ದರೆ ಚೆನ್ನ? ಅಲ್ಲಿ ಏನಿದ್ದರೆ ಚೆನ್ನ? ಎನ್ನುವ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ...
- ನೀವು ಕ್ರೀಡಾಪ್ರೇಮಿಗಳಾಗಿದ್ದರೆ ಈ ರೂಮಿನಲ್ಲಿ ಆಟಕ್ಕಾಗಿ ಒಂದು ದೊಡ್ಡ ಟೇಬಲ್ ಇಟ್ಟುಕೊಳ್ಳಿ. ಮಕ್ಕಳು ವಿಡಿಯೋ ಗೇಮ್ ಇಷ್ಟಪಡುತ್ತಾರೆ. ಹೀಗಾಗಿ ಆ ಮಕ್ಕಳಿಗೆ ಅಗತ್ಯವಿರುವ ಆಸನಗಳನ್ನೂ ಇಡಲು ಮರೆಯದಿರಿ. ಓದುವ ಅಭಿರುಚಿ ಇದ್ದರೆ ಡೆಸ್ಕ್, ಬುಕ್ ಶೆಲ್ಫ್‌ಗಳು ಅಲ್ಲಿ ಮನೆಮಾಡಿರಲಿ.
- ಆದಷ್ಟೂ ಕಡಿಮೆ ಸ್ಥಳ ಹಿಡಿಯುವ ಡೆಸ್ಕ್, ಬುಕ್ ಸ್ಟ್ಯಾಂಡ್, ಟೇಬಲ್, ಶೆಲ್ಫ್‌ಗಳಿಗೆ ಆದ್ಯತೆ ನೀಡಿ. ಇದರಿಂದ ಜಾಗದ ಉಳಿತಾಯವಾಗುತ್ತದೆ. ರೂಮಿಗೆ ಹೊಂದುವಂಥ ಬಣ್ಣ ಬಳಿಯಿರಿ. ಆದಷ್ಟು ಬಿಳಿ ಬಣ್ಣವಾಗಿದ್ದರೆ ಮನಸ್ಸೂ ಅದನ್ನು ನೋಡಿದಾಗ ಪ್ರಫುಲ್ಲವಾಗುತ್ತದೆ.
- ರಶ್ಮಿ ಕಾರ್ಗಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


