ಮಹಿಳೆ-ಮನೆ-ಬದುಕು

ನೃತ್ಯಕ್ಕೆ ಧನ್ಯವಾದ

ಕೊಡಗು ಕರುನಾಡಿನ ಪುಟ್ಟ ಜಿಲ್ಲೆ. ಸಾಂಸ್ಕೃತಿಕ ನಗರಿ. ಅಲ್ಲಿನ ಆತಿಥ್ಯ, ಕಲೆ- ಸಂಸ್ಕೃತಿ ಶ್ರೀಮಂತ. ಇಂಥ ಜಿಲ್ಲೆಯ ನೃತ್ಯ ಪ್ರತಿಭೆ ಶ್ರೀಧನ್ಯ ...

ನೃತ್ಯಕ್ಕೆ ಧನ್ಯವಾದ
Published On :

ಕೊಡಗು ಕರುನಾಡಿನ ಪುಟ್ಟ ಜಿಲ್ಲೆ. ಸಾಂಸ್ಕೃತಿಕ ನಗರಿ. ಅಲ್ಲಿನ ಆತಿಥ್ಯ, ಕಲೆ- ಸಂಸ್ಕೃತಿ ಶ್ರೀಮಂತ.
ಇಂಥ ಜಿಲ್ಲೆಯ ನೃತ್ಯ ಪ್ರತಿಭೆ ಶ್ರೀಧನ್ಯ ರಾಮನ್. ಹಚ್ಚ- ಹಸಿರಿನ  ಮಡಿಕೇರಿಯ ದೇಚೂರಿನಲ್ಲಿ ಸೌರಭ ಸಂಗೀತ, 'ನೃತ್ಯ ಕಲಾ ಪರಿಷತ್ ಸ್ಥಾಪಿಸಿ' ಅಲ್ಲಿನ ಮಕ್ಕಳಿಗೆ ನೃತ್ಯ ಮತ್ತು ಸಾಂಸ್ಕೃತಿಕ ಅರಿವು ಮೂಡಿಸುತ್ತಿದ್ದಾರೆ.
ಶಾರದಾ ಕೆ. ರಾಮನ್ ಅವರ ಎರಡನೇ ಪುತ್ರಿಯಾಗಿರುವ ಶ್ರೀಧನ್ಯ 8ನೇ ವಯಸ್ಸಿನಲ್ಲಿರುವುವಾಗಲೇ ಕಲೆಯತ್ತ ಆಸಕ್ತಿ ಬೆಳೆಸಿಕೊಂಡರು. ಜತೆಗೆ ಅಕ್ಕ ಶ್ರೀವಿದ್ಯಾ ಭರತನಾಟ್ಯ ಕರಗತ ಮಾಡಿಕೊಂಡಿದ್ದರಿಂದ ಇವರೆಲ್ಲರ ಮಾರ್ಗದರ್ಶನದಲ್ಲಿ ಬೆಳೆದರು. ನಾಟ್ಯಾಚಾರ್ ಕೆ. ಮುರಳೀಧರ ರಾವ್ ಮತ್ತು ಸಹೋದರಿ ಡಾ. ಶ್ರೀವಿದ್ಯಾ ಅವರ ಶಿಷ್ಯರಾಗಿ ಐದನೇ ವಯಸ್ಸಿನಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾರೆ.
22 ವರ್ಷಗಳಿಂದ ಕೊಡಗಿನಲ್ಲಿ ಸೌರಭ ಸಂಸ್ಥೆಯನ್ನು ಹುಟ್ಟು ಹಾಕಿ ಇಡೀ ಕುಟುಂಬವೇ ಮಕ್ಕಳಿಗೆ ನೃತ್ಯಾಭ್ಯಾಸ ಮಾಡಿಸುವಲ್ಲಿ ಶ್ರಮಿಸುತ್ತಿದೆ. ಅದರಲ್ಲಿ ಅತಿ ಕಿರಿಯ ವಯಸ್ಸಿನಲ್ಲೇ ಇಂಥ ಶಾಲೆಯ ಜವಾಬ್ದಾರಿ ಹೊತ್ತು ಸಾಕಷ್ಟು ಪ್ರತಿಭೆಗಳನ್ನು ನಾಡಿಗೆ ಅರ್ಪಿಸಿದ ದಾಖಲೆ ಶ್ರೀಧನ್ಯಳಿಗೆ ಸಲ್ಲುತ್ತದೆ. ಕಲೆಯನ್ನು ಮಕ್ಕಳಿಗೆ ಕಲಿಸುತ್ತಲೇ ರಾಜ್ಯಾದ್ಯಂತ ಪ್ರದರ್ಶನ ಮಾಡಿದ್ದಾರೆ. ಸಾಗರದಾಚೆ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಭರತನಾಟ್ಯ, ಕುಚುಪುಡಿ, ಮೋಹಿನಿ ಅಟ್ಟಂ ನೃತ್ಯ ಪ್ರಕಾರಗಳನ್ನು ಮಕ್ಕಳಿಗೆ ಕಲಿಸಿಕೊಡುವಲ್ಲಿ ನಿರತರಾಗಿದ್ದಾರೆ.
ಇವರ ಶ್ರಮ ಗುರುತಿಸಿ ಸಂಘಸಂಸ್ಥೆಗಳು, ಸರಕಾರ ಹತ್ತು-ಹಲವು ಪ್ರಶಸ್ತಿ ನೀಡಿ ಗೌರವಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚೆನ್ನೈನ ದೂರ ಸಂಪರ್ಕ ಇಲಾಖೆಯ ಬಂಗಾರದ ಪದಕ ಪುರಸ್ಕಾರ ಸಂದಿದೆ.
ಲಂಡನ್‌ನಲ್ಲಿ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿದ ಇವರು 'ಕಲೆ ಹುಟ್ಟಿನಿಂದಲೂ ನನ್ನ ಜತೆಗಿದೆ. ಆದರೆ ಕೆಲವೊಮ್ಮೆ ಇಂಥ ಕೆಲಸಗಳನ್ನು ಮಾಡುವಾಗ ಹಣಕಾಸಿನ ಕೊರತೆ ಸಹಜ. ನನ್ನ ತಂದೆ- ತಾಯಿ ಹಾಗೂ ಇಡೀ ಕುಟುಂಬ ಇದೊಂದು ಸೇವೆ ಎಂದು ಭಾವಿಸಿರುವುದರಿಂದ ಇದೆಲ್ಲ ಸಾಧ್ಯವಾಗಿದೆ' ಅಂತಾರೆ ಶ್ರೀಧನ್ಯ.
ಕೊಡಗಿನಲ್ಲಿ ನೃತ್ಯ ಗ್ರಾಮವೊಂದನ್ನು ಮಾಡುವ ಮಹದಾಸೆ ಇವರಿಗಿದೆ. ಈ ಕಾರ್ಯಕ್ಕೆ ಪತಿ ಮನೂಪ ಹಾಗೂ ಮಗಳು ಅನ್ವಿತಾ ಸಾಥ್ ನೀಡುತ್ತಿದ್ದಾರೆ.

- ಪ್ರವೀಣರಾಜು ಸೊನ್ನದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.