ಕೂದಲ ಆರೋಗ್ಯಕ್ಕೆ ಮದರಂಗಿ
Published On :
- ಮೆಹಂದಿಯಲ್ಲಿ ಅನೇಕ ಶ್ರೇಷ್ಠ ಗುಣಗಳು ಅಡಕವಾಗಿವೆ. ಇದು ಕೂದಲಿಗೆ ಬಣ್ಣ ನೀಡುವುದು ಮಾತ್ರವಲ್ಲ ಕೂದಲ ಆರೋಗ್ಯಕ್ಕೂ ಸಹಕಾರಿ.
- ಕೂದಲಿಗೆ ರಾಸಾಯನಿಕ ಬಣ್ಣವನ್ನು ಉಪಯೋಗಿಸುವುದರಿಂದ ಅನೇಕ ಅಡ್ಡ ಪರಿಣಾಮಗಳಾಗುತ್ತವೆ. ಆದರೆ ಮದರಂಗಿ ಆ ಎಲ್ಲ ಸಮಸ್ಯೆಗಳಿಂದ ಕೂದಲನ್ನು ದೂರವಿಡುತ್ತದೆ.
- ಮದರಂಗಿ ಒಂದು ಅದ್ಭುತ ಕಂಡೀಷನರ್. ಇದು ಕೂದಲಿಗೆ ಕಾಂತಿ ನೀಡುವ ಗುಣ ಹೊಂದಿದೆ. ಇದು ನೆತ್ತಿಯ ನೈಸರ್ಗಿಕ ಆಮ್ಲಕ್ಷಾರೀಯ ಸಮತೋಲನವನ್ನು ಕೂಡ ಪೂರ್ವಸ್ಥಿತಿಗೆ ತರುತ್ತದೆ.
- ಮದರಂಗಿ ಫಂಗಸ್, ಬ್ಯಾಕ್ಟೀರಿಯಾ ವಿರೋಧಿ.
- ಬಲಿಷ್ಠವಾದ ಕೂದಲನ್ನು ಬಯಸುವವರೂ ಮದರಂಗಿ ಮೊರೆ ಹೋಗಬಹುದು. ಇದು ಕೂದಲನ್ನು ಬಲಿಷ್ಠಗೊಳಿಸಲು ಮತ್ತು ಉತ್ತಮವಾಗಿ ಬೆಳೆಯಲು ಸಹಾಯ ಮಾಡುವ ಅನೇಕ ಗುಣಗಳನ್ನು ಹೊಂದಿದೆ. ಕೂದಲ ಬೇರಿನವರೆಗೆ ಪ್ರವೇಶಿಸಿ ಕೂದಲನ್ನು ದೃಢವಾಗಿಸುತ್ತದೆ.
- ತುಂಬಾ ತೆಳು ಕೂದಲನ್ನು ಹೊಂದಿರುವವರು ಮತ್ತು ಕಡಿಮೆ ಕೂದಲುಳ್ಳವರು ಮದರಂಗಿ ಬಳಸಿ. ಇದು ಕೂದಲಿನ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮದರಂಗಿ ಅಂಶದ ಸಂಗ್ರಹಣೆ ಕೂದಲ ಎಳೆಯನ್ನು ದಪ್ಪವಾಗಿಸುವುದರ ಮೂಲಕ ಕೂದಲ ಮೊತ್ತವನ್ನು ಜಾಸ್ತಿಯಾಗಲು ಸಹಾಯ ಮಾಡುತ್ತದೆ.
- ಮದರಂಗಿ ಕೂದಲಿನ ಕ್ಯುಟಿಕಲ್ ಅನ್ನು ಹೊಳಪಾಗಿಸಿ ನೈಸರ್ಗಿಕ ಮೃದುತ್ವವನ್ನು ನೀಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

