ಆರ್ಟ್ ಇಷ್ಟ!
ಮನೆಯ ಸೌಂದರ್ಯ ಹೆಚ್ಚಿಸಲು, ಮನೆಗೆ ತಕ್ಕಂತೆ ಅಲಂಕಾರ ಮಾಡುವುದು ಒಂದು ವಿಶಿಷ್ಟ ಕಲೆ. ಆದರೆ, ಅಂಥ ಕಲೆ ಎಲ್ಲರಿಗೂ ಬರಲ್ಲ. ಬಲ್ಲವರು ...
ಮನೆಯ ಸೌಂದರ್ಯ ಹೆಚ್ಚಿಸಲು, ಮನೆಗೆ ತಕ್ಕಂತೆ ಅಲಂಕಾರ ಮಾಡುವುದು ಒಂದು ವಿಶಿಷ್ಟ ಕಲೆ. ಆದರೆ, ಅಂಥ ಕಲೆ ಎಲ್ಲರಿಗೂ ಬರಲ್ಲ. ಬಲ್ಲವರು ಮನೆಗೆ ಅಂದ ಮಾಡದೇ ಇರಲ್ಲ. ಹೀಗಾಗಿ ಮನೆಯನ್ನು ಅಂದಗೊಳಿಸಲು ವೈವಿಧ್ಯಮಯ ಅಲಂಕಾರಿಕ ವಸ್ತುಗಳನ್ನು ತಯಾರಿಸುವಲ್ಲಿ ವಿನೂತನ ಪ್ರಯೋಗಗಳು ನಿತ್ಯ ನಡೆಯುತ್ತಲೇ ಇವೆ.
ಸಾಮಾನ್ಯವಾಗಿ ಸೂರಿನ ಅಲಂಕಾರಕ್ಕೆ ಪಳ ಪಳ ಹೊಳೆಯುವ ವಸ್ತುಗಳು ಸೂಕ್ತ. ಸಾಮಾನ್ಯರೂ ಗೃಹಾಲಂಕಾರಕ್ಕೆ ಇಂಥ ವಸ್ತುಗಳನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಮನೆಯ ಆಂತರಿಕ ವಿನ್ಯಾಸಕರು ಕೂಡ ಸಿಂಪಲ್ ಮಂತ್ರವನ್ನೇ ಜಪಿಸುತ್ತಿದ್ದಾರೆ. ಒಂದು ಸಾಮಾನ್ಯ ವಸ್ತುವಿನ ಚೂರುಗಳನ್ನು ಬಳಸಿ, ಅವುಗಳಿಗೆ ಕಲೆ ಮತ್ತು ವಿನ್ಯಾಸಗಳ ಮೂಲಕ ವಿನೂತನ ರೂಪ ನೀಡುವ ಕೆಲಸವನ್ನು ಅನೇಕ ವಿನ್ಯಾಸಕರು ಮಾಡುತ್ತಿದ್ದಾರೆ.
ಅಂಥ ವಿನ್ಯಾಸಕಾರರ ಪೈಕಿ ಬ್ರಿಟನ್ ಮೂಲದ ಅಲೆಕ್ಸ್ ಡೇವಿಸ್ ಕೂಡ ಒಬ್ಬ. ಕಲಾ ಮತ್ತು ವಿನ್ಯಾಸಗಾರರಾದ ಡೇವಿಸ್ ಒಂದು ಸರಳ ವಸ್ತುವಿಗೆ ಹೇಗೆ ವೈವಿಧ್ಯಮಯ ರೂಪ ನೀಡುಬಹುದು ಎಂದು ತೋರಿಸಿಕೊಟ್ಟಿದ್ದಾನೆ. ಈತನ ಪ್ರಕಾರ, ಸರಳ ವಿನ್ಯಾಸವೂ ಅದ್ಭುತ ಕಲೆ. ಚಿತ್ರಕಲೆ ಮತ್ತು ವಿನ್ಯಾಸ ಎರಡೂ ಒಂದಕ್ಕೊಂದು ಹೊಂದಿಕೊಂಡಿರುವ ಕ್ಷೇತ್ರ. ಈ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದು ಡೇವಿಸ್‌ಗೆ ತುಂಬಾ ಅಚ್ಚುಮೆಚ್ಚು.
ಉಕ್ಕಿನ ಸರಕುಗಳನ್ನು ಪ್ರಯೋಗಕ್ಕೆ ಒಳಪಡಿಸಿ ಅವುಗಳಿಂದ ಪೀಠೋಪಕರಣಗಳನ್ನು ತಯಾರಿಸುವುದು. ಜೊತೆಗೆ ತೆಳುವಾದ ಉಕ್ಕಿನ ವಸ್ತುವಿಗೆ ವಿಶಿಷ್ಟ ಆಕಾರ, ಅವುಗಳಿಗೆ ಬಣ್ಣ ಬಳಿದು ಮನೆಗೆ ಅಂದಮಾಡುವಷ್ಟು ಚತುರ ಈತ.
ಡೇವಿಸ್ ಬಿಳಿ ಬಣ್ಣದ, ಪ್ರತಿಬಿಂಬ ಬೀರುವ, ಸಾಧಾರಣ ವಸ್ತುಗಳಿಂದಲೇ ಅಲಂಕಾರ ಮಾಡುವ ಬಗೆಗೆ ಹೆಚ್ಚು ಮಾರುಹೋಗುತ್ತಿದ್ದರು. ಅಷ್ಟೇ ಅಲ್ಲ, ತಾವೇ ಖುದ್ದಾಗಿ ಇಂಥ ವಸ್ತುವನ್ನೇ ಬಳಸಿಕೊಂಡು ಅಲಂಕಾರಿಕ ವಸ್ತುಗಳಿಗೆ ರೂಪ ನೀಡುತ್ತಿದ್ದರು. ಈ ರೀತಿ ತಯಾರಿಸಿದ ವಸ್ತುಗಳಿಗೆ 'ಇಂಡಿಯಾ ಮಾಡರ್ನ್' ಎಂಬ ಸಾಂಕೇತಿಕ ಹೆಸರು ನೀಡಲಾಗಿದೆ. ಲಲಿತಕಲೆ ಹಾಗೂ ಚಿತ್ರಕಲೆ ಮೂಲಕ ಆಕೃತಿಯನ್ನೂ ಮಾಡುತ್ತಾರೆ ಡೇವಿಸ್. ಭಾರತದ ಹೆದ್ದಾರಿಗಳಲ್ಲಿ ಮೂರ್ತಿ ಕೆತ್ತುವ ಶಿಲ್ಪಕಲೆಗಳೇ ಇವರ ಕಲೆಗೆ ಸ್ಫೂರ್ತಿ.
ಮತ್ತೊಬ್ಬ ವಿನ್ಯಾಸಗಾರ ನಿತಿನ್‌ಕೊಹ್ಲಿ. ಈತ ಉದ್ಯಮಿ ಹಾಗೂ ವಿನ್ಯಾಸಗಾರ ಡೈಟರ್ ರಾಮ್ ಅವರ 'ಕಡಿಮೆ ಸಲಕರಣೆಯಲ್ಲಿಯೇ ಉತ್ತಮ ಕಲೆ' ಎಂಬ ಸಿದ್ಧಾಂತಕ್ಕೆ ಹೆಚ್ಚು ಪ್ರಭಾವಿತನಾಗಿದ್ದ. ಕೊಹ್ಲಿ ಮೂಲತಃದೆಹಲಿಯವ. ವಿನ್ಯಾಸದಲ್ಲಿ ಆಸಕ್ತಿ ತಳೆದಿರುವ ನಿತಿನ್‌ರಿಂದ ಮೂಡಿಬಂದ ಒಂದೊಂದು ಆಕೃತಿ ವಿನ್ಯಾಸಗಳು ಅದ್ಭುತ ರೂಪತಳೆದಿವೆ. ಹಿತ್ತಾಳೆ ವಸ್ತುವನ್ನು ಬಳಸಿ, ಹೆಚ್ಚು ವೈವಿಧ್ಯಮಯ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದರಲ್ಲಿ ಈತ ನಿಪುಣ. ಹಿತ್ತಾಳೆ ವಸ್ತುವಿಗೆ ಚಿತ್ರಕಲೆ ಮೂಲಕ ವಿನ್ಯಾಸಗೊಳಿಸುತ್ತಾರೆ. ಇವು ಹೆಚ್ಚು ಬೇಡಿಕೆಯಲ್ಲಿರುವ ವಸ್ತುಗಳು ಕೂಡ.
ಒಂದು ವಿನ್ಯಾಸವು ವಿಕಾಸಕ್ಕೆ ದಾರಿ ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತುತ ಯುಗಕ್ಕೆ ಅಗತ್ಯವಾಗಿರುವ ಶೈಲಿಯನ್ನು ಬಳಸಿಕೊಂಡು ಅಲಂಕಾರಿಕ ವಸ್ತು ರೂಪಿಸುವಲ್ಲಿ ಎತ್ತಿದ ಕೈ ನಿತಿನ್‌ದು. ಒಂದು ಕೊಠಡಿ ಅಲಂಕೃತಗೊಳಿಸಲು ಉತ್ತಮ ಅಲಂಕಾರಿಕ ವಸ್ತುಗಳಿಂದ ಮಾತ್ರ ಸಾಧ್ಯ ಎನ್ನುವುದು ನಿತಿನ್ ವಾದ.
- ಪಾವನ ಎಚ್.ಎಸ್.
pavanahsgowda@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

