ವಿಶ್ವದ ಅತಿ ಪ್ರೀತಿಸುವ ಗಂಡ!

ಈ ಪ್ರಪಂಚದಲ್ಲಿ 'ಅತಿಹೆಚ್ಚು ಪ್ರೀತಿಸುವ ಗಂಡ ಯಾರು?' ಅಂತ ಕೇಳಿದರೆ, ಬಹುತೇಕ ಹೆಂಗಸರು 'ನನ್ನ ಗಂಡ ಅಂತೂ ಅಲ್ಲ' ಅನ್ನಬಹುದು! ಆದರೆ, ಮಾರ್ಗೊಟ್ ಎಂಬ ಅಮೆರಿಕದ ಹೆಂಗಸು 'ನನ್ನ ಗಂಡ ಪಾಲ್ ಬ್ರಾಕ್‌ಮನ್'ಗೆ ಆ ಬಿರುದು ಕೊಡಬೇಕು ಅಂತ ಪಟ್ಟು ಹಿಡಿಯುತ್ತಾಳೆ. ಏಕೆ ಗೊತ್ತಾ? ಈ 56 ವರ್ಷದ ದಾಂಪತ್ಯದಲ್ಲಿ ಬ್ರಾಕ್‌ಮನ್ ಆಕೆಗೆ ಕೊಡಿಸಿರುವುದು ಬರೋಬ್ಬರಿ 55,000 ಡ್ರೆಸ್‌ಗಳನ್ನು! ಮಾರ್ಗೊಟ್ ಶಾಪಿಂಗ್ ಪ್ರಿಯೆ ಅಂತೆ. ಒಮ್ಮೆ ಶಾಪಿಂಗ್‌ಗೆ ಹೋದರೆ 30 ಥರದ ಡ್ರೆಸ್‌ಗಳನ್ನು ಕೊಡಿಸುತ್ತಿದ್ದನಂತೆ! ಕೇವಲ ಡ್ರೆಸ್ಸೊಂದೇ ಅಲ್ಲ, ಆಕೆ ಕೇಳಿದ್ದನ್ನೆಲ್ಲ ಇಂವ ಕೊಡಿಸಿದ್ದಾನೆ. 'ಹೆಂಡತಿ ಆಸೆಗಳನ್ನು ಪೂರೈಸುವುದೇ ನನ್ನ ಜೀವಮಾನದ ಸಾಧನೆ' ಎನ್ನುತ್ತಾನೆ ಬ್ರಾಕ್‌ಮನ್. ಈಗ್ಲಾದ್ರೂ ನಿಮ್ಮ ಗಂಡನಿಗೆ ಕಿವಿ ಹಿಂಡಿ ಬುದ್ಧಿ ಹೇಳ್ತೀರಲ್ವಾ?
ಹೆಂಡ್ತಿಯ ಆಕಾರವನ್ನೇ ಬದಲಿಸಿದ!
'ಪರ್ಫೆಕ್ಟ್ ಹೆಂಡತಿ'ಯನ್ನು ಪಡೆಯುವುದು ಎಲ್ಲ ಗಂಡಂದಿರ ಕನಸು. ಅದೂ ವಿಶೇಷವಾಗಿ ಆಕೆಯ ದೇಹಸಿರಿ ಬಗ್ಗೆ ಆತ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ತಾನೆ. ಈ ಕಾರಣಕ್ಕಾಗಿಯೇ ಬ್ರೆಜಿಲ್‌ನ ಡಾ. ಮ್ಯಾಟ್ಲಾಕ್ ಎಂಬ ಪಾಸ್ಟಿಕ್ ಸರ್ಜರಿ ತಜ್ಞ ತನ್ನ ಹೆಂಡತಿಯನ್ನು ಚಿಕಿತ್ಸೆ ಮೂಲಕ ತನ್ನಿಷ್ಟದಂತೆ ಸಂಪೂರ್ಣವಾಗಿ ಬದಲಿಸಿದ್ದಾನೆ. ಹೆಂಡತಿಗೆ 39 ವರ್ಷವಾಗುತ್ತಿದ್ದಂತೆಯೇ ಆಕೆ ಅಂಗಾಂಗಳೆಲ್ಲ ಆಕರ್ಷಣೆ ಕಳೆದುಕೊಂಡವಂತೆ. ಗಂಡ 6 ತಿಂಗಳ ಭರ್ಜರಿ ಚಿಕಿತ್ಸೆ ನೀಡಿ ಆಕೆಯ ಸ್ವರೂಪವನ್ನೇ ಬದಲಿಸಿದ. ಎಂತೆಂಥ ಗಂಡಂದಿರು ಇರ್ತಾರಪ್ಪಾ!
ಸಖತ್ ಹೊಟ್ಟು ಮಗಾ!
ಇಂದು ತಲೆಹೊಟ್ಟು ಮಾಲಿನ್ಯದ ಜಗತ್ತು ಕೊಟ್ಟ ಗಿಫ್ಟು. ವಿಟಮಿನ್ 'ಎ', 'ಬಿ', 'ಸಿ' ಕೊರತೆಯೇ ಈ ಹೊಟ್ಟಿಗೆ ಮುಖ್ಯ ಕಾರಣ. ಕಿತ್ತಳೆ, ನಿಂಬೆ, ಕ್ಯಾರೆಟ್, ಗೆಣಸು, ಬೀನ್ಸು, ಬಾಳೆಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ಈ ಹೊಟ್ಟನ್ನು ನಿಮ್ಮ ಕೂದಲಿನಿಂದ ಹೊರಗೋಡಿಸಬಹುದು.
ತುಟಿಪಿಟಿಕೆನ್ನದೆಕೇಳೇ...
ಹುಡುಗಿಯ ತುಟಿಯಲ್ಲಿ ಜೇನಿದೆ ಅಂತ ಕವಿ ಭಾವುಕನಾಗಿ ವರ್ಣಿಸಬಹುದು. ಆದರೆ, ಜೇನಿನಿಂದಲೇ ತುಟಿಗೊಂದು ಕಳೆ ಸಿಗುವುದೆಂಬ ಸೌಂದರ್ಯದ ಗುಟ್ಟು ಆತನಿಗೆ ಗೊತ್ತಿಲ್ಲ. ಕೇಳಿ ಇಲ್ಲಿ... ಕವಿಗೂ ಗೊತ್ತಿಲ್ಲದ ಗುಟ್ಟು...
ಲಿಪ್‌ಸ್ಟಿಕ್ ಹಚ್ಚಿದ ಮೇಲೆ ಅದರ ಮೇಲೆ ತುಸು ಜೇನು ಸವರಿ, ಎಷ್ಟು ಪಳಪಳ ಹೊಳೆಯುತ್ತದೆ ನೋಡಿ.
ಆಲೀವ್ ಎಣ್ಣೆ ಜತೆ ಜೇನನ್ನು ಬೆರೆಸಿ ತುಟಿಗೆ ಲೇಪಿಸಿದರೆ ಅಕಾಲಿಕ ನೆರಿಗೆ ಕಾಡದು.
ಒಂದು ಚಮಚ ಜೇನಿಗೆ 2 ಹನಿ ಬಾದಾಮಿ ಎಣ್ಣೆಯನ್ನು ಬೆರೆಸಿ ಲೇಪಿಸಿದರೆ, ತುಟಿಯ ಕಾಂತಿ ಹೆಚ್ಚುವುದು.
ಜೇನುತುಪ್ಪವನ್ನು ತುಟಿಗೆ ಹಚ್ಚುವುದರಿಂದ ಒಣತುಟಿ ಸಮಸ್ಯೆ ನಿವಾರಣೆಯಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


