ರೈನ್ ಶೈನ್

ಮಳೆಗಾಲದಲ್ಲಿ ತ್ವಚೆ ರಕ್ಷಿಸುವುದೊಂದು ಸವಾಲೇ ಸರಿ. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವ ಕಾರಣದಿಂದ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳುವುದು ಅತಿ ಅವಶ್ಯಕ. ಮಳೆಗಾಲದಲ್ಲಿ ಬಳಸುವ ಸಾಬೂನು, ಕ್ರೀಮ್, ಮೇಕಪ್ ವಸ್ತುಗಳೆಲ್ಲ ತ್ವಚೆಗೆ ನೇರವಾಗಿ ಸಂಬಂಧಿಸಿದವುಗಳು.
ತ್ವಚೆಯ ಕಾಂತಿಗೆ
ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಸಾಬೂನುಗಳು ರಾಸಾಯನಿಕಗಳಿಂದ ಕೂಡಿರುತ್ತವೆ. ಇದು ತ್ವಚೆಯ ತೇವಾಂಶವನ್ನು ಹೀರಿ ಒಣದಾಗಿಸುತ್ತದೆ. ಈ ರಾಸಾಯನಿಕಗಳು ನೀರಿನಲ್ಲಿ ತೊಳೆದುಹೋಗದೆ ಮುಖದ ಸೂಕ್ಷ್ಮ ರಂಧ್ರಗಳಲ್ಲಿ ಸೇರಿಕೊಂಡು ಮೊಡವೆ, ಅಲರ್ಜಿ, ತುರಿಕೆ, ಬಿಳಿಪ್ಯಾಚ್ ಮುಂತಾದ ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ರಾಸಾಯನಿಕರಹಿತ ಸಾಬೂನು ಬಳಸುವುದು ಒಳ್ಳೆಯದು. ಅಂದರೆ ಅಲೋವೆರಾ, ಶ್ರೀಗಂಧ, ಬೇವು, ಚಂದನಗಳುಳ್ಳ ಸಾಬೂನು ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಫೇಸ್‌ವಾಶ್ ಕೂಡ ಪ್ರಚಲಿತದಲ್ಲಿದೆ. ಅದರ ಸರಿಯಾದ ಆಯ್ಕೆ ಕೂಡ ಮುಖ್ಯ. ಹಣ್ಣುಗಳು ಅದರ ರಸ ಅಥವಾ ನಿಂಬೆ ಅಂಶವಿರುವ ಫೇಸ್‌ವಾಶ್ ಸಹಕಾರಿಯಾಗಿರುತ್ತದೆ. ಇದು ಸೌಮ್ಯವಾಗಿದ್ದು ಮುಖಕ್ಕೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟು ಮಾಡುವುದಿಲ್ಲ.
ರೋಸ್‌ವಾಟರ್
ರೋಸ್‌ವಾಟರ್ ತ್ವಚೆಯ ಕಾಂತಿಯನ್ನು ಇಮ್ಮಡಿಗೊಳಿಸಲು ವರದಾನವಾಗಿದೆ. ರೋಸ್‌ವಾಟರ್ ಮನೆಯಲ್ಲಿಯೇ ತಯಾರಿಸಬಹುದು ಅಥವಾ ಮಾರುಕಟ್ಟೆಯಿಂದ ಖರೀದಿಸಬಹುದು. ಪ್ರತಿದಿನ ಅವಶ್ಯಕತೆಗನುಗುಣವಾಗಿ ರೋಸ್‌ವಾಟರನ್ನು ಹತ್ತಿಯಿಂದ ಮುಖಕ್ಕೆ ಲೇಪಿಸಿ ನಂತರ ನೀರಿನಿಂದ ತೊಳೆಯಬೇಕು. ಈ ರೀತಿ ಮಾಡುವುದರಿಂದ ಮುಖದ ಸೂಕ್ಷ್ಮ ರಂಧ್ರಗಳಲ್ಲಿ ಸೇರ್ಪಡೆಯಾದ ದೂಳು, ಕಲ್ಮಶ ನಿವಾರಣೆಯಾಗಿ ಚರ್ಮ ಕಾಂತಿಯುಕ್ತವಾಗುವುದಲ್ಲದೆ ಚರ್ಮ ಮೃದುವಾಗುವುದು.
ಮಾಯಿಶ್ಚರೈಸರ್
ತ್ವಚೆಯನ್ನು ನಯವಾಗಿಸಲು ಹದವಾಗಿ ಚರ್ಮವನ್ನು ಮಾಯಿಶ್ಚರೈಸ್ ಮಾಡುವುದು ಅಗತ್ಯ. ವಾತಾವರಣದಲ್ಲಿ ತೇವಾಂಶ ಹೆಚ್ಚಿದ್ದರೂ ಮುಖ, ಕೈ, ಕಾಲುಗಳನ್ನು ಮೃದುವಾಗಿಡುವುದು ಅತ್ಯವಶ್ಯಕ. ಆದ್ದರಿಂದ ಅಲೋವೆರಾ ಇರುವ ಯಾವುದಾದರೂ ಸೌಮ್ಯ ಮಾಯಿಶ್ಚರೈಸರ್ ಬಳಸುವುದು ಉತ್ತಮ. ಕೆಲವೊಮ್ಮೆ ಮೈ ಚರ್ಮ ಒಣಗಿ ಬೆಳ್ಳಗಾಗುವುದು. ಈ ಸಂದರ್ಭದಲ್ಲಿ ಮಾಯಿಶ್ಚರೈಸರ್ ಬಳಸುವುದರಿಂದ ಚರ್ಮ ಮೊದಲಿನಂತಾಗುವುದು. ಕೋಲ್ಡ್‌ಕ್ರೀಮ್ ಕೂಡ ಬಳಸಬಹುದು.
- ಸುಶ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


