ಮಹಿಳೆ-ಮನೆ-ಬದುಕು

ಕೂದಲಿಗೆ ಕ್ಲಿಪ್ಪು!

ಅಡಿಯಿಂದ ಮುಡಿಯವರೆಗೆ ಮೇಕಪ್ ಮಾಡಿಕೊಂಡಿದ್ದರೂ ಕೂದಲು ನೆಟ್ಟಗಿಲ್ಲದಿದ್ದರೆ ವಿಕಾರವಾಗಿ ಕಾಣುತ್ತದೆ...

Published On :

ಹೌದು. ಅಡಿಯಿಂದ ಮುಡಿಯವರೆಗೆ ಮೇಕಪ್ ಮಾಡಿಕೊಂಡಿದ್ದರೂ ಕೂದಲು ನೆಟ್ಟಗಿಲ್ಲದಿದ್ದರೆ ವಿಕಾರವಾಗಿ ಕಾಣುತ್ತದೆ. ಇತ್ತೀಚೆಗೆ ಟ್ರೆಂಡ್ ಬದಲಾಗಿದ್ದರೂ ಕೂದಲಿನ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಕಾಳಜಿ ವಹಿಸಲಾಗುತ್ತಿದೆ. 'ಸೌಂದರ್ಯಪ್ರಜ್ಞೆ' ಇರುವವರಿಗೆ ಸಮಯವೇ ಸಾಲುವುದಿಲ್ಲ.
ತರಾತುರಿಯಲ್ಲಿ ಹೊರಡುವವರಿಗಾಗಿ ಕಡಿಮೆ ಅವಧಿಯಲ್ಲಿ ಕೂದಲು ವಿನ್ಯಾಸಕ್ಕೆ 'ಕ್ಲಿಪ್ ಸ್ಟೈಲ್‌' ಸಹಾಯಕ. ಕ್ಲಿಪ್ ಆನ್ ಫ್ರಿಂಜಸ್, ಪೋನಿ ಟೇಲ್ ಎಕ್ಸ್‌ಟೆನ್ಷ್ ಮತ್ತು ಹೇರ್‌ಹೈಲೈಟ್ ಎಂಬ ಮೂರು ವಿಧಗಳ ಮೂಲಕ ಕೇವಲ 'ಕ್ಲಿಪ್‌'ನಲ್ಲೇ ಕೂದಲು ವಿನ್ಯಾಸಗೊಳಿಸಿಕೊಳ್ಳಬಹುದು.
ಕ್ಲಿಪ್- ಆನ್ ಫ್ರಿಂಜಸ್‌ನಲ್ಲಿ ಹಲವು ವಿಧಗಳಿವೆ. ನಿಮ್ಮ ಅಭಿರುಚಿ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಇವು ದೊರೆಯುತ್ತವೆ. ನೇರ ಬ್ಯಾಂಗ್ಸ್, ನೀಳ ಕೂದಲಿನ ರೀತಿ ಬ್ಯಾಂಗ್ಸ್, ಕೆಳಗೆ ಹಾಗೂ ಮೇಲೆ ವಿಂಗಡಿಸಿದ ಅಕಾರದ ಕೂದಲು ಶೈಲಿ ಸೃಷ್ಟಿಸಬಲ್ಲ ಕ್ಲಿಪ್‌ಗಳು ಲಭ್ಯ ಇವೆ. ಕೂದಲಿಗೆ ಹಾಕಿದ ಫ್ರಿಂಜಸ್ ನಿಮ್ಮ ಮುಖದ ಭಾಗಕ್ಕೆ ಸ್ವಲ್ಟ ಮಟ್ಟಿಗೆ ಜೋತು ಬಿದ್ದು ನಿಮ್ಮ ಚೆಲುವನ್ನು ಇಮ್ಮಡಿಗೊಳಿಸುತ್ತದೆ.
ಪೋನಿ-ಟೇಲ್ ಎಕ್ಸ್‌ಟೆನ್ಷ್‌ನಲ್ಲಿ ನಿಮ್ಮ ಆಯ್ಕೆಗೆ ತಕ್ಕಂಥ ಹೆಂಚ್‌ಗಳಿವೆ. ಪೋನಿಟೆಲ್ಸ್, ಪ್ಲೇಟ್ಸ್, ಪೆಟೈಟ್ ಮತ್ತು ಲಾಂಗ್ ಪೋನಿಸ್ ಮತ್ತಿತರ ಶೈಲಿಗಳಿವೆ. ಈ ಪೋನಿಟೇಲ್ಸ್ ಎಕ್ಸ್‌ಟೆನ್ಷನ್ನು ವಧುವಿನ ಸಿಂಗಾರಕ್ಕೆ ಬಳಸಬಹುದು.
ಹೇರ್ ಹೈಲೈಟ್ ಎಕ್ಸ್‌ಟೆನ್ಷ್‌ನಲ್ಲಿ ಸ್ಥಳದಲ್ಲಿಯೇ ಕೂದಲನ್ನು ಬ್ಲೀಚ್ ಮಾಡಿಕೊಳ್ಳುವ, ಕಲರ್ ಹಾಕಿಕೊಳ್ಳುವ ಅವಕಾಶವಿದೆ. ಇದರಲ್ಲಿ ಹೇರ್ ಟೆಕ್ಚರ್‌ಗೆ ಅನುಗುಣವಾಗಿ ವಿವಿಧ ಬಗೆಯ ಬಣ್ಣಗಳನ್ನು ಈ ಹೈಲೈಟ್ ಎಕ್ಸ್‌ಟೆನ್ಷನಲ್ಲಿ ಹಾಕಿಕೊಳ್ಳಬಹುದು.
ಸ್ಪರ್ಧಾತ್ಮಕ ಯುಗದಲ್ಲಿ ಸಮಯವೇ ಸಾಲುವುದಿಲ್ಲ. ಇದ್ದ ಕಡಿಮೆ ಅವಧಿಯಲ್ಲಿ ನೀಟಾಗಿ ಮೇಕಪ್ ಮಾಡಿಕೊಳ್ಳುವುದು ಕೂಡ ಸವಾಲು. ಇದಕ್ಕಾಗಿಯೇ ಕ್ಲಿಪ್ ಸ್ಟೈಲ್ ಹೆಚ್ಚು ಪ್ರಸ್ತುತವಾಗಿದೆ. ಇದಕ್ಕೇನು ಹೆಚ್ಚು ವೆಚ್ಚ ಮಾಡಬೇಕಿಲ್ಲ ಎನ್ನುತ್ತಾರೆ ಬೆಂಗಳೂರಿನ ಹೇರ್‌ಲೈನ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ಬಾನಿ ಆನಂದ್. ಹೆಚ್ಚಿನ ಮಾಹಿತಿಗೆ ದೂ. 080- 41131931 ಸಂಪರ್ಕಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.