ಚಿತ್ತಾರಾಕರ್ಷಕ
ನಿತ್ಯೋಪಯೋಗಿ ವಸ್ತುಗಳ ಮೇಲೆ ಅರಳಿದ ಜನಪ್ರಿಯ ಪುರಾತನ ಕಲೆಗಳು. ಇವನ್ನು ಮನೆಗೆ ಸುಂದರವಾಗಿ ಹೊಂದಿಕೊಳ್ಳುವಂತೆ...

ನಿತ್ಯೋಪಯೋಗಿ ವಸ್ತುಗಳ ಮೇಲೆ ಅರಳಿದ ಜನಪ್ರಿಯ ಪುರಾತನ ಕಲೆಗಳು. ಇವನ್ನು ಮನೆಗೆ ಸುಂದರವಾಗಿ ಹೊಂದಿಕೊಳ್ಳುವಂತೆ ಮಾಡಿದವರು ಅಮೆರಿಕದ ಕಲಾವಿದ ಹ್ಯಾಂಡ್ರಿ ವಾರ್ಹೊಲ್.
ಹ್ಯಾಂಡ್ರಿ ಇತ್ತೀಚಿನ ಟ್ರೆಂಡ್ಗೆ ತಕ್ಕಂತೆ ವಿವಿಧ ವಸ್ತುಗಳ ಮೇಲೆ ಚಿತ್ರಕಲೆ ರೂಪಿಸಿದ್ದಾರೆ. ಗೋಡೆಗಳು, ಪೀಠೋಪಕರಣಗಳು ಹಾಗೂ ಮನೆ ಬಳಕೆ ವಸ್ತುಗಳ ಮೇಲೆ ಗಾಢ ಬಣ್ಣಗಳ ಮೂಲಕ ರೂಪಿಸಿರುವ ಚಿತ್ರಗಳು ಹೆಚ್ಚು ಗಮನ ಸೆಳೆಯುವಂತೆ ಮಾಡಿದ್ದಾರೆ. ಈ ರೀತಿಯ ಚಿತ್ರಕಲೆಯು ಹೆಚ್ಚಾಗಿ ಕಾಲ್ಪನಿಕ ರೂಪದ್ದಾಗಿರುತ್ತದೆ. ಆದರೆ, ಹ್ಯಾಂಡ್ರಿ ವಾಸ್ತವ ಬದುಕಿಗೆ ಹತ್ತಿರಕ್ಕೆ ತಂದಿದ್ದಾರೆ. ಪ್ರಖ್ಯಾತ ವ್ಯಕ್ತಿಗಳ ಚಿತ್ರಗಳನ್ನು ಗಾಢ ಬಣ್ಣಗಳ ಮೂಲಕ ಆಕರ್ಷಕವಾಗಿ ರೂಪಿಸುವಲ್ಲಿ ಇವರದು ಪಳಗಿದ ಕೈ. ಸಾಂಸ್ಕೃತಿಕ ಕಲೆಯನ್ನು ಎತ್ತಿ ಹಿಡಿಯುವಲ್ಲಿ ಇವರ ಈ ಕಲೆ ಪ್ರಸಿದ್ಧಿ ಪಡೆದಿದೆ. ಜನಪದ ಕಲೆಗಳು, ಇತಿಹಾಸದ ಪುಟಗಳು, ರಸ್ತೆ ಬದಿಯ ಜೀವನ ಶೈಲಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳ ಮೂಲಕ ಅವರೇನೋ ಹೇಳಲು ಹೊರಟಿದ್ದಾರೆ ಅಂತನ್ನಿಸುತ್ತದೆ. ಇದೀಗ ಈ ಕಲೆಯು ಬೃಹತ್ ಉದ್ಯಮವಾಗಿ ಬೆಳೆಯುತ್ತಿದೆ. ಅಂದಹಾಗೆ, ಈ ಕಲೆ ಭಾವನೆಗಳನ್ನು ಅಭಿವ್ಯಕ್ತಿಸುತ್ತದೆ. ಮನೆಯ ಮೇಲೇ ವಿಶೇಷ ಗೌರವ ಮೂಡಿಸುತ್ತದೆ. ಕೇವಲ ಚಿತ್ರಕಲೆಯಿಂದಲೇ 'ಮನೆಯನ್ನು ನೋಡುತ್ತಲೇ ಇರೋಣ' ಎಂಬ ಅನಿಸಿಕೆ ಹುಟ್ಟುಹಾಕುತ್ತದೆ. ಹೀಗಾಗಿ ಕಲಾ ಉತ್ಪನ್ನಗಳು ಮತ್ತು ಮೋಹಕ ದೃಶ್ಯಗಳು ಚಿತ್ರರಸಿಕರನ್ನು ಹೆಚ್ಚು ಸೆಳೆಯುತ್ತಿದೆ.
ಹಾಸುಗಂಬಳಿ, ಚರ್ಮದ ಚೀಲ, ಗಾಜಿನ ಕಲಾಕೃತಿಗಳು ಹಾಗೂ ಅಡುಗೆಮನೆಯ ಬಳಕೆ ವಸ್ತುಗಳ ಮೇಲೂ ಗಾಢ ಬಣ್ಣಗಳ ಚಿತ್ರಕಲೆಗಳನ್ನು ರೂಪಿಸಬಹುದು. ಈ ಚಿತ್ರಕಲೆಗಳು ಮಕ್ಕಳನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಇಂಡಿಯಾ ಸರ್ಕಸ್ ವಿನ್ಯಾಸಗಾರ ಹಾಗೂ ಪಾಲುದಾರ ಮೆಹ್ತಾ, ಗಾಢ ಬಣ್ಣದ ಚಿತ್ರಕಲೆಯನ್ನು ಪೀಠೋಪಕರಣಗಳು, ಆಟಿಕೆಗಳ ಮೇಲೆ ರೂಪಿಸುವ ಮೂಲಕ ಮಕ್ಕಳನ್ನು ಆಕರ್ಷಿಸುತ್ತಿದ್ದಾರೆ.
ಮನೆಗಳ ಅಲಂಕಾರಕ್ಕೆ ಪೀಠೋಪಕರಣಗಳ ಮೇಲೆ ಹಾಗೂ ಬೆಳಕಿನ ಸಂಯೋಜನೆಗೆ ಸಹಾಯಕವಾಗುವಂತೆ ಗೋಡೆಗಳ ಮೇಲೂ ಚಿತ್ರಿಸಬಹುದು. ಈ ಬಗೆಯ ಚಿತ್ರಗಳನ್ನು ವಿನ್ಯಾಸಕಾರರು ವಿವಿಧ ಬಣ್ಣಗಳನ್ನು ಬಳಸಿಕೊಂಡು, ವಿಭಿನ್ನ ಶೈಲಿಯ ವಿನ್ಯಾಸ ಹಾಗೂ ಸಂಸ್ಕೃತಿಯನ್ನು ಪ್ರತಿನಿಧಿಸುವಂಥ ತಂತ್ರಗಳನ್ನು ಬಳಸಿಕೊಂಡು ವಿನ್ಯಾಸಗೊಳಿಸುತ್ತಾರೆ.
- ಪಾವನ ಎಚ್.ಎಸ್
pavanahsgowda@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


