ಮಹಿಳೆ-ಮನೆ-ಬದುಕು

ಬೇಬಿ ಕೇರ್

ಬೇಬಿ ಕೇರ್
Published On :

ಮಗುವಿನ ಜನನವಾಯಿತೆಂದೊಡನೆ ತಂದೆ ತಾಯಿ ತಮ್ಮ ಮನೆಯನ್ನು ಹೊಸ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಚಿಕ್ಕ ಮಕ್ಕಳು ಸಹಜ ಕುತೂಹಲಿಗಳು. ಹಾಗಾಗಿ ಮಗುವಿಗೆ ಮನೆಯ ಒಳಗೆ ಮತ್ತು ಹೊರಗೆ ಅಪಾಯವಾಗದ ಹಾಗೆ ನೋಡಿಕೊಳ್ಳಬೇಕಾಗುತ್ತದೆ. ಮಗುವಿನ ಜನನವಾಗುತ್ತಿದ್ದಂತೆ ಅದರ ಸುರಕ್ಷತೆಯ ಬಗ್ಗೆ ಆಲೋಚಿಸಬೇಕು.
ಮಗುವಿಗೆಂದೇ ದಿ ಕ್ರಾಡಿಲ್ ಡೆಲಿವರಿಂಗ್ ಜಾಯ್ ವಿಶೇಷವಾಗಿ ವಿನ್ಯಾಸ ಮಾಡಿದ ಕಾರ್ ಸೀಟ್ ಈಗ ಲಭ್ಯ. ಮಗು ಈ ಸೀಟಿನಲ್ಲಿ ತನ್ನ ತಲೆ ಮತ್ತು ಬೆನ್ನನ್ನು ಒರಗಿಸಿಕೊಂಡು ಆರಾಮವಾಗಿ ಮಲಗಬಹುದು. ಇದರಲ್ಲಿ ಮಗು ಸುರಕ್ಷಿತವಾಗಿರಬಹುದು. ಆದರೆ ಮಗುವಿಗೆ ಬಹಳ ಶಾಖವಾಗುತ್ತಿಲ್ಲ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಬೇಕಿದ್ದರೆ ಒಂದು ಪದರ ಬಟ್ಟೆಯನ್ನು ತೆಗೆದುಬಿಡಿ. ಸೀಟಿನಲ್ಲಿ ಮಲಗಿರುವ ಮಗು ಒಂದನ್ನೇ ಬಿಟ್ಟು ಹೋಗಬೇಡಿ. ಹೊರಗೆ ಹೋಗುವಾಗ ದೊಡ್ಡವರೊಬ್ಬರು ಸದಾಕಾಲ ಅದರೊಟ್ಟಿಗೆ ಇರಬೇಕು.
ಮನೆಯನ್ನು ಸುರಕ್ಷಿತವಾಗಿರಿಸಿ...

  •    ಮನೆಯಲ್ಲಿ ಬೀಳುವುದೇ ಅಪಘಾತಗಳಿಗೆ ಪ್ರಮುಖ ಕಾರಣ. ಮಗು ತೆವಳಲು ಆರಂಭಿಸಿದರೆ ಸಾಕು ಮನೆಗೆ ಒಂದು ಸುರಕ್ಷಿತವಾದ ಬಾಗಿಲನ್ನು ಮಾಡಿಸಿ. ಮಗು ಅದರಿಂದಾಚೆಗೆ ಹೋಗಲು ಸಾಧ್ಯವಾಗಬಾರದು. ಎಲ್ಲೆಲ್ಲಿಗೆ ಅದಕ್ಕೆ ಪ್ರವೇಶ ನಿಷಿದ್ಧವೋ ಅಲ್ಲೆಲ್ಲ ಬಾಗಿಲಿದ್ದರೆ ಉತ್ತಮ.
  •     ಮೇಜುಗಳು ಮತ್ತು ಪೀಠಗಳ ಅಂಚುಗಳಿಗೆ ಮೆತ್ತನೆಯದ್ದೇನಾದರೂ ಜೋಡಿಸಿದ್ದರೆ ಉತ್ತಮ. ಬೀಳುವುದನ್ನು ತಪ್ಪಿಸಲಾಗದಿದ್ದರೂ ಗಾಯದ ತೀವ್ರತೆ ಕಡಿಮೆ ಮಾಡಬಹುದು.
  •    ಹಗ್ಗ ಇಲ್ಲದ ಪರದೆಗಳು ಮತ್ತು ಮರೆಗಳನ್ನು ಆಯ್ಕೆ ಮಾಡಿ. ಹಾಗೊಂದು ವೇಳೆ ಹಗ್ಗವಿದ್ದರೆ ಮಗುವಿನ ಕೈಗೆ ಸಿಗದಷ್ಟು ಎತ್ತರವಿರಲಿ.
  •     ಗಾಜನ್ನು ಬಣ್ಣದ ಸ್ಟಿಕ್ಕರ್‌ಗಳಿಂದ ಮುಚ್ಚಿ. ಉದಾ: ಜಾರಿಸಬಲ್ಲ ಗಾಜಿನ ಬಾಗಿಲುಗಳು. ಆಗ ಮಗುವಿಗೆ ಅಲ್ಲಿ ಬಾಗಿಲಿದೆಯೆಂದು ತಿಳಿಯುತ್ತದೆ.
  •     ವಿದ್ಯುತ್ ಸಾಕೆಟ್‌ಗಳನ್ನು ಮುಚ್ಚಿಡಿ. ಮಗು ತಿಳಿಯದೆ ವಿದ್ಯುತ್ ಪ್ರವಹಿಸುವ ಏನನ್ನಾದರೂ ಅದರಲ್ಲಿ ತುರುಕಬಹುದು. ಮಕ್ಕಳ ಕೈಗೆ ಯಾವುದೇ ಉಪಕರಣಗಳು ಸಿಗದಿದ್ದರೆ ಅತ್ಯುತ್ತಮ.
  •     ಪೆನ್, ಕತ್ತರಿ, ಕಾಗದ ತೆರೆಯುವ ಸಾಧನ, ಸ್ಟೆಪ್ಲರ್, ಕಾಗದದ ಕ್ಲಿಪ್, ಚೂಪಾದ ಉಪಕರಣಗಳನ್ನು ಭದ್ರಪಡಿಸಿದ ಕಪಾಟುಗಳಲ್ಲಿಡಿ.
ಸಾಮಾನ್ಯ ಸುರಕ್ಷತೆ
  •     ಹೊಗೆ ಅಲಾರಂ- ಇದು ಎಲ್ಲೆಡೆ ಸಿಗುತ್ತದೆ ಮತ್ತು ಪ್ರತಿಯೊಂದು ಮನೆಗೂ ಅಗತ್ಯ.
  •     ಮೂಲೆಗಳನ್ನು ರಕ್ಷಿಸುವುದು- ಪೀಠೋಪಕರಣಗಳ ಹರಿತವಾದ ಮೂಲೆಗಳನ್ನು ಮುಚ್ಚುತ್ತದೆ ಮತ್ತು ತಲೆಗೆ ತೀವ್ರ ಪೆಟ್ಟಾಗದಂತೆ ರಕ್ಷಿಸುತ್ತದೆ.
  •     ಬಾಗಿಲು ದಢಾರನೆ ಮುಚ್ಚಿಕೊಳ್ಳದಂತೆ ರಕ್ಷಿಸುವುದು- ಬಾಗಿಲುಗಳ ಅಂಚನ್ನು ಸವರಿದರೆ ಪುಟ್ಟ ಬೆರಳುಗಳು ಇರುಕಿಕೊಳ್ಳುವುದಿಲ್ಲ.
  •     ಗಾಜಿನ ಸುರಕ್ಷತೆ ಫಿಲಂ- ಇದನ್ನು ಗಾಜಿನ ಹಾಳೆಗಳ ಮೇಲೆ ಹಚ್ಚಿದರೆ, ಗಾಜು ಒಡೆದರೂ ಸಣ್ಣಸಣ್ಣ ಚೂರುಗಳಾಗುವುದಿಲ್ಲ.
  •     ವಿಜಿಯೊ ಲಾಕ್- ಮಗು ಚಾಕೊಲೇಟು, ಬಿಸ್ಕತ್ತು ಇತ್ಯಾದಿಗಳನ್ನು ತುರುಕುವುದರಿಂದ ರಕ್ಷಿಸುತ್ತದೆ.
  •     ತಾತ್ಕಾಲಿಕ ಕಿಟಕಿ ಲಾಕುಗಳು- ಈ ಅಗ್ಗದ ಪ್ಲಾಸ್ಟಿಕ್ ಲಾಕುಗಳು ಕಿಟಕಿಗಳನ್ನು ಸುರಕ್ಷಿತವಾದ ಮಟ್ಟಿಗೆ ಮಾತ್ರ ತೆರೆಯಲು ಅವಕಾಶ ನೀಡುತ್ತವೆ.
  •     ಮಾತ್ರೆಗಳು, ಪೆನ್, ಅಪಾಯಕಾರಿ ವಸ್ತುಗಳಿಂದ ನಿಮ್ಮ ಮಗುವನ್ನು ರಕ್ಷಿಸಿ. ಮಗು ಈ ವಸ್ತುಗಳನ್ನು ಕೈಚೀಲದಿಂದ ಎಳೆದುಕೊಳ್ಳಬಹುದು. ಆದ್ದರಿಂದ ಬಂದೊಡನೆ ಅತಿಥಿಗಳ ವಸ್ತುಗಳನ್ನು ಮಗುವಿನ ಕೈಗೆ ಸಿಗದಂತೆ ಜಾಗೃತೆಯಾಗಿ ತೆಗೆದಿಡಿ.
ಆಹಾರದ ಅಲರ್ಜಿಗಳು
ಅತ್ಯಂತ ಅಲರ್ಜಿ ಆಹಾರಗಳು
ಮಕ್ಕಳು ಮತ್ತು ಸಾಕುಪ್ರಾಣಿಗಳು
ವ್ಯಾಕ್ಸಿನ್ ಅಲರ್ಜಿಗಳು
- ಡಾ. ಸುಮನಾ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.