ಪರ್ಫೆಕ್ಟ್ ಲುಕ್

ಮದುವೆಯ ಕ್ಷಣಗಳ ಪರಿಪೂರ್ಣ ಅಂದಕ್ಕೆ ಏನು ಮಾಡಿದರೂ ಕಡಿಮೆಯೇ... ಮದುವೆಯ ಸುಗ್ಗಿ ಬಂತೆಂದರೆ ಸಲೂನ್, ಬ್ಯೂಟಿಪಾರ್ಲರ್‌ಗಳಿಗೆ ಇನ್ನಿಲ್ಲದ ಬೇಡಿಕೆ ಪ್ರಾರಂಭವಾಗುತ್ತದೆ. ವಧು- ವರರಿಬ್ಬರೂ ಕೂದಲು ಮತ್ತು ಮುಖದ ಸೌಂದರ್ಯ ವೃದ್ಧಿಯತ್ತ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಾರೆ. ಬ್ಯೂಟಿ ಚಿಕಿತ್ಸೆಗಾಗಿ ಅಪಾಯಿಂಟ್‌ಮೆಂಟ್ ಪಡೆಯಲು ಜನ ಮುಗಿಬೀಳುತ್ತಾರೆ. ದಂತ ಮರುಜೋಡಣೆ ಸೇರಿದಂತೆ ಹಲ್ಲಿನ ಸಮಸ್ಯೆ ನಿವಾರಣೆಗೆ ದಂತ ತಜ್ಞರಿಗೆ ಕೂಡ ಈ ಸಮಯದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಕಣ್ಣಿನ ಸಣ್ಣಪುಟ್ಟ ತೊಂದರೆ ನಿವಾರಿಸಿಕೊಳ್ಳಲು, ಹುಬ್ಬುಗಳನ್ನು ಸರಿಪಡಿಸಿಕೊಳ್ಳಲು, ತುಟಿಗಳ ಅಂದ ಹೆಚ್ಚಿಸುವ ಚಿಕಿತ್ಸೆ ಮುಂತಾದವು. ಒಂದು ದಿನದ ಅಂದಕ್ಕೆ ಹೇರ್ ಟ್ರಾನ್ಸ್‌ಪ್ಲಾಂಟ್ ಮಾಡಿಸಿಕೊಳ್ಳಬೇಕೆನಿಸಿದರೂ ಶಸ್ತ್ರಚಿಕಿತ್ಸೆಯ ಭಯದಿಂದ ಹಿಂಜರಿಕೆಯುಂಟಾಗುತ್ತದೆ. ಆದರೆ ಈಗ ಶಸ್ತ್ರಚಿಕಿತ್ಸಾರಹಿತ, ಸರಳ ಪದ್ಧತಿಗಳು ಪ್ರಚಲಿತದಲ್ಲಿವೆ. ಇಂತಹ ಸರಳ ಪದ್ಧತಿಗಳ ಮೂಲಕ ಯುವ ಸಮುದಾಯ ಪರ್ಫೆಕ್ಟ್ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದಾಗಿದೆ.
ಇದಕ್ಕೆಲ್ಲ ಸೂಕ್ತ ಪರಿಹಾರ ನೀಡುತ್ತದೆ ಹೇರ್‌ಲೈನ್ ಇಂಟರ್‌ನ್ಯಾಶನಲ್. ಹೊಳೆಯುವ ಕೂದಲು ಪಡೆಯಲು, ಅಂದಗೆಡಿಸುವ ಮುಖದ ಕೂದಲು, ಮೊಡವೆ ಕಲೆಗಳ ನಿವಾರಣೆಗೆ, ದೇಹದ ಸಮತೋಲನ ಸೌಂದರ್ಯಕ್ಕೆ ಹೇರ್‌ಲೈನ್ ಇಂಟರ್‌ನ್ಯಾಶನಲ್‌ನಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸಾರಹಿತ ಪದ್ಧತಿಗಳು ಲಭ್ಯ. ಶಸ್ತ್ರಚಿಕಿತ್ಸೆ ಇಷ್ಟಪಡದ ವಧು ಮದುವೆ ಸಂದರ್ಭದಲ್ಲಿ ಕೂದಲನ್ನು ಉದ್ದವಾಗಿ ಬೆಳೆಸುವುದು ಕೂದಲಿಗೆ ಮತ್ತಷ್ಟು ಕೂದಲು ಜೋಡಣೆ, ವಿನ್ಯಾಸ ಮಾಡಿಸಿಕೊಳ್ಳುವುದೂ ಇದೆ. ಹೇರ್‌ಲೈನ್ ಅಂಥವರಿಗೆ ಹೇರ್ ಎಕ್ಸ್‌ಟೆನ್ಷನ್ ಮೂಲಕ ಕೂದಲು ಅಂದವಾಗಿ, ಆಕರ್ಷಕವಾಗಿ ಕಾಣಲು ನೆರವು ನೀಡುತ್ತದೆ.
'ಚಿಕಿತ್ಸೆ ಪಡೆಯುವವರ ದೇಹಪ್ರಕೃತಿಗೆ ಅನುಗುಣವಾಗಿ ನಾವು ಟ್ರೀಟ್‌ಮೆಂಟ್ ಕ್ರಮಗಳನ್ನು ಅನುಸರಿಸುತ್ತೇವೆ' ಎನ್ನುತ್ತಾರೆ ಹೇರ್‌ಲೈನ್ ವ್ಯವಸ್ಥಾಪಕ ಬಾನಿ ಆನಂದ್. ನವವಧುಗಳಿಗಾಗಿ ಹೇರ್‌ಲೈನ್ ಟ್ರೀಟ್‌ಮೆಂಟ್ ಪ್ಯಾಕೇಜ್ ಕೂಡ ಲಭ್ಯ. ಹೆಚ್ಚಿನ ವಿವರಗಳಿಗೆ - 080 25299002 or 23551177 or visit www.hairline.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


