ಸ್ತ್ರೀ ಮೆದುಳು ರಹಸ್ಯ
ಪುರುಷರು ಹೆಚ್ಚು ಬುದ್ಧಿವಂತರೋ, ಸ್ತ್ರೀಯರೋ? ಒಂದು ಮೆದುಳನ್ನು ನೋಡಿ, ಇದು ಪುರುಷನದೇ ಅಥವಾ ಸ್ತ್ರೀಯದೇ ಎಂದು ಹೇಳಲು ಸಾಧ್ಯವಿಲ್ಲ...

ಪುರುಷರು ಹೆಚ್ಚು ಬುದ್ಧಿವಂತರೋ, ಸ್ತ್ರೀಯರೋ? ಒಂದು ಮೆದುಳನ್ನು ನೋಡಿ, ಇದು ಪುರುಷನದೇ ಅಥವಾ ಸ್ತ್ರೀಯದೇ ಎಂದು ಹೇಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಮೆದುಳಿನಲ್ಲಿ ಯಾವ ವ್ಯತ್ಯಾಸವೂ ಕಾಣದು. ಇನ್ನು ಬುದ್ಧಿವಂತಿಕೆಯಲ್ಲಿ ಸ್ತ್ರೀ-ಪುರುಷರಿಬ್ಬರೂ ಸಮಾನರೇ. ಆದರೆ ಇತ್ತೀಚಿನ ಸಂಶೋಧನೆಯೊಂದು ಮೆದುಳಿನಿಂದ ಲಿಂಗ ಪತ್ತೆಹಚ್ಚಬಹುದು ಎಂಬುದನ್ನು ಸಾಬೀತುಪಡಿಸಿದೆ. ವಿಜ್ಞಾನಿಗಳು ಪತ್ತೆಹಚ್ಚಿರುವಂತೆ ಸ್ತ್ರೀ ಮೆದುಳು ಪುರುಷರ ಮೆದುಳಿಗಿಂತ ಗಾತ್ರದಲ್ಲಿ ಶೇ.8ರಷ್ಟು ಚಿಕ್ಕದಾಗಿರುತ್ತದೆ. ಆದರೆ ಅದರ ಕಾರ್ಯಕ್ಷಮತೆ ಪುರುಷರ ಮೆದುಳಿಗಿಂತ ಹೆಚ್ಚು. ಈ ಕಾರಣಕ್ಕೇ ಕೆಲವು ಕಾರ್ಯಗಳನ್ನು ಸ್ತ್ರೀಯರು ಪುರುಷರಿಗಿಂತ ಸಮರ್ಥವಾಗಿ ನಿರ್ವಹಿಸಬಲ್ಲರು. ಕೆಲವು ವಿಷಯ ಕೌಶಲಗಳಲ್ಲಿ ಸ್ತ್ರೀಯರು ಹೆಚ್ಚು ಸಮರ್ಥರಾಗಿದ್ದರೆ, ಇನ್ನು ಕೆಲವದರಲ್ಲಿ ಪುರುಷರು ಹೆಚ್ಚು ಸಮರ್ಥರು. ಕ್ಷೇತ್ರ ವೀಕ್ಷಣೆ. ನಮ್ಮ ಮುಂದಿರುವ ಭೂಪಟ ನಕ್ಷೆಯ ಸೂಕ್ಷ್ಮ ವಿವರಗಳನ್ನು ಗಮನಿಸುವುದರಲ್ಲಿ ಸ್ತ್ರೀಯರಿಗಿಂತ ಪುರುಷರು ಹೆಚ್ಚು ಸಮರ್ಥರು. ಬೇಗ ಬೇಗ ಎಡಬಲಗಳನ್ನು ತೋರಿಸುವುದರಲ್ಲಿ ಪುರುಷರು ಸಮರ್ಥರು. ಸ್ತ್ರೀಯರಿಗೆ ಭಾಷೆಯ ಮೇಲೆ ಪ್ರಬಲವಾದ ಹಿಡಿತವಿರುತ್ತದೆ. ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳು ಬೇಗ ಮಾತು ಕಲಿಯುತ್ತಾರೆ. ಹಾಗೇ ಪಟಪಟನೆ ಮಾತಾಡಬಲ್ಲರು. ಹೊಸ ಭಾಷೆಗಳನ್ನು ಕಲಿಯುವುದು ಸ್ತ್ರೀಯರಿಗೆ ಸುಲಭ. ಬೆರಳುಗಳ ಸೂಕ್ಷ್ಮ ಚಲನೆ ಸ್ತ್ರೀಯರ ಕೌಶಲ. ಕಸೂತಿ, ಹೆಣಿಗೆ, ಕರಕುಶಲ ಕಲೆಗಳು, ಚಿತ್ರಕಲೆ ಅವರಿಗೆ ಬಹುಬೇಗ ಸಿದ್ಧಿಸುತ್ತದೆ. ಕಾಗುಣಿತ ಅಕ್ಷರಗಳನ್ನು ನಿಖರವಾಗಿ ಗುರುತಿಸುವವರು ಸ್ತ್ರೀಯರು. ತೊದಲು, ಬಿಕ್ಕುವುದು, ಅನಗತ್ಯ ಚಟುವಟಿಕೆ, ಏಕಾಗ್ರತೆ ಕೊರತೆ ಹುಡುಗರಲ್ಲೇ ಹೆಚ್ಚು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


