ಸೈಟ್ ಸೈಟ್

ರಿಯಲ್ ಎಸ್ಟೇಟ್ ಈಗ ವಿಸ್ತಾರವಾಗಿ ಬೆಳೆಯುತ್ತಿರುವ ಕ್ಷೇತ್ರ. ಹೂಡಿಕೆಗೆ ಸೂಕ್ತವಾದ ವಲಯವೂ ಹೌದು. ಈಗ ಇಂಥ ಕ್ಷೇತ್ರದಲ್ಲಿ ನೂರಾರು ಡೆವೆಲಪರ್ಸ್‌ಗಳಿದ್ದಾರೆ. ಮನೆ ಕಟ್ಟಿಕೊಡುವ ಬಿಲ್ಡರ್‌ಗಳಿದ್ದಾರೆ. ಈಗ ಇದೇ ಕ್ಷೇತ್ರದಲ್ಲಿ ಎಎಸ್‌ಬಿ ಡೆವೆಲಪರ್ಸ್ ಮತ್ತು ಪ್ರಮೋಟರ್ಸ್ ಕೂಡ ರಾಜ್ಯದ ಹಲವೆಡೆ ನಿವೇಶನಗಳನ್ನು ಮಾರಾಟ ಮಾಡಲು ಮುಂದಾಗಿದೆ.
ರಾಜ್ಯದ ನಾನಾ ಭಾಗಗಳಲ್ಲಿ ಎಎಸ್‌ಬಿ ಅಭಿವೃದ್ಧಿಪಡಿಸುತ್ತಿರುವ ವಿಶ್ವದರ್ಜೆಯ ನಿವೇಶನಗಳು ನಾಗರಿಕರಿಗೆ ಲಭ್ಯವಿದೆ. ರಾಜ್ಯದ ನಾನಾ ಪ್ರದೇಶಗಳಲ್ಲಿ ನಿವೇಶನಗಳನ್ನು ಮಾರುತ್ತಿರುವ ಎಎಸ್‌ಬಿಯು, ಅತಿ ಕಡಿಮೆ ಅಂದರೆ, ರು. 449ರಿಂದ ನಿವೇಶನ ಮೌಲ್ಯ ಆರಂಭಗೊಳ್ಳಲಿದೆ. ಅಷ್ಟೇ ಅಲ್ಲ, ದೀಪಾವಳಿ ಹಬ್ಬಕ್ಕೆಂದೆ ವಿಶೇಷ ಆಫರ್‌ಗಳನ್ನೂ ನೀಡಿದೆ ಎಎಸ್‌ಬಿ ಡೆವೆಲಪರ್ಸ್.
ಒಟ್ಟು ಮೌಲ್ಯದ ಶೇ.25ರಷ್ಟನ್ನು ಡೌನ್ ಪೇಮಂಟ್ ಮಾಡಿದರೆ ಸಾಕು. ನಿವೇಶನ ನಿಮ್ಮದಾಗುತ್ತದೆ. ಉಳಿದ ಶೇ.75ರಷ್ಟು ಹಣವನ್ನು ಯಾವುದೇ ಬಡ್ಡಿ ಇಲ್ಲದೆ ಇಎಂಐ ಸೌಲಭ್ಯದ ಮೂಲಕ ಅಥವಾ ಬ್ಯಾಂಕ್‌ನಿಂದ ಡೆವೆಲಪರ್ಸ್‌ನವರೇ ಹಣದ ವ್ಯವಸ್ಥೆ ಮಾಡಿಸುತ್ತಾರೆ (ಕಾನೂನು ಅನ್ವಯ). ಇದರ ಜೊತೆಗೆ ದೀಪಾವಳಿ ಅಂಗವಾಗಿ ನಿವೇಶನ ಬುಕ್ ಮಾಡಿದವರಿಗೆ ರು. 25,000 ಮೌಲ್ಯದ ಚಿನ್ನವನ್ನು ನೀಡುತ್ತಾರೆ. ಈ ಆಫರ್ ನವೆಂಬರ್ ತಿಂಗಳು ಪೂರ್ತಿ ಇದೆ.
ಮತ್ತೊಂದು ವಿಶೇಷವೆಂದರೆ ಎಎಸ್‌ಬಿ ಡೆವೆಲಪರ್ಸ್ ರಾಜಧಾನಿ ಬೆಂಗಳೂರು ಸೇರಿದಂತೆ, ರಾಮನಗರ, ಮೈಸೂರು, ತುಮಕೂರು ಮತ್ತು ಮಾಗಡಿಯಲ್ಲಿ ಈಗಾಗಲೇ ಬೇರೆ ಬೇರೆ ಹೆಸರಿನಲ್ಲಿ ನಿವೇಶನಗಳನ್ನು ಅಭಿವೃದ್ಧಿಗೊಳಿಸಿದ್ದು, ಮಾರಾಟವನ್ನೂ ಆರಂಭಿಸಿದೆ. ಅಷ್ಟೇ ಅಲ್ಲ, ನಿವೇಶನ ಕೊಳ್ಳುವವರಿಗೆ ಬಡ್ಡಿರಹಿತ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯವನ್ನೂ ನೀಡಲು ಮುಂದಾಗಿದೆ. ಎಎಸ್‌ಬಿ ಡೆವೆಲಪರ್ಸ್ ಮತ್ತು ಪ್ರಮೋಟರ್ಸ್ ಪ್ರಮುಖವಾಗಿ ಈ ಪ್ರದೇಶಗಳಲ್ಲಿ ನಿವೇಶಗಳನ್ನು ಅಭಿವೃದ್ಧಿಗೊಳಿಸಿದ್ದು, ಪ್ರತಿ ಚದರ ಅಡಿಗೆ ಅದರ ಮೌಲ್ಯವನ್ನು ಪ್ರಕಟಿಸಿದೆ.
ಬೆಂಗಳೂರಿನ ತಾವರೆಕೆರೆಯಲ್ಲಿ ಎಎಸ್‌ಬಿ ಬಸವ ರೆಸಿಡೆನ್ಸಿ ನಿವೇಶನ ಸಿದ್ಧವಾಗಿದ್ದು, ಪ್ರತಿ ಚ. ಅಡಿಗೆ ರು. 899 ಮೌಲ್ಯ ನಿಗದಿಪಡಿಸಲಾಗಿದೆ. ದೊಡ್ಡ ಆಲದ ಮರದ ಬಳಿಯೂ ನಿವೇಶನ ನೋಂದಣಿಗೆ ಸಿದ್ಧವಾಗಿದ್ದು, ಎಎಸ್‌ಬಿ ನೇಹಾ ರೆಸಿಡೆನ್ಸಿ ಹೆಸರಿನಲ್ಲಿದೆ. ಇದರ ಮೌಲ್ಯ ಪ್ರತಿ ಚ.ಅಡಿಗೆ ರು. 1099 ಇದೆ. ನೆಲಮಂಗಲದ ಟಿ. ಬೇಗೂರಿನಲ್ಲಿ ಎಎಸ್‌ಬಿ ಚಂದನ ರೆಸಿಡೆನ್ಸಿ ನೋಂದಣಿಗೆ ಸಿದ್ಧಗೊಂಡಿದ್ದು, ಪ್ರತಿ ಚ.ಅಡಿಗೆ ರು. 2249 ಇದೆ. ತುಮಕೂರಿನಲ್ಲೂ ನೋಂದಣಿಗೆ ಸಿದ್ಧಗೊಂಡಿರುವ ಎಎಸ್‌ಬಿ ಬೆನಕಾ ರೆಸಿಡೆನ್ಸಿ ಇದ್ದು, ಇದು ಪ್ರತಿ ಚ. ಅಡಿಗೆ 449 ನಿಗದಿಪಡಿಸಲಾಗಿದೆ. ಮಾಗಡಿ ಟೌನ್‌ನಲ್ಲೂ ಎಎಸ್‌ಬಿ ತಿರುಮಲ ರೆಸಿಡೆನ್ಸಿ ನಿವೇಶನಗಳಿದ್ದು, ಪ್ರತಿ ಚ.ಅಡಿಗೆ 799 ಇದೆ. ಮೈಸೂರಿನಲ್ಲಿಯೂ ಎಎಸ್‌ಬಿ ಗೋಲ್ಡನ್ ರೆಸಿಡೆನ್ಸಿ ನಿವೇಶನಗಳಿದ್ದು ಪ್ರತಿ ಚ. ಅಡಿಗೆ 1099 ಇದೆ.
ಅದೇ ರೀತಿ ಕಡುಬಗೆರೆಯಲ್ಲಿ ಎಎಸ್‌ಬಿ ಫಾರ್ಮ್ 6ನೇ ಫೇಸ್, ಕೆಂಗೇರಿ ಹೋಬಳಿಯಲ್ಲಿ ಎಂ.ಆರ್.ಆರ್. ಲೋಟಸ್, ರಾಮನಗರದಲ್ಲಿ ಎಎಸ್‌ಬಿ ಟೌನ್‌ಶಿಪ್, ದೇವನಹಳ್ಳಿಯಲ್ಲಿ ಲೇಕ್‌ವೀವ್, ಮೈಸೂರಿನ ಹುಣಸೂರು ರಸ್ತೆಯಲ್ಲಿ ಎಎಸ್‌ಬಿ ಪ್ಯಾಲೆಸ್ ಸಿಟಿ, ಮೈಸೂರಿನ ಪಿರಿಯಾಪಟ್ಟಣದಲ್ಲಿ ಎಎಸ್‌ಬಿ ಗ್ರೀನ್ ವುಡ್ಸ್ ಮತ್ತು ಮೈಸೂರಿನಲ್ಲಿ ಎಂಆರ್‌ಆರ್ ರಾಯಲ್ ಮತ್ತು ಎಎಸ್‌ಬಿ ಸಿಂಧು ಜಾಗೃತಿಯಲ್ಲಿ ನೋಂದಣಿ ನಿವೇಶಗಳು ಸಿದ್ಧಗೊಂಡಿವೆ.
ಎಎಸ್‌ಬಿ ಸಂಸ್ಥೆಯ ಸಂಸ್ಥಾಪಕ ಎಸ್. ಭಗೀರಥ. ಈಗಾಗಲೇ ಹಲವರಿಗೆ ಉತ್ತಮ ನಿವೇಶಗಳನ್ನು ಒದಗಿಸಿಕೊಟ್ಟಿದ್ದಾರೆ. ನೀವೂ ನಿವೇಶನ ಹೊಂದಬೇಕಾ? ಹಾಗಾದರೆ ಈ ವಿಳಾಸ ಸಂಪರ್ಕಿಸಿ.
156, ಎಎಸ್‌ಬಿ ಪ್ಲಾಜಾ, ಮಾಗಡಿ ಮುಖ್ಯರಸ್ತೆ, ಸುಂಕದಕಟ್ಟೆ, ಬೆಂಗಳೂರು- 560091. ಮೊಬೈಲ್ 9535819999. ಇಮೇಲ್- info@asbgroups.com, ವೆಬ್‌ಸೈಟ್ ವಿಳಾಸ www.asbgroups.com.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


