ನಿಜವ ನುಡಿವೆನೆ ನನ್ನಾಣೆ ನಲ್ಲೇ...

ಕೆಲವೊಂದು ಸಾರಿ ಸುಳ್ಳುಗಳೇ ನಮ್ಮನ್ನು ತುಂಬಾ ಖುಷಿಯಾಗಿಡುತ್ತವೆ. ನಮಗೂ ಗೊತ್ತಿರುತ್ತದೆ ಎದುರಿಗಿರುವ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ ಎಂದು. ಆದರೆ, ಆ ಕ್ಷಣಕ್ಕೆ ಆ ಸುಳ್ಳನ್ನು ತುಂಬಾ ಎಂಜಾಯ್ ಮಾಡುತ್ತೇವೆ. ಈ ಸುಳ್ಳಿನ ವಿಷಯವನ್ನು ಆಗ ತಾನೆ ಪ್ರೀತಿಯಲ್ಲಿ ಬಿದ್ದಿರುವ ಹುಡುಗ ಮತ್ತು ಹುಡುಗಿಯರು ಸತ್ಯವಾಗಿಯೂ ಎಂಜಾಯ್ ಮಾಡುತ್ತಾರೆ. ಹುಡುಗ ಹುಡುಗಿಗೆ ಹೇಳುವ ಸಾಮಾನ್ಯ ಎಂಟು ಸುಳ್ಳುಗಳು ಇಲ್ಲಿವೆ. ಸುಮ್ಮನೆ ಓದಿ, ಎಂಜಾಯ್ ಮಾಡಿ.
ಅಳದಂತೆ ನೋಡಿಕೊಳ್ಳುವೆ ಚಿನ್ನಾ
ಪ್ರತಿಯೊಬ್ಬ ಹುಡುಗ ತನ್ನ ಹುಡುಗಿಗೆ ಹೇಳುವ ಮೊದಲನೇ ಸುಳ್ಳು ಇದು. ಆದರೆ, ಈ ಪ್ರಾಮಿಸ್ ಮಾಡಿದ ಮರುಕ್ಷಣದಲ್ಲಿ ಅವಳ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತಾನೆ. ಸರಿಯಾಗಿ ಟೈಮ್‌ಗೆ ಬರುತ್ತೇನೆಂದು ಹೇಳಿ ಅರ್ಧ ಗಂಟೆ ಲೇಟ್ ಮಾಡಿ ಬಂದಾಗ ಹುಡುಗಿ ಕಣ್ಣಲ್ಲಿ ಗಂಗಾ- ಸರಸ್ವತಿ ಧಾರಾಕಾರ.
ಜಗದೇಕ ಸುಂದರಿ!
ಇದು ಅಪ್ಪಟ ಸುಳ್ಳು. ಆದರೂ ಹುಡುಗಿಯರು ಹುಡುಗನ ಈ ಮಾತನ್ನು ನಂಬುತ್ತಾರೆ. ನೀನು ಜಗದೇಕ ಸುಂದರಿ ಎಂದಾಕ್ಷಣ ಅವರ ಕೆನ್ನೆ ಕೆಂಪಾಗುತ್ತದೆ. ಆ ಕ್ಷಣದಲ್ಲಿ ಮುತ್ತು ಕೊಟ್ಟರೂ ಕೊಟ್ಟರೇ!
ನಿನದೇ ಕನವರಿಕೆ ನನಗೆ...
ಹುಡುಗರು ಹೇಳುವ ಮತ್ತೊಂದು ಅಪ್ಪಟ ಸುಳ್ಳಿದು. ಸಿನಿಮಾ ನೋಡುತ್ತಿರುವಾಗ ಇಲ್ಲ ಫ್ರೆಂಡ್ಸ್ ಜತೆ ಹರಟುತ್ತಿರುವಾಗ ಹುಡುಗಿ ಕಾಲ್ ಮಾಡಿದರೆ, ಡಾರ್ಲಿಂಗ್ ನಿನ್ನ ಬಗ್ಗೆನೇ ಯೋಚಿಸುತ್ತಿದ್ದೆ, ಅಷ್ಟರಲ್ಲೇ ಕಾಲ್ ಮಾಡಿದೆ ಅಂತೆಲ್ಲ ಹೇಳುತ್ತಾನೆ. ಇಂಥ ಹಸಿ ಸುಳ್ಳನ್ನು ಅತ್ತ ಕಡೆಯಿಂದ ಅಷ್ಟೇ ಖುಷಿಯಿಂದ ಹುಡುಗಿ ಸ್ವೀಕರಿಸುತ್ತಾಳೆ.
ನಿಮ್ಮ ಅಪ್ಪ- ಅಮ್ಮ ತುಂಬಾ ಒಳ್ಳೆಯವರು
ಹುಡುಗಿಗೆ ತಮ್ಮ ಅಪ್ಪ ಅಮ್ಮ ಎಂದರೆ ಎಲ್ಲಿಲ್ಲದ ಪ್ರೀತಿ. ಈ ವೀಕ್‌ನೆಸ್ ಗೊತ್ತಿರುವ ಹುಡುಗರು, ನಿಮ್ಮ ಅಪ್ಪ ಅಮ್ಮ ಸಾಕ್ಷಾತ್ ದೇವರು ಇದ್ದ ಹಾಗೆ ಎಂದು ರೈಲು ಬಿಡುತ್ತಾರೆ. ಹುಡುಗನ ಈ ರೈಲನ್ನು ಹತ್ತಿ ಹುಡುಗಿಯರು ಖುಷಿಯಲ್ಲಿ ತೇಲುತ್ತಾರೆ.
ಐ ಟ್ರಸ್ಟ್ ಯೂ ಹನಿ!
ನಂಬಿಕೆ ಅನ್ನೋದು ಹೇಳಿ ನಂಬಿಸುವುದಲ್ಲ. ಆದರೂ ಹುಡುಗರು ಅನುಮಾನದಲ್ಲೇ ಐ ಟ್ರಸ್ಟ್ ಯೂ ಅಂತ ಹೇಳಿದರೂ ಸಾಕು, ಹುಡುಗಿ ನಿಜ ಎಂದು ಭಾವಿಸುತ್ತಾಳೆ.
ಮೇಕಪ್ ಇಲ್ಲದಿದ್ದರೂ ಚೆನ್ನಾಗಿ ಕಾಣ್ತಿಯಾ
ಇದು ಮತ್ತೊಂದು ಹಸಿ ಹಸಿ ಸುಳ್ಳು. ಅವಳಿಗೂ ಗೊತ್ತಿರುತ್ತದೆ, ಸ್ವಲ್ಪವಾದರೂ ಮೇಕಪ್ ಮಾಡಿಕೊಳ್ಳದಿದ್ದರೆ ತಾನು ಚೆನ್ನಾಗಿ ಕಾಣಲ್ಲ ಎಂದು. ಆದರೂ ಹುಡುಗ ಮಾತ್ರ ಮೇಕಪ್ ಇಲ್ಲದಿದ್ದರೂ ಚೆನ್ನಾಗಿ ಕಾಣ್ತಿಯಾ ಅನ್ನುತ್ತಾರೆ. ಈ ಸುಳ್ಳನ್ನು ಬಹುತೇಕ ಹುಡುಗರು ತಮ್ಮ ಹುಡುಗಿಗೆ ಹೇಳಿರುತ್ತಾರೆ.
ನಾನು ಕುಡಿಯಲ್ಲ, ಸಿಗರೇಟ್ ಸೇದಲ್ಲ!
ಇದು ಅಪ್ಪಟ ಸುಳ್ಳು. ಬಹುಶಃ ಈ ಸುಳ್ಳನ್ನು ನಂಬುವಷ್ಟು ಬೇರೆ ಯಾವ ಸುಳ್ಳನ್ನೂ ಹುಡುಗಿಯರು ನಂಬಲ್ಲ. ಇದೇ ವಿಕ್‌ನೆಸ್ ಇಟ್ಟುಕೊಂಡೇ ಹುಡುಗರು ಪದೇ ಪದೇ ಸುಳ್ಳು ಹೇಳ್ತಾರೆ. ಆದರೆ, ಒಂದು ಟೈಮಲ್ಲಿ ನಿಜ ಗೊತ್ತಾದರೆ ಸಂಬಂಧವೇ ಮುರಿದು ಹೋಗುವ ಅಪಾಯ ಹೆಚ್ಚು. ಹಾಗಾಗಿ, ಹುಡುಗರೇ ಈ ಸುಳ್ಳು ಹೇಳುವಾಗ ಸ್ವಲ್ಪ ಹುಷಾರಿಗಿರಿ.
- ಶೋಮ
mtippar@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


