ಮಹಿಳೆ-ಮನೆ-ಬದುಕು

ವಂಡರ್ ವರಾಂಡ

ಇರುವ ಸೌಲಭ್ಯಗಳಲ್ಲಿಯೇ ಮನೆಯ ಮುಖ್ಯದ್ವಾರ ಮತ್ತು ವರಾಂಡವನ್ನು ಸುಂದರಗೊಳಿಸಿ, ಮನೆಗೆ ಬರುವವರನ್ನು ಸಂತೋಷದಿಂದ ಬರಮಾಡಿಕೊಳ್ಳಬಹುದು...

ವಂಡರ್ ವರಾಂಡ
Published On :

ಮನೆಯ ಮುಂದಿನ, ಎಲ್ಲರನ್ನೂ ಬೇಗನೆ ಆಕರ್ಷಿಸುವ ಜಾಗ ವರಾಂಡ. ಅಷ್ಟೇ ಅಲ್ಲ, ಮನೆಗೆ ಬರುವ ಅತಿಥಿಗಳಿಗೆ ನಿಮ್ಮ ಸ್ಟೈಲ್ ಮತ್ತು ನೀವು ಹೇಗೆ ಎಂಬುದನ್ನು ಇದುವೇ ತಿಳಿಸಿಬಿಡುತ್ತದೆ.

ಎಲ್ಲರನ್ನೂ ಮನೆಯತ್ತ ಸೆಳೆಯಬೇಕು ಅಂದುಕೊಂಡು ಸಿಕ್ಕಾಪಟ್ಟೆ ವೆಚ್ಚ ಮಾಡುವುದು ಸಾಮಾನ್ಯ. ಆದರೆ, ಇರುವ ಸೌಲಭ್ಯಗಳಲ್ಲಿಯೇ ಮನೆಯ ಮುಖ್ಯದ್ವಾರ ಮತ್ತು ವರಾಂಡವನ್ನು ಸುಂದರಗೊಳಿಸಬಹುದು. ಈ ಮೂಲಕ ಮನೆಗೆ ಬರುವವರನ್ನು ಆರಂಭದಲ್ಲಿಯೇ ಸಂತೋಷದಿಂದ ಬರಮಾಡಿಕೊಳ್ಳಬಹುದು. ಜತೆಗೆ ಅವರ ಪ್ರಭಾವವನ್ನೂ ಬೀರಬಹುದು. ಹಾಗಾದರೆ ವರಾಂಡ ಹಾಗೂ ಪ್ರವೇಶದ್ವಾರವನ್ನು ಶೃಂಗಾರ ಮಾಡೋಕೆ ಏನೇನು ಕಸರತ್ತು ಮಾಡಬಹುದು? ಇಲ್ಲಿವೆ ಕೆಲವು ಮಾರ್ಗಗಳು...

  • ನಿಮ್ಮ ಮನೆಯ ವರಾಂಡದ ಜಾಗ ಎಷ್ಟು ಪ್ರಮಾಣದಲ್ಲಿದೆ ಎಂಬುದರ ಮೇಲೆ ಅದರ ಶೃಂಗಾರ ಅವಲಂಬಿತ. ಇದಾದ ಮೇಲೆ ಸಣ್ಣ ಮತ್ತು ದೊಡ್ಡ ಪ್ರಮಾಣದ ಅಲಂಕಾರಿಕ ಪುಷ್ಪಕರಂಡಕಗಳು, ಮಡಿಕೆ ಮತ್ತು ಮಣ್ಣಿನಿಂದ ಮಾಡಿದ ಕುಂಡಗಳನ್ನು ಸಂಗ್ರಹಿಸಿಟ್ಟುಕೊಂಡಿರಿ.
  • ಈ ಕುಂಡಗಳಲ್ಲಿ ಹಸಿರಿನಿಂದ ಕೂಡಿದ ಸಸ್ಯಗಳನ್ನಿರಿ, ಬಾಗಿಲಿನ ಬಳಿಯಿಡಿ. ಒಂದು ವೇಳೆ ಒಂದೂವರೆ ಅಥವಾ ಎರಡು ಅಡಿಯ ಕುರ್ಚಿ ಇದ್ದರೆ ಅದನ್ನು ಮುಖ್ಯದ್ವಾರದ ಬಳಿ ಇಟ್ಟು, ಅದರ ಮೇಲೆ ಹೂವಿನ ಕುಂಡಗನ್ನಿಡಿ. ಅದು ಮನಸೆಳೆಯುವಂತೆ ಇರುತ್ತದೆ.
  • ನೀವು ಹಸಿರುಪ್ರಿಯರಾಗಿದ್ದರೆ, ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಸಿರು ಅಲಂಕಾರಿಕ ಸಸ್ಯಗಳು ಹಲವು ಪ್ರಕಾರಗಳಲ್ಲಿ ಸಿಗುತ್ತವೆ. ಅವುಗಳನ್ನೂ ಮನೆ ಪ್ರವೇಶ ದ್ವಾರದ ಬದಿ ಇಡಬಹುದು.
  • ಸಸ್ಯಪ್ರಿಯರು ನೀವಾಗದಿದ್ದಲ್ಲಿ ಚಿಂತೆ ಬೇಡ. ನಿಮ್ಮ ಮನೆಯಲ್ಲಿಯೇ ಇರುವ ನಿರುಪಯುಕ್ತ ಗಾಜಿನ ಬಾಟಲಿಗಳ ಮೇಲೆ ವನ್ಯಪ್ರಾಣಿಗಳು, ಜಾನಪದ, ಸಂಗೀತ, ಮಕ್ಕಳು ಸೇರಿದಂತೆ ಯಾವುದೇ ವಿಧವಾದ ಚಿತ್ರಗಳನ್ನು ಗಾಜಿನ ಮೇಲೆ ಬಿಡಿಸಲೂ ಅವಕಾಶವಿದೆ.
  • ದ್ವಾರದ ಬಳಿ ಇರುವ ಗೋಡೆಗೆ ಚಿತ್ರವನ್ನು ಬಿಡಿಸುವ ಮೂಲಕ ಮನಸೆಳೆಯುವಂತೆ ಮಾಡಬಹುದು. ಗೋಡೆ ಮೇಲೆ ಹೂವಿನಬಳ್ಳಿಯನ್ನು ಬೆಳೆಯುವಂತೆ ನೋಡಿಕೊಳ್ಳಬಹುದು.
  • ಬಾಗಿಲಿಗೆ ಕರ್ಟೈನ್ ಅನ್ನು ತೂಗುಹಾಕಿ ಆಕರ್ಷಣೆಯಾಗುವಂತೆ ಮಾಡಬಹುದು. ಅಷ್ಟೇ ಅಲ್ಲ, ಬರೀ ಬಾಗಿಲು ಸುತ್ತಲು ವಿವಿಧ ಬಣ್ಣದ ಫ್ರೇಮ್ ಅನ್ನು ಕೂಡ ಹಾಕಬಹುದು.
- ಬ್ರಹ್ಮಾನಂದ ಎನ್. ಹಡಗಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.