ಕಡಲೆ ಹಿಟ್ಟಿನಿಂದ ಕಾಂತಿ
ಮುಖದ ಕಾಂತಿ ಹೆಚ್ಚಿಸಲು ಬ್ಯೂಟಿಪಾರ್ಲರ್ಗೆ ಹೋಗಿ ಫೇಶಿಯಲ್ಗಾಗಿ ಸಾವಿರಗಟ್ಟಲೆ ಸುರಿದು ಕೆಮಿಕಲ್ಗಳ ಲೇಪನ ಮಾಡಿಸಿಕೊಳ್ಳುವ ಬದಲು ಮನೆಯಲ್ಲೇ ಪಕ್ಕಾ ಆರೋಗ್ಯಕರವಾದ ನಿತ್ಯದ ಸಾಮಾಗ್ರಿಗಳನ್ನು ಬಳಸಬಾರದೇಕೆ?

ಮುಖದ ಕಾಂತಿ ಹೆಚ್ಚಿಸಲು ಬ್ಯೂಟಿಪಾರ್ಲರ್ಗೆ ಹೋಗಿ ಫೇಶಿಯಲ್ಗಾಗಿ ಸಾವಿರಗಟ್ಟಲೆ ಸುರಿದು ಕೆಮಿಕಲ್ಗಳ ಲೇಪನ ಮಾಡಿಸಿಕೊಳ್ಳುವ ಬದಲು ಮನೆಯಲ್ಲೇ ಪಕ್ಕಾ ಆರೋಗ್ಯಕರವಾದ ನಿತ್ಯದ ಸಾಮಾಗ್ರಿಗಳನ್ನು ಬಳಸಬಾರದೇಕೆ? ಇದರಿಂದ ಸಮಯ, ಹಣ, ಆರೋಗ್ಯ ಎಲ್ಲವೂ ಉಳಿಯುವುದು.
- ಕಡಲೆಹಿಟ್ಟು ನೈಸರ್ಗಿಕ ಕ್ಲೆನ್ಸರ್. ಇದು ಚರ್ಮದ ಆಳದವರೆಗೂ ಅಡಗಿ ಕುಳಿತಿರುವ ಕೊಳೆಯನ್ನು ಹೊರದಬ್ಬಿ, ಸತ್ತ ಕೋಶಗಳನ್ನು ಗುಡಿಸುತ್ತದೆ. ಜೊತೆಗೆ ಚರ್ಮಕ್ಕೆ ಬಿಗಿತನವನ್ನು ತಂದುಕೊಡುತ್ತದೆ. ಹೀಗಾಗಿ ಪ್ರತಿನಿತ್ಯ ಸೋಪಿನ ಬದಲಿಗೆ ಕಡಲೆಹಿಟ್ಟಿನಲ್ಲಿ ಎರಡು ಬಾರಿ ಮುಖ ತೊಳೆಯುವುದೊಳಿತು.
- ಮೊಡವೆಗಳಿಂದ ತಪ್ಪಿಸಿಕೊಳ್ಳಲು ತೇಯ್ದ ಗಂಧಕ್ಕೆ ಕಡಲೆಹಿಟ್ಟು, ಹಾಲು ಸೇರಿಸಿ ಪ್ರತಿನಿತ್ಯ ಹಚ್ಚಿಕೊಳ್ಳಿ.
- ಕಡಲೆಹಿಟ್ಟಿಗೆ ಸ್ವಲ್ಪ ಮೊಸರು, ಕೆನೆ, ಅರಿಶಿನ, ನಿಂಬೆ ರಸ, ಸ್ವಲ್ಪ ಸಕ್ಕರೆ ಇಲ್ಲವೇ ಜೇನುತುಪ್ಪ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆ ಬಿಡಿ. ನಂತರ ತಣ್ಣನೆ ನೀರಿನಿಂದ ಮುಖ ತೊಳೆಯಿರಿ. ಮುಖದ ಕಾಂತಿಯನ್ನು ನೀವೇ ಒರೆಗೆ ಹಚ್ಚಿ ನೋಡಿಕೊಳ್ಳಿ.
- ನಿಮ್ಮದು ಎಣ್ಣೆ ಚರ್ಮವಾಗಿದ್ದರೆ ಕಡಲೆಹಿಟ್ಟು ಎಣ್ಣೆ ನಿಯಂತ್ರಣಕ್ಕೆ ಸಹಕಾರಿ. ಒಣಚರ್ಮವಾದರೆ ಇದರಿಂದ ಮುಖ ತೊಳೆದ ನಂತರ ಬಾಡಿ ಲೋಶನ್ ಹಚ್ಚಿಕೊಳ್ಳಿ.
- ಕುತ್ತಿಗೆ, ಕಂಕಳು ಕಪ್ಪಾಗಿದ್ದರೆ ಪ್ರತಿದಿನ ಎಳ್ಳೆಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಹಾಗೂ ವಾರಕ್ಕೆ ಮೂರು ಬಾರಿ ಕಡಲೆಹಿಟ್ಟು, ಮೊಸರ ಕೆನೆ, ಅರಿಶಿನ, ನಿಂಬೆರಸದ ಪೇಸ್ಟ್ ಹಚ್ಚಿಕೊಳ್ಳಿ.
- ನಯವಾದ ಚರ್ಮಕ್ಕಾಗಿ ಕಡಲೆಹಿಟ್ಟು, ಹಾಲು, ಕಿತ್ತಳೆರಸದ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಮೇಲ್ಮುಖವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಂಡು 15 ನಿಮಿಷಗಳ ಬಳಿಕ ಮುಖ ತೊಳೆಯಿರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


