ಮಹಿಳೆ-ಮನೆ-ಬದುಕು

ಮನೆಮದ್ದು

ಮನೆಮದ್ದು
Published On :

ಮುಂಗಾರು ಮಳೆ ಮನಸ್ಸಿಗೆ ಸಂತಸ ನೀಡುತ್ತದೆ. ಮಳೆಗಾಲ ಸುಂದರ ವಾತಾವರಣ ಜತೆಗೆ ಉಲ್ಲಾಸ ಸೃಷ್ಟಿಸುತ್ತದೆ. ಆದರೆ ಈ ಮಳೆಗಾಲ ನಿಮ್ಮ ಮನೆಯ ಅಂದಚೆಂದ ಹಾಳುಮಾಡದಿರಲಿ. ಮಳೆಗಾಲದ ಖುಷಿಯನ್ನು ನಿಮ್ಮ ಮನೆಯೂ ಅನುಭವಿಸಲಿ. ಮಳೆಗಾಲ ಎಂದರೆ ಮನೆಗೆ ಹೊಸ ತೊಂದರೆಗಳ ಆಗಮನ ಎಂದು ತಿಳಿಯದಿರಿ.
ಮಳೆಯಿಂದ ಮನೆಗಳಿಗೆ ಬರಬಹುದಾದ ಸಾಮಾನ್ಯ ತೊಂದರೆಗಳು ಡಂಪ್ನೆಸ್ (ಗೋಡೆಗಳು ಒದ್ದೆ ಆಗುವುದು), ಚಾವಣಿ ಸೋರಿಕೆ, ಹೊರಾಂಗಣ ಗೋಡೆ ಬಿರುಕು ಬಿಡುವುದು, ಮರದ ಬಾಗಿಲುಗಳು, ಕಪಾಟುಗಳು   ಉಬ್ಬಿಕೊಳ್ಳುವುದು ಅಥವಾ ಬೆಂಡಾಗುವುದು, ಗೆದ್ದಲು ಸಮಸ್ಯೆ. ಇವು ಸಾಮಾನ್ಯವಾದರೂ ಮನೆಯನ್ನು ಹಾಳು  ಮಾಡಬಲ್ಲವು. ಕೇವಲ ಮಳೆಗಾಲದಲ್ಲಿ ಮಾತ್ರ ಕಾಣಿಸುವ ಈ ಸಮಸ್ಯೆಗಳನ್ನು ಉದಾಸೀನ ಮಾಡಬೇಡಿ.
ಮನೆ ಕಟ್ಟುವ ವೇಳೆ ಸರಿಯಾಗಿ ಇಟ್ಟಿಗೆಗಳಿಗೆ ನೀರುಣಿಸದಿದ್ದರೆ, ಮಳೆಗಾಲದಲ್ಲಿ ಮನೆಗಳ ಗೋಡೆಗಳ ಮೂಲಕ ನೀರು ಸೋರಬಹುದು. ಸರಿಯಾದ ವಾಟರ್ ಪ್ರೂಫೆಟ್ ಮಿಶ್ರಣಗಳನ್ನು ಬಳಸದೆ ಹೋದರೆ ಡಂಪ್ನೆಸ್ ಕಂಡುಬರುವುದು ಸಹಜ. ಆದರೆ ಇವುಗಳಿಗೆ ಕಾಯಂ ಪರಿಹಾರ ಕಾಣದಿದ್ದರೆ, ಮನೆಯ ಗೋಡೆಗಳು ಶಿಥಿಲಗೊಂಡು ಮನೆಯ ಆಯುಷ್ಯ ಬಹು ಬೇಗನೆ ಕುಸಿಯುತ್ತದೆ.

ಈ ರೀತಿಯ ತೊಂದರೆಗಳಿಗೆ ಸಿಗಬಹುದಾದ ಶಾಶ್ವತ ಪರಿಹಾರ ಎಂದರೆ ಸೋರುತ್ತಿರುವ ಗೋಡೆಯ ಪ್ಲಾಸ್ಟಿಂಗ್ ಒಡೆದು ಇಟ್ಟಿಗೆಗಳ ಬಿರುಕಿಗೆ ಪ್ರೂಫೆಟ್ ಮಿಶ್ರಣವನ್ನು ಸೇರಿಸಿ ಮರು ಪ್ಲಾಸ್ಟಿಂಗ್ ಮಾಡಿಸಬೇಕಾಗುತ್ತದೆ.
ಮಳೆಗಾಲದಲ್ಲಿ ಮತ್ತೊಂದು ಸಮಸ್ಯೆ ಮರದ ಬಾಗಿಲುಗಳು ಹಾಗೂ ಕಪಾಟಿನವು. ಮನೆಯ ಮುಂಬಾಗಿಲು ಮಳೆ ಹನಿಗಳಿಗೆ, ತೇವಾಂಶಕ್ಕೆ ಬಣ್ಣ ಮಾಸುವುದು, ಬೆಂಡಾಗುವುದು ಮತ್ತು ಹಾಳಾಗುವುದು ಸಹಜ. ಕೆಲವು ಮರದ ಪೀಠೋಪಕರಣಗಳು ತೇವಾಂಶದಿಂದಾಗಿ ಗೆದ್ದಲು ಹಿಡಿಯುತ್ತವೆ. ಮಳೆಗಾಲದ ಆರಂಭಕ್ಕೂ ಮುನ್ನವೇ ಮರದ ಉಪಕರಣಗಳಿಗೆ ಪಾಲಿಶ್ ಮಾಡಿಡುವುದು, ವುಡ್ ಪ್ರೊಟೆಕ್ಟ್ ಪೇಂಟ್‌ಗಳನ್ನು ಬಳಿಯುವುದು ಉತ್ತಮ. ನೆನಪಿರಲಿ ಇವೆಲ್ಲ ಕೆಲಸಗಳನ್ನು ಮಳೆಗಾಲದಲ್ಲಿ ಆರಂಭಿಸುವ ಮುನ್ನ, ಮಳೆ ಬೀಳುವ ಮುನ್ನವೇ ಮಾಡಿದರೆ ಒಳಿತು. ಇದು  ಸಿವಿಲ್ ಎಂಜಿನಿಯರ್ ಸಂತೋಷ್.ವಿ.ಸಿಯವರ ಅಭಿಪ್ರಾಯವೂ ಹೌದು.

ಮನೆ ರಕ್ಷಣೆ

  • ಮಳೆಗಾಲದಲ್ಲಿ ಯಾವುದೇ ಮನೆ ರಿಪೇರಿ ಕೆಲಸಕ್ಕೆ ಕೈ ಹಾಕದಿರಿ.
  • ಕಾಲುವೆಗಳಲ್ಲಿ ನೀರು ಸರಿಯಾಗಿ ಹೊರ ಹೋಗುತ್ತಿದೆಯೇ ಎಂಬುದನ್ನು ಗಮನಿಸುತ್ತಿರಿ.
  • ಮನೆಯ ಹೊರಗಡೆ ಮಳೆಗೆ ತೆರೆದಿಟ್ಟ ವಿದ್ಯುತ್ ತಂತಿಗಳಿದ್ದರೆ ಸರಿಪಡಿಸಿ.
  • ನೀರು ಶೇಕರಿಸಬಹುದಾದ ಯಾವುದೇ ವಸ್ತುಗಳನ್ನು ಟೆರೇಸಿನ ಮೇಲೆ ಅಥವಾ ಮನೆಯ ಆಸುಪಾಸುಗಳಲ್ಲಿ ಬಿಸಾಡಬೇಡಿ.
  • ಮಳೆ ನೀರು ಹೊರಹೋಗುವ ಪೈಪ್‌ಗಳು ಉತ್ತಮ ಸ್ಥಿತಿಯಲ್ಲಿವೆಯೇ ನೋಡಿಕೊಳ್ಳಿ.
  • ಹೊದಿಕೆ ಹಾಗೂ ಕಂಬಳಿಗಳನ್ನು ತೇವಾಂಶಕ್ಕೆ ತೆರೆದಿಡಬೇಡಿ. ಇವು ಒದ್ದೆ ಆಗಿ ನೆರಳಿನಲ್ಲೇ ಒಣಗಿದರೆ  ಕೆಟ್ಟ ವಾಸನೆ ಹರಡಬಲ್ಲವು.
- ರಾಹುಲ್ ಕೆ.ವಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.