ಮಹಿಳೆ-ಮನೆ-ಬದುಕು

ಹೋಂ ಕಂ ಆಫೀಸ್

ಹೋಂ ಕಂ ಆಫೀಸ್
Published On :

ಕಚೇರಿ ಕೆಲಸ ಮುಗಿಯದ ಗೋಳು. ಅದರಲ್ಲೂ ಸಾಫ್ಟ್‌ವೇರ್, ಸಿಎ, ವಕೀಲರಿಗೆ ಸಂಬಂಧಿಸಿದ್ದಾದರೆ ಕಚೇರಿ ಕೆಲಸ ಮುಗಿಯುವ ಲಕ್ಷಣಗಳೇ ಕಡಿಮೆ. ಇಂಥ ನೂರಾರು ಕೆಲಸಗಳನ್ನು ಮನೆಯಲ್ಲಿ ಮಾಡಿದರಾಯಿತು ಎನ್ನುವವರಿಗೇನೂ ಕೊರತೆ ಇಲ್ಲ.
ಆದರೆ, ಮನೆಯಲ್ಲಿ ಅಂಥ ವಾತಾವರಣ ಇರಬೇಕು. ಅದಕ್ಕಾಗಿ ಮನೆಯಲ್ಲೇ ಒಂದು ಕಚೇರಿ ವಾತಾವರಣ ಸೃಷ್ಟಿಸಿದರೆ ಹೇಗೆ?
ಕಚೇರಿಗಳಲ್ಲಿ ಎಲ್ಲ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಸಣ್ಣಸಣ್ಣ ಮೀಟಿಂಗ್‌ಗಾಗಿ ಕಚೇರಿ ಹಾಲ್ ಅನ್ನೇ ನೆಚ್ಚುವಂತೆಯೂ ಇಲ್ಲ. ಹೀಗಾಗಿ ಮನೆಯೊಳಗೊಂದು ಆಫೀಸ್ ಕೆಲಸ ಪೂರೈಸಲಿಕ್ಕಾಗಿ ಸಣ್ಣದಾದರೂ ಪರವಾಗಿಲ್ಲ, ಕೊಠಡಿ ಇದ್ದರೆ ತುಂಬಾ ಉಪಯುಕ್ತ. ಆದರೆ, ನೆಂಟರಿಷ್ಟರು ಬಂದು ಹೋಗೋ ಮನೆಯಲ್ಲಿ ಆಫೀಸ್ ಕೊಠಡಿ ಹೇಗಿರಬೇಕು? ಅಲ್ಲಿ ಏನೆಲ್ಲಾ ಇರಬೇಕು? ಯಾವ ರೀತಿ ಅದು ಇರಬೇಕು? ಎಂಬ ಗೊಂದಲ ಎಲ್ಲರಿಗೂ ಇರುತ್ತೆ. ಅಷ್ಟೇ ಅಲ್ಲ, ಈ ಕೆಲಸಗಳನ್ನು ಮನೆಯಲ್ಲಿ ಸರಿಯಾಗಿ ಮುಗಿಯುತ್ತಾ ಎನ್ನುವ ಗೊಂದಲವೂ ಅವರಿಗಿರುತ್ತೆ.

ಕೊಠಡಿ ಹೀಗಿರಲಿ...
    ಮೊದಲು ಸ್ಥಳ ನೋಡಿಕೊಳ್ಳಿ. ಆದಷ್ಟು ಪ್ರಶಾಂತ ವಾತಾವರಣ ಇರಲಿ. ಹೊರಗಿನ ಯಾವ ಸದ್ದೂ ಆಫೀಸಿನೊಳಗೆ ಬಾರದಂತಿರಲಿ.
    ಸಾಧ್ಯವಾದಷ್ಟು ಗಾಳಿ ಬೆಳಕು ಬರುವಂತಿರಲಿ. ಕೋಣೆಯೊಳಗೆ ಕೂತು ಮನೆಯ ಗೇಟ್, ರಸ್ತೆ ಆದಷ್ಟು ದೂರದವರೆಗೆ ಕಾಣುವಂತಿದ್ದರೆ ಚೆನ್ನ. ಪೇಂಟಿಂಗ್ ಮಾಡುವಾಗ ಎಚ್ಚರವಹಿಸಿ. ಬಿಳಿ ಬಣ್ಣ ಇದ್ದರೆ ಉತ್ತಮ. ಹೂ, ಬಳ್ಳಿ, ಆಕರ್ಷಕ ಎನಿಸುವ ಚಿತ್ರಗಳನ್ನು ಗೋಡೆ ಮೇಲೆ ಚಿತ್ತರಿಸಿ.

ಏನೇನಿರಬೇಕು..?
ಕನಿಷ್ಠ ಪ್ರಮಾಣದ ಸ್ಥಳಾವಕಾಶ ಕಚೇರಿಗೆ ಸೂಕ್ತ. ಕುರ್ಚಿ, ಮೇಜು, ಮೀಟಿಂಗ್‌ಗೆ ಪೂರಕವಾಗುವ ದೊಡ್ಡ ಕುರ್ಚಿ, 3- 4 ಹೆಚ್ಚುವರಿ ಕುರ್ಚಿಗಳು, ಸೋಫಾ, ಕಪಾಟು, ಗೋಡೆಯಲ್ಲಿ ತೂಗು ಹಾಕುವ ನೋಟಿಸ್ ಬೋರ್ಡ್, ನೋಟ್‌ಪ್ಯಾಡ್, ನ್ಯೂಸ್ ಪೇಪರ್ ಸ್ಟ್ಯಾಂಡ್, ಸರಳವಾದ ಆಕರ್ಷಕ ಎನಿಸುವ ಕರ್ಟೈನ್ ಹೋಮ್ ಆಫೀಸ್‌ಗೆ ಸೂಕ್ತ.
ಜೊತೆಗೆ ಪುಸ್ತಕ, ಕಚೇರಿಗೆ ಸಂಬಂಧಪಟ್ಟ ಹಳೇ ಫೈಲ್‌ಗಳನ್ನು ಜೋಡಿಸುವ ರ್ಯಾಕ್ ಇರಲಿ. ನೀವು ಕುಳಿತುಕೊಳ್ಳುವ ಟೇಬಲ್‌ನಲ್ಲಿ ಡ್ರಾಯರ್ ಇದ್ದರೆ ಉತ್ತಮ. ಅಗತ್ಯ ಫೈಲ್‌ಗಳನ್ನು ಅದರಲ್ಲಿ ಸುರಕ್ಷಿತವಾಗಿ ಇಟ್ಟು ಲಾಕ್ ಮಾಡಬಹುದು. ಪೆನ್ ಸ್ಟ್ಯಾಂಡ್, ಪೇಪರ್ ವೈಟ್ ಕ್ಯಾಲೆಂಡರ್ ಇರಲಿ. ಅಗತ್ಯಕ್ಕಿಂತ ಹೆಚ್ಚು ವಸ್ತುಗಳು ಬೇಡ.
ಯಾವುದೇ ವಸ್ತು ತೆಗೆದುಕೊಳ್ಳುವಾಗ, ಇಡುವಾಗ ಸಮಯ ವ್ಯರ್ಥವಾಗದಂತಿರಲಿ. ಅಂದರೆ, ನಿಮ್ಮ ಟೇಬಲ್- ಕುರ್ಚಿಯ ಹತ್ತಿರನೇ ಫೈಲ್ ರ್ಯಾಕ್ ಇರಲಿ. ಇದರಿಂದ ನೀವು ಕೂತಲ್ಲಿಯೇ ಫೈಲ್‌ಗಳನ್ನು ತೆಗೆದು, ಇಡಬಹುದು.
ಮನೆ ಸಾಂಪ್ರದಾಯಿಕವಾಗಿದ್ದರೂ, ಕಚೇರಿಗೆ ಹೋಲುವಂತೆ ಸುಂದರ ವಿನ್ಯಾಸ, ಆಧುನಿಕ ಸಾಮಗ್ರಿಗಳನ್ನು ಒಳಗೊಂಡಿರಲಿ. ನಿಮ್ಮ ಕಾರ್ಯಕ್ಕೆ ಪ್ರೇರಣೆ ನೀಡುವ ವಾಕ್ಯಗಳು  ಅಲ್ಲಿರಲಿ. ಅಲ್ಲಿ ಕಸದ ತೊಟ್ಟಿ ಸಿಂಪಲ್ಲಾಗಿ  ಇಡೋ ಬದಲು ಅದಕ್ಕೊಂದು (ಕಾಗದ, ಪೆನ್ಸಿಲ್, ಸ್ಕೆಚ್ ಬಳಸಿ) ಆಕರ್ಷಕ ರೂಪುರೇಷೆ ನೀಡಿ.
ಕಂಪ್ಯೂಟರ್, ಪ್ರಿಂಟರ್, ಫೋನ್ ನೀವು ಕುಳಿತುಕೊಳ್ಳುವ ಕುರ್ಚಿಗೆ ಹತ್ತಿರವಾಗಿಯೇ ಇರಲಿ. ಹೆಚ್ಚು ಬೆಳಕು ನಿಮಗೆ ತಲೆನೋವು ಉಂಟು ಮಾಡಬಹುದು. ಅದಕ್ಕಾಗಿ ಆದಷ್ಟು ಪ್ರಕೃತಿ ಸಹಜ ಬೆಳಕಿರಲಿ. ಡೆಸ್ಕ್ ಲ್ಯಾಂಪ್ ಇರಲಿ. ನಿಮ್ಮ ಜೀವನದ ವಿಶೇಷ ವ್ಯಕ್ತಿಯೊಬ್ಬರ ಚಿತ್ರ, ಪೇಂಟಿಂಗ್ ಫ್ರೇಮ್ ನಿಮ್ಮ ಡೆಸ್ಕ್ ಮೇಲಿರಲಿ. ಇದು ನಿಮಗೆ ನಿಮ್ಮ ಕೆಲಸಕ್ಕೆ ಸ್ಫೂರ್ತಿ ತರುತ್ತದೆ.

- ವಿದ್ಯಾ ಇರ್ವತ್ತೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.