ಮಹಿಳೆ-ಮನೆ-ಬದುಕು

ಉಡುಗೆ ರೆಡೀನಾ?

ಉಡುಗೆ ರೆಡೀನಾ?
Published On :

ಮಾಡರ್ನ್ ಆಗಿ ಆಕರ್ಷಕವಾಗಿ ಕಾಣಬೇಕು ಎಂಬ ಆಸೆ ಎಲ್ಲ ಹುಡುಗಿಯರಲ್ಲಿ, ಮಹಿಳೆಯರಲ್ಲಿ ಇರುತ್ತದೆ. ಮಾಡರ್ನ್ ಎಂದರೆ ಬರೀ ಪಾಶ್ಚಾತ್ಯ ಉಡುಗೆಯೇ ತೊಡಬೇಕಂತಿಲ್ಲ. ಭಾರತೀಯ ಉಡುಗೆಯಲ್ಲೂ ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡ್ಕೊಂಡು ಸುಂದರವಾಗಿ ಕಾಣಬಹುದು. ನಾವು ಧರಿಸುವ ಉಡುಪು ನಮ್ಮ ಅಭಿರುಚಿಯನ್ನು, ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ನಿಮ್ಮಿಂದ ಉಡುಪಿನ ಅಂದ ಇನ್ನೂ ಹೆಚ್ಚಬೇಕು. ಹಾಗೆಯೇ ಉಡುಪಿನಿಂದ ನಿಮ್ಮಂದ. ಇದಕ್ಕಾಗಿ ಇಲ್ಲಿವೆ ಕೆಲ ಸಿಂಪಲ್ ಟಿಪ್ಸ್...

  •      ವಾರ್ಡ್‌ರೋಬ್‌ನಲ್ಲಿ ಎಲ್ಲ ಬಣ್ಣದ ದುಪ್ಪಟ್ಟಾಗಳಿರಲಿ. ಇಲ್ಲವೇ ಎಲ್ಲ ಬಣ್ಣವಿರುವ ಒಂದೇ ದುಪ್ಪಟ್ಟ ಇಟ್ಟುಕೊಳ್ಳುವುದೂ ಜಾಣತನ. ಸಲ್ವಾರ್, ಕುರ್ತಾ, ಜೀನ್ಸ್ ಏನೇ ತೊಟ್ಟರೂ ಈ ದುಪ್ಪಟ್ಟಾವನ್ನು ನಿಮ್ಮ ಡ್ರೆಸ್ಸಿನ ಅಂದ ಹೆಚ್ಚಿಸುಂತೆ ಬಗೆಬಗೆಯ ಸ್ಟೈಲ್‌ನಲ್ಲಿ ಧರಿಸಬಹುದು.
  •     ಉಡುಪಿನ ಫಿಟ್ಟಿಂಗ್ ಸರಿಯಾಗಿರಲಿ. ಅತಿ ಸಡಿಲ, ಇಲ್ಲವೇ ಇತಿ ಬಿಗಿಯಾದ ಉಡುಪು ಅಂದಗೆಡಿಸುತ್ತದೆ.
  •     ಸ್ಲೀವ್‌ಲೆಸ್ ಬ್ಲೌಸ್ ಅಥವಾ ಟಾಪ್ ಧರಿಸುವಾಗ ಕೈಗಳ ಭಾಗದ ಅಳತೆ ಸರಿಯಾಗಿರಲಿ. ಒಳಉಡುಪು ಕಾಣುವಂಥ ಟಾಪ್, ಅತಿಯಾದ ಡೀಪ್‌ನೆಕ್ ಟಾಪ್ ಅಸಭ್ಯವಾಗಿರುವುದಲ್ಲದೆ ನೋಡುವವರಿಗೂ ಮುಜುಗರ ಉಂಟುಮಾಡುತ್ತದೆ.
  •     ದಪ್ಪಗಿರುವವರು ದೊಡ್ಡ ದೊಡ್ಡ ಡಿಸೈನ್‌ಗಳಿರುವ ಉಡುಪು ಧರಿಸುವುದರಿಂದ ಇನ್ನೂ ದಪ್ಪ ಕಾಣಿಸುತ್ತಾರೆ. ಇವರಿಗೆ ಅಡ್ಡ ಪಟ್ಟಿಗಳಿಗಿಂತ ಉದ್ದ ಪಟ್ಟಿಗಳಿರುವ ಉಡುಪು ಉತ್ತಮ. ಸಣ್ಣಗಿರುವವರು ಅಡ್ಡಪಟ್ಟಿ ಧರಿಸುವುದರಿಂದ ದಪ್ಪಗಿರುವಂತೆ ಭಾಸವಾಗುತ್ತದೆ.
  •     ಸಂದರ್ಭಕ್ಕೆ ತಕ್ಕ ಉಡುಪು ಧರಿಸಿ. ಫ್ಯಾಮಿಲಿ ಗೆಟ್ ಟುಗೆದರ್, ಮದುವೆ-ಮುಂಜಿ ಮುಂತಾದ ಸಮಾರಂಭಗಳಿಗೆ ಭಾರತೀಯ ಉಡುಗೆಯೇ ಸರಿ.
  •     ಫ್ರೆಂಡ್ಸ್ ಜೊತೆ ಪಾರ್ಟಿ, ಹೊರಗಡೆ ಹೋಗುವಾಗ ಫ್ಯಾಶನೇಬಲ್ ಆದ ಬಟ್ಟೆ ಧರಿಸಬಹುದು.
  •     ದುಬಾರಿಯಾದ ಉಡುಪನ್ನೇ ಧರಿಸಬೇಕಂತಿಲ್ಲ. ನಿಮ್ಮ ಬಜೆಟ್‌ಗೆ ತಕ್ಕಂತೆ ಉಡುಪು ಖರೀದಿಸಿ. ಎಷ್ಟು ನೀಟಾಗಿ ಧರಿಸುತ್ತೀರಾ ಎಂಬುದು ಮುಖ್ಯವಷ್ಟೆ.
  •     ಸೀರೆ ಉಡುವಾಗ ಬ್ಲೌಸ್ ಸರಿಯಾಗಿ ಮ್ಯಾಚಿಂಗ್ ಇದೆಯೇ ಎಂದು ಖಾತರಿಪಡಿಸಿಕೊಳ್ಳಿ. ಫಿಟ್ಟಿಂಗ್ ಸರಿ ಇಲ್ಲದ, ಮ್ಯಾಚ್ ಆಗದ ಬ್ಲೌಸ್ ನಿಮ್ಮ ದುಬಾರಿ ಬೆಲೆಯ ಸೀರೆಯ ಅಂದಗೆಡಿಸುತ್ತದೆ.
  •     ಲೋ ವೆಸ್ಟ್ ಪ್ಯಾಂಟ್‌ಗಳು ಅನಗತ್ಯವಾಗಿ ಅಟೆನ್ಷನ್ ಸೆಳೆದು ಇರಿಸುಮುರಿಸು ಉಂಟುಮಾಡಬಹುದು.
  •     ನೀವು ಧರಿಸುವ ಉಡುಪು ನಿಮ್ಮ ವ್ಯಕ್ತಿತ್ವಕ್ಕೆ ಪೂರಕವಾಗಿರಲಿ. ನಿಮಗಿಷ್ಟವಿಲ್ಲದಿದ್ದರೂ ಫ್ಯಾಷನೆಬಲ್ ಎಂಬ ಕಾರಣಕ್ಕೆ ಧರಿಸಬೇಡಿ.
  •     ಕೊನೆಯದಾಗಿ ನೀವೆಷ್ಟೇ ಸುಂದರ ಉಡುಪು ಧರಿಸಿದರೂ ಗಂಟುಮುಖ ಅದನ್ನು ಹಾಳುಗೆಡವುತ್ತದೆ. ಹೀಗಾಗಿ ಸರಳ ಆಭರಣ- ಮುಖದ ಮೇಲೆ ಮುಗುಳ್ನಗೆ ಧರಿಸಲು ಮರೆಯದಿರಿ.
- ವೀಣಾ ಅನಂತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.