ಮಹಿಳೆ-ಮನೆ-ಬದುಕು

ಹೊನ್ನೇರು

ಹೊನ್ನೇರು
Published On :

ನಗರಗಳ ಗಂಟಲಿನಿಂದ ಮಾಯಾಕರೆ. ಇದಕ್ಕೆ ಓಗೊಟ್ಟು ಯುವಕರ ವಲಸೆ. ಪರಿಣಾಮ, ಹಳ್ಳಿಗಳೆಲ್ಲ ಇಂದು ವೃದ್ಧಾಶ್ರಮ. ಆದರೆ, ಕೆಲವರು ನಗರಕ್ಕೆ ಬಂದರೂ ಹಳ್ಳಿಯನ್ನು ಮರೆಯುವುದಿಲ್ಲ. ಅದನ್ನು ತಾವು ಮನೆ ಕಟ್ಟುವಾಗ ತೋರಿಸಿಕೊಳ್ಳುತ್ತಾರೆ.

ಮೈಸೂರಿನ ವಿಜಯನಗರ 4ನೇ ಹಂತ, ಮೊದಲ ಘಟ್ಟದಲ್ಲಿ ಕೆ.ಟಿ. ಕೃಷ್ಣಪ್ಪ- ಟಿ.ವಿ. ಸುಜಾತ ದಂಪತಿ 40x66ರ ನಿವೇಶನದಲ್ಲಿ ಹೊಸ ವಿನ್ಯಾಸದಲ್ಲೊಂದು ಮನೆ ಕಟ್ಟಿಸಿದ್ದಾರೆ. ಈ ಮನೆಯ ಹೆಸರು 'ಹೊನ್ನೇರು'. ನಗರದಲ್ಲಿದ್ದರೂ ಇದೊಂದು ಪಕ್ಕಾ ಹಳ್ಳಿ ಮನೆಯೇ!
ಕೃಷ್ಣಪ್ಪ ಅವರು ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಗ್ರಂಥಪಾಲಕ ಹಾಗೂ ಸುಜಾತಾ ಅವರು ಮಂಡ್ಯದ ಎಲ್‌ಐಸಿ ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿ.  ಯುಗಾದಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ರೈತರು ವಿಶೇಷವಾಗಿ ಉಳುಮೆಗೆ ಎತ್ತು ಕಟ್ಟುವುದಕ್ಕೆ ಹೊನ್ನೇರು ಎಂದು ಹೇಳುತ್ತಾರೆ. ಮನೆಯ ಎಲ್ಲಾ ಕಿಟಕಿ, ಬಾಗಿಲುಗಳನ್ನು ತೇಗದಿಂದ ನಿರ್ಮಿಸಲಾಗಿದೆ. ಎಲ್ಲಿಯೂ ಸ್ಟೀಲ್ ಬಳಸಿಲ್ಲ. ಸಾಂಪ್ರದಾಯಿಕ ಶೈಲಿಯಾಗಿ ಕಬ್ಬಿಣವನ್ನು ಬಳಸಲಾಗಿದೆ. ಸಾಮಾನ್ಯವಾಗಿ ಮನೆ ಕಟ್ಟುವಾಗ ಮೂಲೆಮಡಿಕೆ (ಗ್ರಾಮ್ಯ ಭಾಷೆ) ಅಂದರೆ ವೃತ್ತಾಕಾರ ಇಲ್ಲ. ಎಲ್ಲವೂ ಚೌಕಾಕಾರ.

ವಾಸ್ತುಶಿಲ್ಪಿ ಪಾರ್ವತಿ ರಾಮಕೃಷ್ಣ, ಇಲ್ಲಿ ಗೋಪುರ (ಪಿರಾಮಿಡ್) ವಿನ್ಯಾಸ ಮಾಡಿಕೊಟ್ಟಿದ್ದಾರೆ. ಮೊದಲ ಅಂತಸ್ತಿನಲ್ಲಿ 4 ಹಾಗೂ ಎರಡನೇ ಅಂತಸ್ತಿನಲ್ಲಿ 5 ಕಂಬಗಳಿವೆ. ಈ ಕಂಬಗಳ ತುದಿಯ ವಿನ್ಯಾಸ ಆಕರ್ಷಕ.

ಮೊದಲ ಅಂತಸ್ತಿನ ಮುಂಭಾಗದಲ್ಲಿ ಬೃಹದಾಕಾರದ ಹಸು- ಕರು ಉಬ್ಬು ಶಿಲ್ಪವನ್ನು ಕೆತ್ತಿಸಲಾಗಿದೆ. ಬೇರೆಡೆ ಕಟ್ಟುವಂತೆ ನೆಲ ಅಂತಸ್ತನ್ನು ಕಾಂಪೌಂಡ್‌ನ ಸಮೀಪದಲ್ಲಿಯೇ ಆರಂಭಿಸಿಲ್ಲ. ಬದಲಿಗೆ ಮೂರು ಕಾರುಗಳು ನಿಲ್ಲಿಸುವಷ್ಟು ಜಾಗಬಿಟ್ಟು ಕಟ್ಟಲಾಗಿದೆ. ಗೋಡೆಗೆ ಅಲ್ಲಲ್ಲಿ ಟೆರ್ರಾಕೋಟ ಟೈಲ್ಸ್ ಬಳಸಿದ್ದಾರೆ. ಮೊದಲ ಅಂತಸ್ತಿಗೆ ಹೋಗುವ ಮೆಟ್ಟಿಲುಗಳು ವಿಶಾಲವಾಗಿವೆ. ಮನೆಯ ಪ್ರವೇಶ ದ್ವಾರದ ಬಳಿ ಕಾಂಪೌಂಡ್‌ನಲ್ಲಿ, ಕಲಾವಿದ ಪ್ರಕಾಶ ಚಿಕ್ಕಪಾಳ್ಯರಿಂದ ಬರೆಸಿದ ನಾಮಫಲಕವೂ ವಿಭಿನ್ನವಾಗಿದೆ. ಕೃಷ್ಣಪ್ಪ ಅವರು ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಹಳ್ಳಿಯ ಮನೆಗಳಲ್ಲಿ ಇರುವಂತೆ ದವಸಧಾನ್ಯ ಸಂಗ್ರಹಕ್ಕೂ ಸಾಕಷ್ಟು ಜಾಗ ಬಿಟ್ಟಿರುವುದು ವಿಶೇಷ.
ಮೊದಲ ಅಂತಸ್ತಿನಲ್ಲಿ ಎರಡು ರೂಂಗಳು, ಒಂದು ಬೃಹತ್ ಹಾಲ್, ಡೈನಿಂಗ್ ಹಾಲ್, ಅಡುಗೆಮನೆ, ಶೌಚಾಲಯ ಮತ್ತಿತರ ಸೌಲಭ್ಯಗಳಿವೆ. ಮೊದಲ ಮಹಡಿ ಹಾಗೂ ಎರಡನೇ ಮಹಡಿ ಡುಫ್ಲೆಕ್ಸ್ ಮನೆ. ಒಟ್ಟು 4 ರೂಂಗಳು, 3 ಹಾಲ್‌ಗಳು. ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಲಾಗಿದೆ. ಕೃಷ್ಣಪ್ಪ ಅವರ ಸಂಪರ್ಕ ಸಂಖ್ಯೆ: 94486 43721.

- ಅಂಶಿ ಪ್ರಸನ್ನಕುಮಾರ್‌
ಚಿತ್ರ- ಎಸ್. ಮಂಜುನಾಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.