ಬಿದಿರಿನ ಸಿರಿ

ಮನೆಯನ್ನು ಅಂದಗೊಳಿಸಲು ಸಾಕಷ್ಟು ವೆಚ್ಚ ಮಾಡುವವರೇ ಹೆಚ್ಚು. ಆದರೆ, ಅದೇ ಅಂದ ಅಲ್ಪ ವೆಚ್ಚದಲ್ಲಿ ಸಿಕ್ಕರೆ ಯಾರು ತಾನೆ ಬೇಡ ಅಂತಾರೆ?
ಅದು ಬಿದಿರಿನಿಂದ ಸಾಧ್ಯ. ಮನೆ ಮುಂದಿನ ಮೈದಾನಕ್ಕೂ ಅದು ಸೂಕ್ತ. ಹೆಚ್ಚು ಎತ್ತರ ಬೆಳೆಯುವುದರಿಂದ ಮನೆಯೂ ತಂಪು. ಬಿದಿರು ಬಹಳಷ್ಟು ಜಾಗ ಆಕ್ರಮಿಸಿಕೊಳ್ಳುತ್ತದೆ ಎಂಬ ಆರೋಪವನ್ನು ನೀವು ಕೇಳಿಸಿಕೊಳ್ಳಬೇಡಿ. ಉದ್ಯಾನದ ತುಂಬಾ ಬೆಳೆದರೆ ಬಿದಿರಿಗೆ ಸಿಕ್ಕಾಪಟ್ಟೆ ಜಾಗ ಬೇಕು. ಆದರೆ, ಸ್ವಲ್ಪ ಬೆಳೆಯಲು ಆ ಪ್ರಮಾಣದಲ್ಲಿ ಜಾಗಬೇಡ.
ಬಿದಿರು ಹೆಚ್ಚು ಆರೈಕೆಯನ್ನೂ ಬಯಸುವುದಿಲ್ಲ. ವೆಚ್ಚವನ್ನೂ ಅದು ಕೇಳದು. ಬಿದಿರಿನಲ್ಲಿ ಎರಡು ಬಗೆ. ಮೊದಲನೆಯದು, 8-16 ಅಡಿ ಬೆಳೆಯುವ ಬಿದಿರು. ಮತ್ತೊಂದು ಶೋಗಾಗಿ ಬೆಳೆಯುವ ಸಣ್ಣ ಬಿದಿರು. ಈ ಎರಡೂ ಬಗೆಯ ಬಿದಿರನ್ನೂ ನೀವು ವರಾಂಡದಲ್ಲಿ ಬೆಳೆಯಬಹುದು. ಆದರೆ, ಸಣ್ಣ ಬಿದಿರು ಮಾತ್ರ ನಿಮ್ಮ ಮನೆಗೆ ಹೆಚ್ಚು ಆಕರ್ಷಣೆ ತಂದುಕೊಡಬಲ್ಲದು.
ಕಾಂಪೌಂಡ್‌ಗೂ ಬಿದಿರನ್ನು ಬಳಸಬಹುದು. ಒಣಗಿದ ಬಿದಿರನ್ನೇ ಕತ್ತರಿಸಿ, ಕಾಂಪೌಂಡ್‌ನಂತೆ ನೀಟಾಗಿ, ಗಟ್ಟಿಯಾಗಿ ಜೋಡಿಸಿಡಬಹುದು. ಇಲ್ಲವೆ, ದೊಡ್ಡ ಪ್ರಮಾಣದ ಬಿದಿರನ್ನು ಹಲಗೆಯಂತೆ ಕತ್ತರಿಸಿಯೂ ಕಾಂಪೌಂಡ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಈ ಕಾಂಪೌಂಡ್‌ಗೆ ಹಸಿರು ಬಣ್ಣ ಬಳಿದರೆ ಮತ್ತೂ ಮನಮೋಹಕ. ಜತೆಗೆ ಗೇಟ್ ಆಗಿಯೂ ಬಿದಿರು ಬಾಗಿ ನಿಲ್ಲುತ್ತದೆ. ಇದು ಕೂಡ ಕಡಿಮೆ ವೆಚ್ಚದಲ್ಲಿ. ಜತೆಗೆ ಉದ್ಯಾನದ ಸಣ್ಣ ಹೂವಿನ ಗಿಡಗಳ ಸುತ್ತಲೂ ಒಣಗಿದ ಬಿದಿರನ್ನು ಕಟ್ಟಿ. ಇದರಿಂದ ಮನೆಯ ಉದ್ಯಾನದ ಸೌಂದರ್ಯವೂ ವೃದ್ಧಿಯಾಗುತ್ತದೆ.
ಮನೆಯ ಒಳಗೆ ಬಿದಿರು
ಮುಂದಿನ ಉದ್ಯಾನವನ್ನು ಮಾತ್ರವಲ್ಲದೆ, ಮನೆಯೊಳಗಿನ ಸೌಂದರ್ಯಕ್ಕೂ ಬಿದಿರು ಉಪಯುಕ್ತ. ಮನೆಯ ಬಾಗಿಲ ಮೂಲಕ ಸೂರ್ಯನ ಕಿರಣಗಳು ಒಳಗೆ ಸೂಸುತ್ತಿದ್ದರೆ, ಅವುಗಳನ್ನು ತಡೆಯಲು ಬಿದಿರಿನ ಪರದೆಯಿಂದ ಸಾಧ್ಯ. ಅದು ಬಿಸಿಲನ್ನು ತಡೆಯುತ್ತದೆ. ಜತೆಗೆ ದೊಡ್ಡ ಪ್ರಮಾಣದ ಕಿಟಕಿಗಳಿಗೂ ಬಿದಿರಿನ ಪರದೆ ಮಾಡಿ ನೇತು ಹಾಕಬಹುದು. ಇದರಿಂದ ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣ ಸಿಗುತ್ತದೆ. ಈ ಪರದೆಯ ಮೇಲೂ ವಿನ್ಯಾಸ ಮಾಡಬಹುದು.
ಇನ್ನು ಬೆಡ್‌ರೂಂ, ಹಾಲ್‌ನಲ್ಲಿಯೂ ಬಿದಿರಿನ ಕೈಚಳಕ ತೋರಿಸಬಹುದು. ಬಿದಿರಿನ ಕೊಳವೆಯನ್ನು ಕೇವಲ ಹಾಲ್‌ನಲ್ಲಿ ಜೋತುಬಿಟ್ಟರೆ ಸಾಕು ಅದೊಂದು ಫ್ಯಾಷನ್. ಗುಬ್ಬಚ್ಚಿಯ ಗೂಡನ್ನು ತಯಾರಿಸಿ, ಅದಕ್ಕೆ ಬಣ್ಣ ಬಳಿದು, ಹಾಲ್‌ನ ಮೂಲೆಯಲ್ಲಿ ನೇತುಹಾಕಿ. ಅದರ ಲುಕ್ ಮನಸೂರೆಗೊಳ್ಳುತ್ತದೆ. ಸ್ಟಡಿ ಟೇಬಲ್‌ನ ಮೇಲೆ ಬಿದಿರಿನ ಬುಟ್ಟಿ ಇಟ್ಟು, ಅದರೊಳಗೆ ಹೂವನ್ನಿಡಿ. ಓದಲು ನಿಮಗೆ ಇನ್ನಷ್ಟು ಉಲ್ಲಾಸ ಸಿಗುತ್ತದೆ.
- ಬ್ರಹ್ಮಶ್ರೀ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


