ಕಲರ್‌ಫುಲ್ ಕವರ್

ಸಣ್ಣ ಸಣ್ಣ ಸಂಗತಿಗಳಲ್ಲೇ ಸೂರಿನ ಸೌಂದರ್ಯ ಅಡಗಿದೆ. ಅದರಲ್ಲೂ ಬೆಡ್‌ರೂಮಿಗೆ ಸೂಕ್ಷ್ಮ ಸಂಗತಿಗಳ ಸ್ಪರ್ಶ ನೀಡಲೇಬೇಕು.
ಬೆಡ್‌ರೂಮ್‌ನ ಗೋಡೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಆದರೆ, ನಿದ್ರೆ ಬಂದಾಗ ಮೈತುಂಬಾ ಹೊದ್ದುವ, ಚಳಿ ಇದ್ದಾಗ ಬೆಚ್ಚಗಿಡುವ ಹೊದಿಕೆ, ದಿಂಬು, ಹಾಸಿಗೆ ಬಗ್ಗೆ ಹೆಚ್ಚು ಆಸಕ್ತಿ ವಹಿಸುವುದೇ ಕಡಿಮೆ. ಜತೆಗೆ ಇವುಗಳಿಗೆ ರಕ್ಷಣೆ ನೀಡುವ ಕವರ್‌ಗಳೂ ಹೊರತಾಗಿಲ್ಲ.
ಸಾಮಾನ್ಯವಾಗಿ ಮಲಗುವ ಹಾಸಿಗೆ ಮೇಲೆ ನೇರವಾಗಿ ಬೆಡ್‌ಶೀಟ್ ಹಾಕಿ ಬಿಡುತ್ತೇವೆ. ವಾರಕ್ಕೆ 2-3 ಬಾರಿ ಬದಲಾಯಿಸಿದರೆ ಸಾಕು ಅಂದುಕೊಳ್ಳುತ್ತೇವೆ. ಹೀಗೆ ಬೆಡ್ ಕವರ್‌ಗಳ ಬಗ್ಗೆ ಉದಾಸೀನ ಹೆಚ್ಚಿನವರದು. ಬೆಡ್ ಕವರ್‌ಗಳು ಹಾಸಿಗೆಯನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸುತ್ತವೆ. ಜತೆಗೆ ಬೆಡ್‌ರೂಮ್‌ಗೂ ಮೆರುಗು ನೀಡುತ್ತವೆ. ಹೀಗಾಗಿ ಬೆಡ್ ಕವರ್‌ಗಳನ್ನು ಆಯ್ಕೆ ಮಾಡುವಾಗ ಕೆಲವೊಂದು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಉತ್ತಮ.
- ಕಾಟನ್, ಸಿಲ್ಕ್, ನಾರು ಬಟ್ಟೆ ಹೀಗೆ ಹಲವು ರೀತಿಯ ಬಟ್ಟೆಗಳಿಂದ ನೇಯ್ದ ಬೆಡ್ ಕವರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವು ನಿಮ್ಮ ಬೆಡ್‌ರೂಮ್ ಅಂದ ಹೆಚ್ಚಿಸುತ್ತವೆ.
- ಹೆಚ್ಚಾಗಿ ಕಿಂಗ್ ಸೈಜ್ ಮತ್ತು ಕ್ವೀನ್ ಸೈಜ್‌ನ ಬೆಡ್‌ಗಳಿರುತ್ತವೆ. ಆದರೆ, ಹೆಚ್ಚಿನ ಬೆಡ್‌ಗಳಿಗೆ ನಿರ್ದಿಷ್ಟ ಅಳತೆ ಇರುವುದಿಲ್ಲ. ಹೀಗಾಗಿ ಕವರ್ ಖರೀದಿಸುವ ವೇಳೆ ಸರಿಯಾದ ಅಳತೆ ತಿಳಿದುಕೊಂಡಿರಿ.
- ನಿಮ್ಮ ತಲೆದಿಂಬಿನ ಕವರ್‌ಗಳ ಮೇಲೆ ಹೆಚ್ಚಾಗಿ ಹೂವಿನಂಥ ಚಿತ್ರಗಳಿದ್ದರೆ ತುಂಬಾ ಚೆನ್ನ.
- ಬೆಡ್‌ಶೀಟ್ ಮೇಲೂ ತರಹೇವಾರಿ ಚಿತ್ರಗಳಿರುವ, ಚಿತ್ತಾಕರ್ಷವಾಗಿರುವ ವಿನ್ಯಾಸಗಳಿರಲಿ.
- ಮಲಗುವ ಗಾದಿಯ ಮೇಲಿರುವ ಬೆಡ್‌ಶೀಟ್‌ಗಳಲ್ಲೂ ಇದೇ ರೀತಿಯ ಚಿತ್ರಗಳಿದ್ದರೆ ತುಂಬಾ ಚೆನ್ನ.
- ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ನೇಮ್ ಮತ್ತು ಹೌಸ್ ಬ್ರ್ಯಾಂಡ್ ಬೆಡ್ ಕವರ್‌ಗಳು ಸಿಗುತ್ತವೆ. ಅವುಗಳು ಬೇರೆ ಬೇರೆ ಬಣ್ಣ, ವಿಧ ಮತ್ತು ಬೇರೆ ಬೇರೆ ಬೆಲೆಗಳಲ್ಲಿ ಲಭ್ಯ. ಹೀಗಾಗಿ ನಿಮ್ಮ ಮನೆಗೆ ಹತ್ತಿರವಾದ ಮತ್ತು ಹೆಚ್ಚು ಆಯ್ಕೆಗೆ ಅವಕಾಶವಿರುವ ಸ್ಟೋರ್‌ಗಳಿಂದ ಖರೀದಿಸಿ.
- ನೇಯ್ಗೆ ಹಾಗೂ ಗುಣಮಟ್ಟದ ಬಗ್ಗೆ ಮೊದಲೇ ತಿಳಿದುಕೊಳ್ಳಿ. ನೇಯ್ದ ಬಟ್ಟೆಗಳ ಖರೀದಿಯಾದರೆ ಅವುಗಳ ಲೇಬಲ್‌ನಲ್ಲಿರುವ ನೂಲಿನ ಸಂಖ್ಯೆಗಳನ್ನು ಗಮನಿಸಿ. ಸಾಮಾನ್ಯವಾಗಿ ನೇಯ್ದ ಬಟ್ಟೆಯ ನೂಲುಗಳ ಸಂಖ್ಯೆ 175ರಿಂದ 250 ರೊಳಗಿದ್ದರೆ ಬೆಡ್ ಕವರ್‌ಗಳು ತುಂಬಾ ಮೃದು ಮತ್ತು ನಯವಾಗಿರುತ್ತವೆ.
- ಕಾಟನ್ ಬಟ್ಟೆಗಳ ಕವರ್‌ಗಳು ತುಂಬಾ ಉತ್ತಮ. ಕಾರಣ, ಇದು ನಿಮ್ಮ ಸುಖ ನಿದ್ರೆಗೆ ಯಾವುದೇ ತೊಂದರೆಯಾಗಲ್ಲ. ಕಾಟನ್ ಅಲ್ಲದೇ ನಿಮ್ಮ ಬೆಡ್‌ರೂಮ್‌ನ ಹಾಸಿಗೆಯ ಸೌಂದರ್ಯ ಹೆಚ್ಚಿಸಲು ಸಿಲ್ಕ್ ಮತ್ತು ನಯವಾದ ಸ್ಯಾಟಿನ್ ಬಟ್ಟೆಗಳ ಕವರ್‌ಗಳೂ ಉತ್ತಮ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


