ಆರಾಮ ಕುರ್ಚಿ
ಈ ಕುರ್ಚಿ ಅಗಲವಾಗಿರುವುದರಿಂದ ಇಬ್ಬರು ಒಮ್ಮೆಲೆ ಕೂರಬಹುದು ಎಂಬ ಲೆಕ್ಕಾಚಾರದಲ್ಲಿದ್ದೀರಾ? ನಿಮ್ಮ ಊಹೆ ತಪ್ಪು. ಇದರಲ್ಲಿ ಒಬ್ಬರು ಮಾತ್ರ ಕೂರಬಹುದು! ವರಾಂಡದ ಪರಿಸರಕ್ಕನುಗುಣವಾಗಿ ಈ ಕುರ್ಚಿಯನ್ನು ನಿರ್ಮಿಸಲಾಗಿದೆ. ತಂಪಾದ ಗಾಳಿ ಪಡೆಯಲು, ರಿಲ್ಯಾಕ್ಸ್ ಆಗಲು ಇಲ್ಲಿ ಕೂರಬಹುದು. ಮನೆ, ಉದ್ಯಾನದಲ್ಲಿ ಇದನ್ನು ಹಾಕಿ ಅದರ ಸೌಂದರ್ಯವನ್ನು ಸವಿಯಲೆಂದೇ ಕ್ವೆಟ್ಜೆಲ್ ಕಂಪನಿಯು ಕೆಂಪು ಮೆರಾಂಟಿ ಮರದಿಂದ ಇದನ್ನು ರೂಪಿಸಿದೆ. ಅಂದಹಾಗೆ ಇದರ ಮಾರುಕಟ್ಟೆ ಬೆಲೆ 9,025.
ಟೀ ಟೇಬಲ್
ಮುಂಜಾವಿನ ತಂಪನೆಯ ಗಾಳಿಯೊಂದಿಗೆ ರುಚಿಯಾದ, ಬಿಸಿಯಾದ ಕಾಫಿ/ಟೀ ಸೇವಿಸಲು ಹೊಸ ವಿನ್ಯಾಸದಲ್ಲಿ ಝನ್ಸಾರ್ ಕಂಪನಿಯು ಟೇಬಲ್ಲೊಂದನ್ನು ರೂಪಿಸಿದೆ. ಟೀ ಜತೆಗೆ ವೃತ್ತಪತ್ರಿಕೆಗಳು, ಸಣ್ಣದಾದ ಹೂ ಕುಂಡವನ್ನೂ ಅದರ ಮೇಲಿಡಬಹುದು. ಹೆಚ್ಚು ಬಾಳಿಕೆ ಬರುವ ಈ ಟೇಬಲ್ಲನ್ನು ಮನೆಯಂಗಳದಲ್ಲಿಡಲು ಸೂಕ್ತವಾಗುವಂತೆ ತಯಾರಿಸಲಾಗಿದೆ. ಕಡಿಮೆ ಎತ್ತರದಲ್ಲಿರುವ ಈ ಟೇಬಲ್ಲಿನ ಕಾಲುಗಳು ಕತ್ತರಿಯಾಕಾರದಲ್ಲಿದೆ. ಟೇಬಲ್ ಮೇಲಿರುವ ಭಾಗ ಟ್ರೇ ಆಕಾರದಲ್ಲಿದ್ದು, ನೀರು ಬಿದ್ದರೂ ಏನಾಗದು. ಅಂದಹಾಗೆ, ಈ ಟೇಬಲ್ಲನ್ನು ಅಕೇಷಿಯಾ ಮರದಿಂದ ನಿರ್ಮಿಸಲಾಗಿದೆ. ಇದರ ಮೌಲ್ಯ ರು. 5,495.
ವಿಬಿಎಚ್‌ಸಿ ಅಪಾರ್ಟ್‌ಮೆಂಟ್
ದೇಶದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿರುವ ವಿಬಿಎಚ್‌ಸಿ (ವ್ಯಾಲ್ಯೂ ಆ್ಯಂಡ್ ಬಜೆಟ್ ಹೌಸಿಂಗ್ ಕಾರ್ಪೊರೇಷನ್) ಕಂಪನಿಯು ಬೆಂಗಳೂರಿನಲ್ಲಿ ಮಧ್ಯಮ ವರ್ಗದವರಿಗಾಗಿ ನೂತನ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದೆ. ಈಗಾಗಲೇ ಆನೇಕಲ್‌ನಲ್ಲಿ ಶೇ.80ರಷ್ಟು ಅಪಾರ್ಟ್‌ಮೆಂಟ್‌ಗಳನ್ನು ಕಂಪನಿ ನಿರ್ಮಿಸಿದೆ. ಈಗ ಮತ್ತೆ ಕೆಂಗೇರಿಯಲ್ಲಿ ಹೊಸ ಯೋಜನೆ ಹಾಕಿಕೊಂಡಿದೆ. ಉತ್ಕೃಷ್ಟ ದರ್ಜೆಯ ಕಟ್ಟಡ ಸಾಮಗ್ರಿಗಳ ಬಳಕೆ, ಪರಿಸರಸ್ನೇಹಿ ಕಟ್ಟಿಗೆ ಹಾಗೂ ಕಟ್ಟಡದ ಮೇಲ್ಭಾಗದಲ್ಲಿ ಸಣ್ಣ ಪ್ರಮಾಣದ ವ್ಯವಸಾಯ ವಿಬಿಎಚ್‌ಸಿಯ ವಿಶೇಷತೆ. ಈಗಾಗಲೇ ದೆಹಲಿ, ಕೋಲ್ಕತಾ, ಹೈದರಾಬಾದ್ ಸೇರಿದಂತೆ ನಾನಾ ಕಡೆ ಉತ್ಕೃಷ್ಟ ದರ್ಜೆಯ ಅಪಾರ್ಟ್‌ಮೆಂಟ್‌ಗಳನ್ನು ರೂಪಿಸಿದೆ. ಮಂಗಳೂರಿನತ್ತಲೂ ಕಂಪನಿ ಚಿತ್ತ ಹರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

