ವಾಸ ಮಾಡುವ ಮುನ್ನ
ನಿವೇಶನ ಆಯ್ಕೆ ಮಾಡುವಾಗ ಅದು ಯಾವ ದಿಕ್ಕಿನಲ್ಲಿ ಎತ್ತರವಾಗಿದೆ ಮತ್ತು ಯಾವ ದಿಕ್ಕಿನಲ್ಲಿ ಇಳಿಜಾರಾಗಿದೆ ಎಂಬುದರ ಕುರಿತು ನಿಜವಾಸ್ತುವಿನ ಮಾಹಿತಿ ಇಲ್ಲಿದೆ.
ನಿವೇಶನ ಕೊಳ್ಳುವುದು ಸರಳ. ಆದರೆ, ಕೊಳ್ಳುವ ಜಾಗ ಅಥವಾ ನಿವೇಶನ ವಾಸ್ತು ಪ್ರಕಾರವಾಗಿದೆಯೇ ಎಂಬುದು ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳಲ್ಲಿ ಒಂದು. ನಿವೇಶನ ಆಯ್ಕೆ ಮಾಡುವಾಗ ಅದು ಯಾವ ದಿಕ್ಕಿನಲ್ಲಿ ಎತ್ತರವಾಗಿದೆ ಮತ್ತು ಯಾವ ದಿಕ್ಕಿನಲ್ಲಿ ಇಳಿಜಾರಾಗಿದೆ ಎಂಬುದರ ಕುರಿತು ನಿಜವಾಸ್ತುವಿನ ಮಾಹಿತಿ ಇಲ್ಲಿದೆ.
ಪಿತಾಮಹ ವಾಸ್ತು
ಪೂರ್ವ ಮತ್ತು ಆಗ್ನೇಯದ ಮಧ್ಯೆ ಎತ್ತರ, ಪಶ್ಚಿಮ ಮತ್ತು ವಾಯುವ್ಯದ ಮಧ್ಯೆ ತಗ್ಗಾಗಿರುವ ಭೂಮಿ ಪಿತಾಮಹ ವಾಸ್ತು ಎನ್ನಿಸುತ್ತದೆ. ಇದು ಸುಖ ನೀಡುವಂತಹುದು.
ಸುಪಥ ವಾಸ್ತು
ದಕ್ಷಿಣ ಮತ್ತು ಆಗ್ನೇಯದ ಮಧ್ಯೆ ಎತ್ತರ, ಉತ್ತರ ಮತ್ತು ವಾಯುವ್ಯದ ಮಧ್ಯೆ ತಗ್ಗಾಗಿರುವ ಭೂಮಿ. ಇದು ಎಲ್ಲಾ ಕಾರ್ಯಗಳಲ್ಲಿ ಶುಭ.
ದೀರ್ಘಾಯು ವಾಸ್ತು
ಉತ್ತರ ಮತ್ತು ಈಶಾನ್ಯದ ಮಧ್ಯೆ ತಗ್ಗಾಗಿರುವ, ನೈಋತ್ಯ ಮತ್ತು ದಕ್ಷಿಣದ ಎತ್ತರವಿರುವ ಭೂಮಿ ದೀರ್ಘಾಯು ವಾಸ್ತು ಎನಿಸುತ್ತದೆ. ಇದು ಕುಲದ ವೃದ್ಧಿಯನ್ನು ಮಾಡುತ್ತದೆ.
ಪುಣ್ಯಕ ವಾಸ್ತು
ಪೂರ್ವ ಮತ್ತು ಈಶಾನ್ಯದಲ್ಲಿ ತಗ್ಗಾಗಿದ್ದು ಹಾಗೂ ಪಶ್ಚಿಮ ನೈಋತ್ಯದಲ್ಲಿ ಎತ್ತರವಾಗಿರುವ ಭೂಮಿ ಪುಣ್ಯಕ ವಾಸ್ತು. ಇದು ಬ್ರಾಹ್ಮಣರಿಗೆ ಶುಭ.
ಸ್ಥಾವರ ವಾಸ್ತು
ಆಗ್ನೇಯದಲ್ಲಿ ಎತ್ತರವಾಗಿದ್ದು ಮತ್ತು ನೈಋತ್ಯ ಈಶಾನ್ಯದಲ್ಲಿ ಹಾಗೂ ವಾಯವ್ಯದಲ್ಲಿ ತಗ್ಗಾಗಿದ್ದರೆ ಈ ಭೂಮಿ ಸ್ಥಾವರ ವಾಸ್ತು. ಇದು ಶುಭವಾದುದು.
ಮಾರ್ಗ ವಿನ್ಯಾಸ ಲಕ್ಷಣಗಳು
ನಿವೇಶನದ ನಾಲ್ಕು ಕಡೆಗೂ ಮಾರ್ಗ (ರಸ್ತೆ) ಇದ್ದರೆ ಸರ್ವಶ್ರೇಷ್ಠ.
= ನಿವೇಶನ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಮೂರು ಕಡೆಗಳಲ್ಲಿ ಮಾರ್ಗವಿದ್ದರೆ, ಸಾಮಾನ್ಯಶ್ರೇಣಿಯಾಗುತ್ತದೆ.
ನಿವೇಶನ ಎರಡು ದಿಕ್ಕುಗಳಲ್ಲಿ ಅಂದರೆ ಉತ್ತರ, ಪೂರ್ವದಲ್ಲಿ ಮಾರ್ಗ ಇದ್ದರೂ ಶ್ರೇಷ್ಠ.
ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಮಾರ್ಗವಿದ್ದರೆ ಸಾಮಾನ್ಯ ಶ್ರೇಣಿಯದಾಗಿರುತ್ತದೆ.
ಉತ್ತರ ಮತ್ತು ದಕ್ಷಿಣದಲ್ಲಿ ಮಾರ್ಗವಿರುವ ನಿವೇಶನ ಸಾಮಾನ್ಯ ಶ್ರೇಣಿಯದಾಗಿರುತ್ತದೆ.
ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಮಾರ್ಗವಿದ್ದರೆ ಅಂತಹ ನಿವೇಶನ ಸಾಮಾನ್ಯ ಶ್ರೇಣಿಯದ್ದಾಗಿದೆ.
ಈಶಾನ್ಯ ಕೋನ ಗೋಲಾಕಾರದ ಆಕೃತಿ ಹೊಂದಿರುತ್ತದೆಯೋ ಹಾಗೂ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಮಾರ್ಗ ಹೊಂದಿದ್ದರೆ ಸಾಮಾನ್ಯ ಶ್ರೇಣಿಯಾಗಿದೆ.
ದಕ್ಷಿಣ ಭಾಗದಲ್ಲಿ ಮಾತ್ರ ರಸ್ತೆಯಿದ್ದರೆ ದೋಷಯುಕ್ತ ಮತ್ತು ಅಶುಭ.
ಪಶ್ಚಿಮದಲ್ಲಿ ಮಾತ್ರ ಮಾರ್ಗ ಇದ್ದರೆ ಸಾಮಾನ್ಯ ಶ್ರೇಣಿಯದ್ದಾಗಿರುತ್ತದೆ. ಇದು ವ್ಯಾಪಾರಕ್ಕಾಗಿ ಉತ್ತಮ.
ಉತ್ತರ ಅಥವಾ ಪೂರ್ವದಲ್ಲಿ ಮಾರ್ಗವಿದ್ದರೆ ಶ್ರೇಷ್ಠವೆನ್ನಿಸುತ್ತದೆ.
ಆಗ್ನೇಯ ಕೋನ ಗೋಲಾಕಾರವಾಗಿದ್ದರೆ ಅಶುಭ ಫಲದಾಯಕ.
ಒಟ್ಟಿನಲ್ಲಿ ನಿವೇಶನಕ್ಕೆ ಉತ್ತರ, ಈಶಾನ್ಯ, ಪೂರ್ವ ದಿಕ್ಕಿನಲ್ಲಿ ಧನಾತ್ಮಕ ಕಿರಣಗಳು ಸಂಚಯವಾಗುತ್ತಿದ್ದು, ಆ ಭಾಗವು ತಗ್ಗಾಗಿದ್ದರೆ ಸರ್ವಶ್ರೇಷ್ಠ. ಇದಕ್ಕೆ ವಿರುದ್ಧವಾದ ಆಗ್ನೇಯ- ದಕ್ಷಿಣ- ವಾಯವ್ಯ ಮತ್ತು ಪಶ್ಚಿಮ ಭಾಗಕ್ಕೆ ಋಣಾತ್ಮಕ ಕಿರಣಗಳು ಸಂಚರಿಸುತ್ತಿದ್ದು ಆ ಭಾಗವು ಎತ್ತರವಾಗಿದ್ದರೆ ಶುಭವೆನಿಸಿದೆ.
-ಕೆ.ಎನ್. ಸಂಜೀವಮೂರ್ತಿ
88677 35868
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

