ಕಪಾಟುತನ

ಮನೆ, ಕಚೇರಿಗಳನ್ನು ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ನಿರ್ಮಿಸಬೇಕು. ಅದಕ್ಕೆ ತಕ್ಕಂತೆ ಜಾಗದ ಅಭಾವದಲ್ಲೇ ಸುಂದರವಾಗಿ ನಿರ್ಮಿಸಲು ಎಲ್ಲರೂ ಹರಸಾಹಸ ಪಡುತ್ತಾರೆ. ಇದ್ದ ಜಾಗದಲ್ಲೇ ವೈಶಿಷ್ಟ್ಯಪೂರ್ಣ ರೀತಿಯಲ್ಲಿ ಮನೆ ನಿರ್ಮಿಸುವುದು ಸಾಹಸವೇ ಸರಿ. ಇದಕ್ಕೆ ಇಂಟೀರಿಯರ್ ಡಿಸೈನ್ ಕೂಡ ಪ್ರಾಮುಖ್ಯ. ಅದಕ್ಕನುಗುಣವಾಗಿ ಕಪಾಟು ನಿರ್ಮಿಸಬೇಕಾಗುತ್ತದೆ. ಕಪಾಟು ಹೇಗಿರಬೇಕೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಅಡುಗೆ ಮನೆಯಲ್ಲಿ...
ಅಡುಗೆ ಕೋಣೆ ಎಂದರೆ ಮನೆಯ ಆಹಾರ ಇಲಾಖೆ ಇದ್ದ ಹಾಗೆ. ಇದರ ಜಾಗ ಅತ್ಯಂತ ಕಿರಿದಾಗಿರುತ್ತದೆ. ಆದರೆ ಫುಡ್ ಸರಬರಾಜು ಆಗೋದು ಇಲ್ಲಿಂದ ತಾನೇ. ಇದ್ದ ಜಾಗದಲ್ಲೇ ಅಚ್ಚುಕಚ್ಚಾದ ಕಪಾಟು(ಬೀರು) ಸಹ ಇರಲೇಬೇಕು. ಕಪಾಟು ಇದ್ದರೆ ಅಡುಗೆ ಸಾಮಗ್ರಿಗಳನ್ನು ಹೊಂದಿಸಿ ಇಟ್ಟುಕೊಳ್ಳಬಹುದು. ವುಡ್‌ನಿಂದ ತಯಾರಿಸಿದ ಕಪಾಟು ಇದ್ದರೆ ಅಡುಗೆ ಮನೆಗೆ ಶೋಭೆ. ಕಪಾಟಿಗೆ 'ಇನ್ನರ್ ಲಾಕ್' ಅವಶ್ಯ. ಅಡುಗೆ ಪದಾರ್ಥಗಳಿರುವುದರಿಂದ ಇನ್ನರ್ ಲಾಕ್ ಇಲ್ಲದಿದ್ದರೆ ಕ್ರಿಮಿಕೀಟಗಳು, ಜಿರಲೆಗಳು ಸೇರಿಕೊಳ್ಳುವ ಸಾಧ್ಯತೆ ಹೆಚ್ಚು.
ಬೆಡ್‌ರೂಮ್‌ನಲ್ಲಿ...
ನೀವು ನೈಸರ್ಗಿಕ ಥೀಮ್ ಹೊಂದಿದ್ದರೆ, ಕಪಾಟಿಗೆ ತಿಳಿಬಣ್ಣ ಮರದ ವಿನ್ಯಾಸ ಆಯ್ಕೆ ಮಾಡಬಹುದು. ಸಭೆ, ಸಮಾರಂಭಗಳಲ್ಲಿ ತೊಡುವ ಬಟ್ಟೆಗಳಿಗೆ, ಪ್ರತಿದಿನ ತೊಡುವ ಬಟ್ಟೆಗಳಿಗೆಂದು ಪ್ರತ್ಯೇಕವಾಗಿ ವಿನ್ಯಾಸಗೊಳಿಸಿಕೊಳ್ಳಬಹುದು. ಸೌಂದರ್ಯ ವರ್ಧಕ ಸಾಮಗ್ರಿಗಳನ್ನು ಕಪಾಟಿನಲ್ಲಿಡಬಹುದು. ಒಳ ಉಡುಪುಗಳನ್ನು ಕಪಾಟಿನ ಮೇಲ್ಭಾಗದಲ್ಲಿ ಇಟ್ಟರೆ ಚೆಂದ. ಚಪ್ಪಲಿಗಳನ್ನು ಇಡುವ ಸ್ಥಳವು ಕಪಾಟಿನ ಕೆಳಭಾಗದಲ್ಲಿದ್ದರೆ ಅನುಕೂಲ.
ಕಚೇರಿಯಲ್ಲಿ...
ಪ್ರತಿಯೊಂದು ಕಚೇರಿಗಳಲ್ಲಿ ಪತ್ರ ವ್ಯವಹಾರ ಇದ್ದೇ ಇರುತ್ತದೆ. ಅದಕ್ಕಾಗಿಯೇ ಕಚೇರಿಗಳಲ್ಲಿ ಕಪಾಟಿನ ಅವಶ್ಯಕತೆ ಮುಖ್ಯ. ಫೈಲ್‌ಗಳನ್ನು ಜೋಪಾನವಾಗಿ ಕಾಯ್ದುಕೊಳ್ಳುವುದು ಅತೀ ಮುಖ್ಯ. ಕಚೇರಿ ಕಪಾಟು ಜೋಡಣೆಯಲ್ಲಿ ಇಂಟೀರಿಯರ್ಸ್ ಡಿಸೈನ್ ವಿಶೇಷ.
ಫೈಲ್‌ಗಳ ಜೋಪಾನವಲ್ಲದೆ ಉದ್ಯೋಗಿಗಳಿಗೆ ಪ್ರತ್ಯೇಕವಾದ ಕಪಾಟನ್ನು ನೀಡಬೇಕಾಗುತ್ತದೆ. ಅನುಕೂಲಕ್ಕೆ ತಕ್ಕಂತೆ ಕಪಾಟನ್ನು ನಿರ್ಮಿಸಬೇಕಾಗುತ್ತದೆ.
ರೀಡಿಂಗ್ ರೂಮ್‌ನಲ್ಲಿ...
ಓದುವ ಕೋಣೆಯಲ್ಲಿ ಪುಸ್ತಕಗಳ ಸಾಮ್ರಾಜ್ಯವೇ ಇರುತ್ತದೆ. ಅದಕ್ಕನುಗುಣವಾಗಿ ಕಪಾಟು ಇರಲೇಬೇಕು. ಪುಸ್ತಕಗಳ ವಿಷಯವಾರು ವಿಂಗಡಣೆ ಮಾಡಿ ಕಪಾಟಿನಲ್ಲಿ ವಿವಿಧ ಖಾನೆ(ವಿಭಾಗ)ಗಳನ್ನು ಮಾಡಿಕೊಂಡರೆ ಪುಸ್ತಕ ಜೋಡಣೆ ಸಲೀಸು. ಬೇಕಾದ ಪುಸ್ತಕಗಳನ್ನು ಬೇಕೆಂದಾಗ ಬೇಗನೆ ಎತ್ತಿಕೊಳ್ಳಬಹುದು. ಪುಸ್ತಕಗಳು ಕಾಣುವ ಹಾಗೆ ಕಪಾಟಿನ ಬಾಗಿಲಿಗೆ ಗ್ಲಾಸ್ ಅಳವಡಿಸಿದ್ದರೆ ಇನ್ನೂ ಚೆಂದ. ಕಪಾಟಿನ ನೆಲ ಹಂತದವರೆಗೆ ಗ್ಲಾಸ್ ಬೇಡವೇ ಬೇಡ. ಚಿಕ್ಕ ಮಕ್ಕಳು ಗ್ಲಾಸ್ ಒಡೆಯುವ ಸಂಭವ ಹೆಚ್ಚಿರುತ್ತದೆ. ಪುಸ್ತಕ ಜೋಪಾನಕ್ಕೆ ಕಪಾಟಿಗೆ ಕೀಲಿ ವ್ಯವಸ್ಥೆ ಅಗತ್ಯ. ಕೀಲಿ ಇರದಿದ್ದರೆ ಜಿರಲೆಗಳು ಸೇರಿ ಪುಸ್ತಕ ನಾಶ ಮಾಡಬಹುದು ಎಚ್ಚರ!
ಕಪಾಟು ನಿರ್ವಹಣೆ ಹೇಗೆ?
- ಕಪಾಟಿನ ಒಳಗೆ ಧೂಳು ಸೇರದ ಹಾಗೆ ನೋಡಿಕೊಳ್ಳಬೇಕು.
- ಜಿರಲೆಗಳು ಕಪಾಟಿನೊಳಗೆ ನುಸುಳದಂತೆ ಎಚ್ಚರ ವಹಿಸಬೇಕು.
- ಕಪಾಟು ಶುಚಿಯಾಗಿಡಲು ಆಗಾಗ ಸ್ವಚ್ಛಗೊಳಿಸಬೇಕು.
- ಕೀಟಗಳು ಕಪಾಟಿನೊಳಗೆ ಬರದ ಹಾಗೆ ಪಾಷಾಣ ಇಡಬೇಕು.
- ಅಡುಗೆ ಮನೆಯ ಕಪಾಟಿನಲ್ಲಿಡುವ ಪದಾರ್ಥಗಳನ್ನು ಮುಚ್ಚಿಡುವುದು ಒಳಿತು.
- ಕಚೇರಿ ಕಪಾಟುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು.
pramaadaka@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


