ಮಹಿಳೆ-ಮನೆ-ಬದುಕು

ಬೆಳಕಾಗಿ ಬಾ...

ಬೆಳಕಾಗಿ ಬಾ...
Published On :

ಬೆಳಕು ಮನೆಗೆ ಅತ್ಯಗತ್ಯ. ಮನೆಯ ಮೂಲೆಯಲ್ಲಿರುವ ಕತ್ತಲು ಜೊತೆಗೆ ಮನದಲ್ಲಿರುವ ಕತ್ತಲನ್ನು ತೊಳೆದು ಹಾಕುತ್ತದೆ ಬೆಳಕು. ಆದರೆ, ಯಾವ ರೀತಿಯ ಬೆಳಕಿದ್ದರೆ ಚೆನ್ನ? ಎಲ್ಲಿ ಯಾವ ಬಣ್ಣದ ಬೆಳಕಿರಬೇಕು? ಯಾವ ಭಾಗದಲ್ಲಿ ಯಾವ ಬಗೆಯ ಬೆಳಕಿದ್ದರೆ ಮನೆ ಆಕರ್ಷಕ?
*ಸ್ವಂತ ಕೋಣೆಯಲ್ಲಿ ಅಥವಾ ಬೆಡ್‌ರೂಮ್‌ನಲ್ಲಿ ಹಸಿರು ಬಣ್ಣದ ಬೆಡ್ ಲ್ಯಾಂಪ್ ಇದ್ದರೆ, ಹೆಚ್ಚು ಆಕರ್ಷಕ. ಆದರೆ, ಗೋಡೆಯ ಬಣ್ಣ ಮಾತ್ರ ಬಿಳಿಯಾಗಿರಬೇಕು. ಸೂರ್ಯೋದಯವಾಗುವ ಭಾಗದ ಗೋಡೆ ತಿಳಿಗೆಂಪಿನಿಂದ ಕೂಡಿರಬೇಕು. ಹೀಗಿದ್ದಲ್ಲಿ ರೂಮ್‌ನಲ್ಲಿ ಹೊಸತನ ಉಂಟು ಮಾಡುತ್ತದೆ.
* ಮನೆಯ ಹಾಲ್‌ನಲ್ಲಿ ಗೋಡೆಯ ಬಣ್ಣ ಸಂಪೂರ್ಣ ಬಿಳಿಯಾಗಿದ್ದರೆ, ಅಲ್ಲಿ ತಿಳಿ ಕೆಂಪಿನ ಮುಚ್ಚಳದ ಚೌಕಾಕಾರದ ಲ್ಯಾಂಪ್ ಇದ್ದರೆ ಚೆನ್ನ. ಅದರ ಮಂದ ಬೆಳಕು ಗೋಡೆ ಬೀಳುವುದರಿಂದ ಹೆಚ್ಚು ಆಕರ್ಷಣೆಯಾಗಿ ಕಾಣುತ್ತದೆ. ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ.
* ಸಣ್ಣಸಣ್ಣ ಕಟ್ಟಿಗೆ ಚೂರುಗಳನ್ನು ಬಳಸಿಕೊಂಡು ಅದನ್ನು ಲ್ಯಾಂಪ್‌ಗೆ ಆಧಾರವಾಗಿ ಬಳಸಬಹುದು. ಅಲ್ಲದೆ, ಇಲ್ಲಿ ಅಳವಡಿಸುವ ಬಲ್ಬ್ ಬಿಳಿ ಬಣ್ಣದ್ದಾಗಿರಲಿ.
* ನಿಮ್ಮ ಮನೆ ಸಂಪೂರ್ಣವಾಗಿ ಜನಪದ ಶೈಲಿಯಲ್ಲಿದ್ದರೆ, ಮಣ್ಣಿನಿಂದ ಮಾಡಿದ ವಿದ್ಯುತ್ ಚಾಲಿತ ಲ್ಯಾಂಪ್ ಅನ್ನೇ ಬಳಸಬಹುದು. ಇದು ರೂಮ್‌ನಲ್ಲಿ ಹೆಚ್ಚು ಅತ್ಯಾಕರ್ಷಕವಾಗಿ ಕಾಣುತ್ತದೆ.
* ಮನೆಯ ಹೊರಗೆ ಅಂದರೆ, ಕೌಂಪೌಂಡ್ ಮೇಲೆ ಲಾಟೀನು ರೀತಿಯ ಲ್ಯಾಂಪ್‌ಗಳೂ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಇವುಗಳು ಕೂಡ ಮನೆಯ ಹೊರಸೌಂದರ್ಯಕ್ಕೆ ಹೆಚ್ಚು ಮೆರುಗು ನೀಡುತ್ತವೆ.
* ಮನೆಯಲ್ಲಿ ನಿಮ್ಮ ಸ್ವಂತ ಕಚೇರಿಯಿದ್ದರೆ ಕಟ್ಟಿಗೆಯಲ್ಲಿಯೇ ಕಲಾಕೃತಿ ಮಾಡಿದ ಲ್ಯಾಂಪ್ ಬಳಸಿ. ಬಲ್ಬ್‌ಗೆ ಚಾಕೋಲೇಟ್ ಬಣ್ಣದ ಮುಚ್ಚಳ ಇದ್ದರೆ, ಅಲ್ಲಿ ಬೀಳುವ ಮಂದ ಬೆಳಕು ಅತ್ಯಾರ್ಷಕವಾಗಿರುತ್ತದೆ.
* ಬಿದಿರಿನಿಂದ ಮಾಡಿದ ಲ್ಯಾಂಪ್ ಕೂಡ ಈಗ ಆಕರ್ಷಣೆಗಳಲ್ಲಿ ಒಂದು. ತೆಳುವಾದ ಬಿದರಿನಿಂದ ಮಾಡಿದ ಈ ಲ್ಯಾಂಪ್ ಅನ್ನು ಹಾಲ್‌ನ ಮೇಲಕ್ಕೆ ನೇತು ಹಾಕಿದರೆ ಉತ್ತಮ. ಅದರಡಿ ಹೊರಸೂಸುವ ಬೆಳಕು ಮನೆಗೆ ಮೆರುಗು ನೀಡುತ್ತದೆ.
* ಸ್ವಾಭಾವಿಕ ಕಟ್ಟಿಗೆಯಿಂದ ತಯಾರಿಸಿರುವ ವೂವೆನ್ ಕಟ್ಟಿಗೆಯ ಸುರುಳಿಯಾಕಾರದ ಉದ್ದನೆಯ ಲ್ಯಾಂಪ್ ಕೂಡ ಮಂದ ಬೆಳಕು ಬೀರಬಲ್ಲದು. ಇದು ಆಂತರಿಕ ವಿನ್ಯಾಸ ಮಾತ್ರವಲ್ಲ, ಬಾಹ್ಯವಿನ್ಯಾಸಕ್ಕೂ ಉಪಯೋಗಿಸಬಹುದು.


-ಬ್ರಹ್ಮಾನಂದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.