ರಕ್ತ ಚರಿತೆ

ಇತ್ತೀಚಿನ ದಿನಗಳಲ್ಲಿ ಮಹಿಳೆ ಹಾಗೂ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮುಖ್ಯ ತೊಂದರೆ ರಕ್ತಹೀನತೆ. ನಿಶ್ಯಕ್ತಿ, ಬಳಲಿಕೆ ಇತ್ಯಾದಿ ಕಾರಣಗಳಿಂದ ದಿನನಿತ್ಯ ಆಸ್ಪತ್ರೆಗೆ ದಾಖಲಾಗುತ್ತಿರುವವರನ್ನು ನಾವು ಕಾಣುತ್ತೇವೆ. ನಮ್ಮ ದೇಶದಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ರಕ್ತಹೀನತೆಗೆ ಕಬ್ಬಿಣದ ಅಂಶ ಹಾಗೂ ವಿಟಮಿನ್‌ಗಳ ಕೊರತೆ ಮುಖ್ಯ ಕಾರಣ. ಇಂಥವರು ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ರಕ್ತಹೀನತೆಯಂಥ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿದುಕೊಳ್ಳುವುದೂ ಅಷ್ಟೇ ಅವಶ್ಯಕ.
ಶೇಖರಿಸಿದ ಆಹಾರಗಳನ್ನು ಬಳಸುವುದು ಇಂದು ಹೆಚ್ಚಾಗಿದೆ. ಆಹಾರಗಳನ್ನು ಬಹಳ ದಿನಗಳವರೆಗೆ ಶೇಖರಿಸಿದಾಗ ಅವುಗಳ ಗುಣಮಟ್ಟ ಕಡಿಮೆಯಾಗುತ್ತದೆ. ಆಹಾರದಲ್ಲಿನ ಜೀವಸತ್ವ ನಷ್ಟವಾಗುತ್ತದೆ. ಇದರ ಸೇವನೆ ಕೂಡ ರಕ್ತಹೀನತೆಗೆ ಕಾರಣವಾಗುತ್ತದೆ.
ರಕ್ತಹೀನತೆಯನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆಯಿಂದ, ಪ್ರತಿದಿನ ಕಬ್ಬಿಣ ಹಾಗೂ ವಿಟಮಿನ್‌ಯುಕ್ತ ಆಹಾರ ಸೇವಿಸುವ ಮೂಲಕ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.
ಕಾರಣಗಳೇನು?
- ಸಮತೋಲನ ಆಹಾರದ ಕೊರತೆ.
- ಕಾಯಿಲೆಗಳು.
- ಜಂತುಹುಳುವಿನ ಬಾಧೆ...(ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ.)
- ಮಹಿಳೆಯರಲ್ಲಿ ಉಂಟಾಗುವ ಅತಿಯಾದ ಮುಟ್ಟಿನ ಸ್ರಾವ. ಬಿಳಿ ಸ್ರಾವ, ದೀರ್ಘಕಾಲ ಗರ್ಭನಿರೋಧಕ ಸಾಧನಗಳ ಅಳವಡಿಕೆ.
- ಅತಿಯಾದ ಕ್ಷಾರ, ಆಮ್ಲ, ಲವಣ ಪದಾರ್ಥಗಳ ಸೇವನೆ.
- ಅತಿಯಾದ ವ್ಯಾಯಾಮ.
- ಮನಸ್ಸಿನ ದುಗುಡ, ಚಿಂತೆ, ಒತ್ತಡದಲ್ಲಿ ಕೆಲಸ ಮಾಡುವುದು.
- ಮನಸ್ಸು ಹಾಗೂ ಶರೀರ ದುರ್ಬಲವಾಗುವುದು.
- ತಲೆಸುತ್ತು ಹಾಗೂ ಉಸಿರಾಟದ ತೊಂದರೆ.
- ಆಲಸ್ಯ, ಊಟ ಸೇರದಿರುವುದು.
- ಕೈ ಕಾಲು, ಸಂದುಗಳಲ್ಲಿ ನೋವು.
- ಅತಿಯಾದ ಬಾಯಾರಿಕೆ.
- ಅತಿಯಾಗಿ ಜೊಲ್ಲು ಸುರಿಯುವುದು.
- ಮೆಂತೆಪುಡಿ ಹಾಗೂ ಕರಿಬೇವಿನ ಪುಡಿಯನ್ನು ಖಾಲಿಹೊಟ್ಟೆಯಲ್ಲಿ ಸೇವಿಸಬೇಕು.
- ನುಗ್ಗೆಸೊಪ್ಪನ್ನು ಆಹಾರದಲ್ಲಿ ಸೇವಿಸಬೇಕು.
- ಬಾಳೆದಿಂಡಿನ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
- ನೆಲ್ಲಿಕಾಯಿ ಪುಡಿ ಹಾಗೂ ಜೀರಿಗೆ ಪುಡಿಯನ್ನು ಮಜ್ಜಿಗೆ ಜತೆ ಊಟಕ್ಕೆ ಮೊದಲು ಸೇವಿಸುವುದರಿಂದ ರಕ್ತಹೀನತೆ ಕಡಿಮೆಯಾಗುವುದು.
- ಆಡುಸೋಗೆ ಸೊಪ್ಪಿನ ರಸದ ಜತೆ ಜೇನುತುಪ್ಪ ಸೇರಿಸಿ ಸೇವಿಸಬೇಕು.
- ಒಣದ್ರಾಕ್ಷಿ ಹಾಗೂ ಖರ್ಜೂರ ಸೇವನೆ.
- ಬಸಳೆಸೊಪ್ಪಿನ ಉಪಯೋಗದಿಂದ ರಕ್ತಹೀನತೆ ನಿವಾರಣೆಯಾಗುವುದು.
- ಬೂದುಕುಂಬಳಕಾಯಿ ರಸದ ಜತೆ ಜೀರಿಗೆಪುಡಿ ಸೇವನೆ.
- ದಾಳಿಂಬೆ ಸರವನ್ನು ಧನಿಯಾ-ಪಿಪ್ಪಲಿ-ಶುಂಠಿ ಜತೆ ಸೇವಿಸುವುದರಿಂದಲೂ ರಕ್ತಹೀನತೆ ನಿವಾರಣೆಯಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


