ಮಹಿಳೆ-ಮನೆ-ಬದುಕು

ಶುಭ ನಿದ್ರೆ

ಶುಭ ನಿದ್ರೆ
Published On :

ಸರಿಯಾಗಿ ನಿದ್ರೆಯಾಗದಿದ್ದರೆ ನರಕಯಾತನೆ ತಪ್ಪಿದ್ದಲ್ಲ. ನಿದ್ರಾಹೀನತೆ ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಆರೋಗ್ಯಕ್ಕೂ ಅಡ್ಡಿಯೇ. ಅಷ್ಟೇ ಅಲ್ಲ, ನಮ್ಮ ದಿನಚರಿಯಲ್ಲೂ ಏರಿಳಿತ ಆಗುತ್ತದೆ. ಹೀಗಾಗಿ ನಿತ್ಯ ಕನಿಷ್ಠ ಆರು ಗಂಟೆ ನಿದ್ರೆ ಅಗತ್ಯವಾಗಿ ಬೇಕೇ ಬೇಕು.

ಕಷ್ಟಪಡುವವನಿಗೆ ಬೀದಿಯಲ್ಲಿದ್ದರೂ ನಿದ್ರೆ ಬರುವಂತೆ, ಎಸಿ ಅಥವಾ ನಾನ್ ಎಸಿ ಹೊಂದಿರುವ ಕಂಪನಿಗಳಲ್ಲಿ ಕೆಲಸ ಮಾಡಿ ಸುಸ್ತಾಗಿ ಬಂದಿರುವವರಿಗೆ ನಿದ್ರೆ ಬರಬೇಕಲ್ಲ... ಅದು ಸ್ವಲ್ಪ ದುಸ್ತರವಾದ ಕೆಲಸವೇ. ಇನ್ನು ರಾತ್ರಿ ಪಾಳೆಯದಲ್ಲಿ ಕೆಲಸ ಮಾಡಿ ಬಂದವರ ಕಥೆಯಂತೂ ಹೇಳತೀರದು.

ಹೀಗಾಗಿ ಕೆಲಸ ಮಾಡಿ ಆರಾಮದಾಯಕವಾಗಿ ಸುಖ ನಿದ್ರೆಗೆ ಜಾರಲು ಅದಕ್ಕೆ ತಕ್ಕದಾದ ವಾತಾವರಣವೂ ಇರಬೇಕು. ಅದಕ್ಕೆಂದು ನಮಗೆ ನಮ್ಮದೆಯಾದ ಬೆಡ್‌ರೂಮ್ ಇದ್ದರೆ ಚೆನ್ನ. ಅದರೊಟ್ಟಿಗೆ ಅಲ್ಲಿನ ವಾತಾವರಣವೂ ನಿದ್ರೆಗೆ ಜಾರುವಂತಿದ್ದರೆ ಇನ್ನೂ ಚೆನ್ನ. ಹಾಗಾದರೆ ಸುಖ ನಿದ್ರೆಗೆ ಜಾರಲು ಕೆಲವೊಂದು ಟಿಪ್ಸ್‌ಗಳನ್ನು ಪಾಲಿಸಿದರೆ ಸಾಕು...

  • ಟಿವಿ ನಿಮ್ಮ ನಿದ್ರೆಯನ್ನು ಕದಿಯುತ್ತದೆ. ಹೀಗಾಗಿ ಬೆಡ್‌ರೂಮ್‌ನಲ್ಲಿ ಟಿವಿಗೆ ಜಾಗ ನೀಡಬೇಡಿ. ಅದು ಹಾಲ್‌ನಲ್ಲಿ ಅಥವಾ ಬೇರೆ ಕೊಠಡಿಯಲ್ಲಿದ್ದರೆ ಉತ್ತಮ.
  • ಬೆಡ್‌ರೂಮ್‌ಗೆ ಗಾಢ ಬಣ್ಣಗಳನ್ನು ಬಳಿಯುವುದು ಬೇಡ. ಬಣ್ಣಗಳು ಸಹ ನಿದ್ರೆಗೆ ಜಾರುವಂತೆ ಮಾಡುತ್ತವೆ. ಬಣ್ಣಗಳು ನಮ್ಮ ಕಣ್ಣು ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರುವುದರಿಂದ ಆದಷ್ಟು ತಿಳಿ ಬಣ್ಣಗಳು ನಿಮ್ಮ ಬೆಡ್‌ರೂಮ್ ಗೋಡೆಯನ್ನು ಆವರಿಸಿಕೊಂಡಿರಲಿ.
  • ಬೆಳಗ್ಗೆ ಎದ್ದ ತಕ್ಷಣ ಎದುರಿನ ಗೋಡೆಯ ತಿಳಿಬಣ್ಣವನ್ನು ನೋಡಿದರೆ ಮನಸ್ಸೂ ಪ್ರಫುಲಗೊಳ್ಳುತ್ತದೆ. ಜತೆಗೆ ಅಂದಿನ ದಿನಚರಿಯೂ ಉತ್ಸಾಹದಿಂದ ಸಾಗುತ್ತದೆ.
  • ಕೆಲವೊಮ್ಮೆ ರಾತ್ರಿ ವೇಳೆ ಎಚ್ಚರವಾದಾಗ ಹೊರಗಿನ ಮಂದ ಬೆಳಕು ನಿಮ್ಮ ಕೋಣೆಯೊಳಗೆ ಬಿದ್ದು ಅದು ನಿಮ್ಮಲ್ಲಿ ಭಯ ಸೃಷ್ಟಿಸಬಹುದು. ಆದ್ದರಿಂದ ಮಲಗುವ ವೇಳೆ ಬೆಡ್‌ರೂಮ್‌ನಲ್ಲಿ ಸಂಪೂರ್ಣ ಕತ್ತಲು ಆವರಿಸಲು ಕಿಟಕಿ, ಬಾಗಿಲುಗಳಿಗೆ ಗಾಢ ಬಣ್ಣದ ಕರ್ಟೈನ್‌ಗಳನ್ನು ಬಳಸಿ. ಇದರಿಂದ ಹೊರಗಿನ ಬೆಳಕು ಕೋಣೆಯೊಳಗೆ ಬಿದ್ದು ನಿದ್ರೆಯನ್ನು ಹಾಳುಮಾಡುವುದಿಲ್ಲ. ಮುಂಜಾವಿನಲ್ಲಿ ಹೊರಗಿನ ಬೆಳಕು ನಿಮ್ಮ ನಿದ್ರೆಗೆ ಭಂಗವಾಗುವುದಿಲ್ಲ.
  • ಕೆಲವರಿಗೆ ರಾತ್ರಿ ಪೂರ್ತಿ ಕತ್ತಲು ಮಾಡಿ ಮಲಗುವುದೆಂದರೆ ಭಯ. ಹೀಗಾಗಿ ಬೆಡ್‌ರೂಮ್‌ನಲ್ಲಿ ಮಂದ ಬೆಳಕಿನ ವಿದ್ಯುತ್ ಬಲ್ಬ್‌ಗಳನ್ನು ಬಳಸಬಹುದು.
  • ಬೆಡ್‌ರೂಮ್‌ಗೆ ಹತ್ತಿರವಾಗಿ ಬಾತ್‌ರೂಮ್ ಇದ್ದರೆ ಮಲಗುವ ಮೊದಲು ಮುಂಚೆ ಬಾತ್‌ರೂಮ್‌ನ ಟ್ಯಾಪ್‌ಗಳನ್ನು ಸರಿಯಾಗಿ ಆಫ್ ಮಾಡಿ. ಅಂತೆಯೇ ರೂಮಿನ ಕಿಟಕಿ, ಬಾಗಿಲುಗಳನ್ನು ಸರಿಯಾಗಿ ಮುಚ್ಚಿ ಅಥವಾ ಸ್ಟ್ಯಾಂಡ್ ಹಾಕಿ ನಿಲ್ಲಿಸಿದರೆ, ಅದರಿಂದಾಗುವ ಶಬ್ದದ ಕಿರಿಕಿರಿ ತಪ್ಪುತ್ತದೆ. ರೂಮ್‌ನೊಳಗೆ ಯಾವುದಾದರೂ ದುರ್ಗಂಧವಿದ್ದರೆ, ಏರ್‌ಫ್ರೆಶನರ್ ಬಳಸಿದರೆ ನಿಮ್ಮ ಸುಖ ನಿದ್ರೆಗೆ ಭಂಗವಾಗೋದಿಲ್ಲ.
  • ರೂಮ್‌ನ ತಾಪಮಾನ ಒಂದೇ ರೀತಿ ಇರುವಂತೆ ನೋಡಿಕೊಳ್ಳಿ.
  • ಮಲಗುವಾಗ ತಲೆ ಮೇಲೆ ನೇತಾಡುವ ಕ್ಯಾಲೆಂಡರ್, ಕರಕುಶಲ ವಸ್ತುಗಳನ್ನು ಇಡಬೇಡಿ. ಅದರ ಸದ್ದು ಅಥವಾ ಯಾವುದಾದರೂ ತೊಂದರೆಯಿಂದ ಅದು ಬಿದ್ದು ನಿಮ್ಮ ನಿದ್ರೆಗೆ ಅಡ್ಡಿ ಮಾಡಬಹುದು.
  • ಮಲಗೋ ಮುಂಚೆ ಬೆಡ್, ಅದರ ಕವರ್, ದಿಂಬು, ಬೆಡ್‌ಶೀಟ್‌ಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿಡಿ.
- ವಿದ್ಯಾ ಇರ್ವತ್ತೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.