ವಾಟರ್ ಫಿಲ್ಟರ್
ಅಡುಗೆಮನೆಯಲ್ಲಿ ಎಲ್ಲವೂ ಇರಬೇಕೆಂದು ಆಸೆಪಡುತ್ತೇವೆ. ಅದು ಅತ್ಯಾಧುನಿಕವಾಗಿದ್ದರೆ ಇನ್ನೂ ಚೆನ್ನ ಎಂಬುದು ಮತ್ತೊಂದು ಆಸೆ ಬೇರೆ. ಅಂಥ ಅತ್ಯಾಧುನಿಕ ಕಿಚನ್ ಮನೆಯಲ್ಲಿದ್ದರೆ, ಅದಕ್ಕೆ ತಕ್ಕದಾದ ನೀರು ಶುದ್ಧೀಕರಣ ಯಂತ್ರವನ್ನು (ವಾಟರ್ ಪ್ಯುರಿಫೈಯರ್) ಫೋರ್ಬ್ಸ್ ಕಂಪನಿಯು ರೂಪಿಸಿದೆ. ಫಿಲ್ಟರ್ ನೀರು ಬೇರೆ ಬೇರೆಯಾಗಿರುತ್ತದೆ ಎಂಬ ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದ ನಂತರ ಫೋರ್ಬ್ಸ್ ಕಂಪನಿಯು ಈಗ ಮೊದಲಿನ ವಾಟರ್ ಫಿಲ್ಟರ್ ಅನ್ನೇ ಉನ್ನತೀಕರಿಸಿ ಮತ್ತೊಂದು ಫಿಲ್ಟರ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದು ಅಡುಗೆ ಮನೆಗೂ ಹೇಳಿ ಮಾಡಿಸಿದಂಥ ವಿನ್ಯಾಸವೂ ಹೌದು. ಅಂದಹಾಗೆ, ಇದರ ಮಾರುಕಟ್ಟೆ ಬೆಲೆ 21,990.
ಪ್ಲೇಟ್‌ಗಳಲ್ಲಿ ಪೇಂಟ್
ಮನೆಯ ಗೋಡೆಗಳಲ್ಲಿ ಬಣ್ಣಗಳನ್ನು ಬಳಿಯುವುದು ಮಾಮೂಲಿ. ಈಗ ಗೋಡೆಗಳಲ್ಲಿ ಪೇಂಟ್ ಜತೆಗೆ ವಿವಿಧ ಚಿತ್ರಗಳನ್ನು ಬಿಡಿಸುವುದು ಸಾಮಾನ್ಯವೂ ಆಗಿಬಿಟ್ಟಿದೆ. ಈಗ ಮತ್ತೊಂದು ಹೊಸ ಟ್ರೆಂಡ್ ಎಂಬಂತೆ ನಿತ್ಯ ಬಳಸುವ ಪ್ಲೇಟ್‌ಗಳಲ್ಲೂ ವಿನ್ಯಾಸ ಮೂಡುತ್ತಿವೆ. ಇದು ಉಪಹಾರ, ಊಟಕ್ಕೆ ಹೊಸ ಮೆರುಗು ನೀಡುತ್ತದೆ ಎಂಬ ಸಂಗತಿಯನ್ನು ಸಂಶೋಧಕರು ಹೊರ ಹಾಕಿದ್ದಾರೆ. ಅದಕ್ಕಾಗಿ ಹಲವು ಕಂಪನಿಗಳೂ ಈಗ ಪ್ಲೇಟ್‌ಗಳು ಹಾಗೂ ಟೀ, ಕಾಫಿ ಕುಡಿಯುವ ಗ್ಲಾಸ್‌ಗಳ ಮೇಲೆ ಹೊಸ ಹೊಸ ವಿನ್ಯಾಸ ರಚಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದರಲ್ಲಿ ಇಟಲಿ ಮೂಲದ ಸೆಲೆಟ್ಟಿ ಮತ್ತು ಬಾರ್ನಿ ಕಂಪನಿಗಳು ಹೊರತಾಗಿಲ್ಲ. ಇಂತಹ ನೂರಾರು ಬಗೆಯ ವಿನ್ಯಾಸಗಳುಳ್ಳ ಪ್ಲೇಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.
ಕಾಫಿ ಸೆರಾಮಿಕ್
ಮಳೆಗಾಲದಲ್ಲಿ ಫ್ರೆಶ್ ಆಗಿ ಕಾಫಿ ಅಥವಾ ಟೀ ಹಾಗೂ ಸಕ್ಕರೆಯನ್ನು ಶೇಖರಿಸಿಡುವುದೇ ಕಷ್ಟ. ಇದಕ್ಕಾಗಿ ಸೆರಾಮಿಕ್‌ನಿಂದ ತಯಾರಿಸಿದ ಭರಣಿಯೊಂದು ಸಿದ್ಧವಾಗಿದೆ. ಇದರಲ್ಲಿ ಕಾಫಿ/ಟೀ ಪುಡಿ ಮಾತ್ರವಲ್ಲ ಸಕ್ಕರೆಯನ್ನಿಟ್ಟರೆ, ಅದರ ರುಚಿ ಹಾಳಾಗದಂತೆ ನೋಡಿಕೊಳ್ಳುತ್ತದೆ. ಮರದ ಮುಚ್ಚಳ ಇರುವ ಈ ಭರಣಿಯ ಬಾಯಿಗೆ ರಬ್ಬರ್ ಅನ್ನು ಅಳವಡಿಸಲಾಗಿದೆ. ಇದರಿಂದ ಕಾಫೀ/ಟಿ ಪುಡಿ ಹಾಗೂ ಸಕ್ಕರೆ ಕೆಡದಂತೆ ಇಡಬಹುದು. ಭರಣಿಯ ಮೇಲೆ ಅತ್ಯಾರ್ಷಕ ಚಿತ್ರವೂ ಇರುವುದರಿಂದ ಅಡುಗೆ ಮನೆಗೂ ಇದು ಭೂಷಣ. ಇದರ ಬೆಲೆ 795.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

