STUDYರೂಂ
ಇಂದು ಫ್ಯಾಮಿಲಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೂಮು. ಅದರಲ್ಲಿ ಪುಟ್ಟ ಮಗನಿಗೂ ಒಂದು. ತೋಟ, ಗದ್ದೆ ಹಾಗೂ ಮನೆಯ ಹಿಂದಿನ ಕಲ್ಲು ಬಂಡೆ ಮೇಲೆ ಹೋಗಿ ಓದಬೇಕಾದ...

ಇಂದು ಫ್ಯಾಮಿಲಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೂಮು. ಅದರಲ್ಲಿ ಪುಟ್ಟ ಮಗನಿಗೂ ಒಂದು. ತೋಟ, ಗದ್ದೆ ಹಾಗೂ ಮನೆಯ ಹಿಂದಿನ ಕಲ್ಲು ಬಂಡೆ ಮೇಲೆ ಹೋಗಿ ಓದಬೇಕಾದ ಅನಿವಾರ್ಯತೆ ಈಗಿನ ಮಕ್ಕಳಿಗಿಲ್ಲ. ಯಾಕೆಂದರೆ ಮನೆಯೊಳಗೆ ಪ್ರಶಾಂತತೆ ಇರುವ ಓದುವ ಕೊಠಡಿಯೊಂದು ಇದ್ದೇ ಇರುತ್ತದೆ. ಓದುವ ಕೊಠಡಿ ಹೇಗಿರಬೇಕು, ಎಲ್ಲಿರಬೇಕು, ಯಾವ ರೀತಿ ವ್ಯವಸ್ಥೆ ಇರಬೇಕು ಎನ್ನುವ ಗೊಂದಲ ಸಾಮಾನ್ಯ. ಅದಕ್ಕೆ ಪರಿಹಾರವಾಗಿ ಇಲ್ಲಿವೆ ಟಿಪ್ಸ್...
* ಸಣ್ಣಮಕ್ಕಳ ಅಭಿರುಚಿಯೇ ಬೇರೆ. ಕಾಲೇಜಿಗೆ ಹೋಗುವವರ ಅಭಿರುಚಿಯೇ ಬೇರೆ. ಹೀಗಾಗಿ, ಅವರವರ ಭಾವಕ್ಕೆ ತಕ್ಕಂತೆ ಅಧ್ಯಯನದ ಕೊಠಡಿಯನ್ನು ಅಲಂಕರಿಸುವುದು ಒಳ್ಳೆಯದು.
* ಓದುವ ಕೋಣೆಗೆ ಮುಖ್ಯವಾಗಿ ಗಾಳಿ, ಬೆಳಕು ಬೇಕು. ಹಗಲು ಹೊತ್ತು ಪ್ರಕೃತಿ ಸಹಜವಾದ ಬೆಳಕಿನಲ್ಲಿ ಓದಲು ಕೊಠಡಿ ಪೂರಕವಾಗಿರಲಿ.
* ಹೆಚ್ಚು ಗಾಢ ಅಥವಾ ತುಂಬಾ ತಿಳಿ ಬಣ್ಣ ಬಳಿಯಬೇಡಿ. ಅದಷ್ಟು ನೀಲಿ, ಕೆಂಪು, ಆರೇಂಜ್, ಹಸಿರು ಬಣ್ಣ ಬಳಿದರೆ ಮನಸ್ಸಿನ ಆರೋಗ್ಯಕ್ಕೆ ಉತ್ತಮ.
* ಕೊಠಡಿ ಪ್ರಶಾಂತವಾಗಿರಲಿ. ಅಡುಗೆಮನೆಯ ಪಾತ್ರೆಗಳ ಸದ್ದು ಇಲ್ಲಿಗೆ ಬೀಳುವುದು ಬೇಡ.
* 2- 3 ಮಕ್ಕಳಿದ್ದರೆ ಒಂದೇ ಕೊಠಡಿಯಲ್ಲಿ ಎಲ್ಲರಿಗೂ ಸಮಾನವಾಗಿ ಸ್ಥಳಾವಕಾಶ ಮಾಡಿಕೊಡಿ. ಒಬ್ಬರಿಂದ ಇನ್ನೊಬ್ಬರ ಓದಿಗೆ ತೊಂದರೆಯಾಗದಿರಲಿ.
*ಟೇಬಲ್, ಕುರ್ಚಿ, ಪೆನ್ ಸ್ಟ್ಯಾಂಡ್, ಅದಕ್ಕೆ ಹತ್ತಿರವಾಗಿ ಬುಕ್ ರ್ಯಾಕ್, ಟೇಬಲ್ ಲ್ಯಾಂಪ್, ಅಗತ್ಯವಿದ್ದರೆ ಕಂಪ್ಯೂಟರ್, ವಯಸ್ಸಿಗನುಗುಣವಾಗಿ ಆಟಿಕೆ ಸಾಮಗ್ರಿಗಳು ಈ ಕೊಠಡಿಯಲ್ಲಿರಬೇಕು.
* ಮಕ್ಕಳಿಗೆ ಬಂದ ಪ್ರಶಸ್ತಿಗಳನ್ನು ಅವರ ಅಧ್ಯಯನ ಕೊಠಡಿಯಲ್ಲೇ ಜೋಡಿಸಿ. ಅವರಿಗೆ ಪ್ರೇರಣೆ, ಮಾರ್ಗದರ್ಶನವಾಗಬಲ್ಲ ಸಾಧಕರ ಭಾವಚಿತ್ರ, ಪುಸ್ತಕಗಳೂ ಇರಲಿ.
* ಕಿಟಕಿಗಳಿಗೆ ಆಕರ್ಷಕವಾದ ಕರ್ಟೈನ್‌ಗಳನ್ನು ಹಾಕಿ.
* ವಿದ್ಯುತ್ ಸ್ವಿಚ್‌ಗಳು ಕೈಗೆಟುವ ಹಾಗೆ ಇರುವುದು ಬೇಡ.
* ಸಣ್ಣ ಮಕ್ಕಳ ಅಧ್ಯಯನ ಕೊಠಡಿಯಾದರೆ ಗೋಡೆ ಮೇಲೆ ಬಣ್ಣಬಣ್ಣದ ಪ್ರಾಣಿ, ಪಕ್ಷಿ, ವಸ್ತುಗಳ ಚಾರ್ಟ್‌ಗಳಿರಲಿ.
* ಮಾತ್ರವಲ್ಲದೆ ಗಣಿತ, ವಿಜ್ಞಾನಕ್ಕೆ ಸಂಬಂಧಿಸಿದ ಆಟಿಕೆ, ಚಿತ್ರಗಳು ಕೊಠಡಿಯಲ್ಲಿರಲಿ. ಏಕೆಂದರೆ ಅವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮಕ್ಕಳಿಗೆ ಬೆಳೆಯುತ್ತದೆ.
* ಕೊಠಡಿಯಲ್ಲಿ ಕೇವಲ ಪಠ್ಯ ಮಾತ್ರವಲ್ಲ. ಪಠ್ಯಕ್ಕೆ ಪೂರಕವಾಗುವ ಪುಸ್ತಕ, ಪತ್ರಿಕೆಗಳು ಇರಲಿ.
* ಮನಸ್ಸು ಮುದಗೊಳ್ಳಲು ಅಲಂಕಾರಿಕ ಹೂವುಗಳನ್ನು ಜೋಡಿಸಿಡಿ. ಇದು ಮಕ್ಕಳ ಮನಸ್ಸಿಗೆ ಉಲ್ಲಾಸ ನೀಡುತ್ತದೆ.
* ಬೇಸರವಾದಾಗ ಕೇಳಲು ಒಳ್ಳೆಯ ಸಂಗೀತದ ಸಿಡಿಗಳನ್ನಿಡಿ.
*ಪೆನ್‌ಸ್ಟ್ಯಾಂಡಿನಲ್ಲಿ ಸಾಕಷ್ಟು ಪೆನ್ನು, ಪೆನ್ಸಿಲ್, ರಬ್ಬರ್ ಇರಲಿ.
* ಹ್ಞಾಂ, ಅಧ್ಯಯನ ಕೊಠಡಿ ಅಧ್ಯಯನಕ್ಕೆ ಮಾತ್ರ ಸೀಮಿತವಲ್ಲ. ಅದೊಂದು ಪುಟ್ಟ ಪ್ರಪಂಚ, ಜ್ಞಾನದ ಕೇಂದ್ರ. ಅಲ್ಲಿ ಜಗತ್ತಿನ ಅದ್ಭುತ ಸ್ವಾರಸ್ಯಗಳು ಸೃಷ್ಟಿಯಾಗುತ್ತವೆ. ಹೀಗಾಗಿ, ಆ ಕೊಠಡಿಯನ್ನು ಕಡೆಗಣಿಸುವುದು ಬೇಡ.
-ವಿದ್ಯಾ ಇರ್ವತ್ತೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


