ಎಲ್ಲಿಗಾದರೂ ಟೂರ್ ಹೋಗಿ ಆದ್ರೆ ಈ ದೇಶಗಳು ಮಾತ್ರ ಬೇಡವೇ ಬೇಡ! ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಸಬಾರದ ದೇಶಗಳು
ಚೀಪ್ ಕರೆನ್ಸಿ ಪ್ರವಾಸದ ಕನಸು ಕಾಣುತ್ತಿದ್ದೀರಾ? ಭಾರತದ ರೂಪಾಯಿಗಿಂತ ಕರೆನ್ಸಿ ಮೌಲ್ಯ ಕಡಿಮೆಯಿದ್ದರೂ ಈ ದೇಶಗಳಿಗೆ ಪ್ರಯಾಣಿಸುವುದು ಅಪಾಯಕಾರಿ; ಸುರಕ್ಷತೆಯ ದೃಷ್ಟಿಯಿಂದ ಈ 6 ದೇಶಗಳಿಂದ ದೂರವಿರಿ

ವಿದೇಶ ಟೂರ್ ಇದು ಬಹುತೇಕರ ಕನಸು; ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಸೇವ್ ಮಾಡ್ತಾರೆ. ಇನ್ನು ಟೂರ್ ವೇಳೆ ಬೇರೆ ದೇಶಗಳಿಗೆ ಹೋದಾಗ ಅಲ್ಲಿಯ ಕರೆನ್ಸಿಯಲ್ಲಿ ಹಣ ಪೇ ಮಾಡಬೇಕು; ಹಾಗಾಗಿ, ಆನ್ಲೈನ್ ನಲ್ಲಿ ಯಾವ ದೇಶದ ಕರೆನ್ಸಿ ಕಡಿಮೆ ಇದೆ, ಭಾರತದ 1 ರುಪಾಯಿಗೆ ಅಲ್ಲಿ ಎಷ್ಟು ನೂರು ರೂಪಾಯಿ ಎಂದು ನೋಡುತ್ತೇವೆ; ಆದರೆ, ಹೀಗೆ 1 ರುಪಾಯಿ ಅಲ್ಲಿ 30 ರುಪಾಯಿ, 170 ರುಪಾಯಿ, 200 ರುಪಾಯಿ, 240 ರುಪಾಯಿ, ಅಷ್ಟೊಂದು ಕಡಿಮೆ ಎನ್ನುತ್ತಾ ಕೆಲವೊಂದು ದೇಶಗಳಿಗೆ ಭೇಟಿಯ ಪ್ಲಾನ್ ಮಾಡುತ್ತೇವೆ. ಆದ್ರೆ, ನಿಮಗೆ ಗೊತ್ತಾ, ಕೆಲವೊಮ್ಮೆ ಅದು ಎಷ್ಟು ಚೀಪ್ ಅದ್ರೂ ಕೂಡ ಕೆಲವೊಂದು ರಾಷ್ಟ್ರಗಳಿಗೆ ಭೇಟಿ ನೀಡಬಾರದು. ಆ ದೇಶಗಳು ಯಾವುವು ಗೊತ್ತಾ?
ಅಫ್ಘಾನಿಸ್ತಾನ
ತಾಲಿಬಾನ್ ಆಡಳಿತ ಮತ್ತು ಆಂತರಿಕ ಸಶಸ್ತ್ರ ದಂಗೆಗಳ ಕಾರಣದಿಂದ ಅಫ್ಘಾನಿಸ್ತಾನದ ಪ್ರವಾಸವನ್ನು ತಪ್ಪಿಸಬೇಕು. ಇದರೊಂದಿಗೆ ಅಫ್ಘಾನಿಸ್ತಾನದಲ್ಲಿ ವಿದೇಶಿ ಪ್ರವಾಸಿಗರು ಮತ್ತು ಹೋಟೆಲ್‌ಗಳನ್ನೇ ಗುರಿಯಾಗಿಸಿಕೊಂಡು ಇಲ್ಲಿ ಭಯೋತ್ಪಾದಕ ದಾಳಿಗಳು ನಡೆಯುತ್ತವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಮಹಿಳಾ ಪ್ರವಾಸಿಗರಿಗೆ ಮತ್ತು ಒಂಟಿ ಪ್ರಯಾಣಿಕರಿಗೆ ಇಲ್ಲಿ ಕನಿಷ್ಠ ರಕ್ಷಣೆಯೂ ಸಿಗುವುದಿಲ್ಲ.
ಸುಡಾನ್
ಸುಡಾನ್ ದೇಶದಲ್ಲಿ ಸೇನೆ ಮತ್ತು ಅರೆಸೈನಿಕ ಪಡೆಗಳ ನಡುವಿನ ಭೀಕರ ನಾಗರಿಕ ಯುದ್ಧ ನಡೆಯುತ್ತಿದೆ. ಅದರಲ್ಲೂ, ಇದರ ಕಾರಣ ದೇಶದಾದ್ಯಂತ ಲೂಟಿ, ಹಿಂಸಾಚಾರ ಮತ್ತು ಗೋಲಿಬಾರ್ ಸಾಮಾನ್ಯವಾಗಿದೆ. ಆಗಾಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಮುಚ್ಚಲ್ಪಡುತ್ತವೆ, ಇದರಿಂದಾಗಿ ತುರ್ತು ಸಂದರ್ಭದಲ್ಲಿ ದೇಶದಿಂದ ಹೊರಹೋಗುವುದು ಅಸಾಧ್ಯವಾಗುತ್ತದೆ.
ಮ್ಯಾನ್ಮಾರ್
ಭಾರತದ ನೆರೆಹೊರೆಯ ದೇಶವಾದರೂ, ಇಲ್ಲಿ ಸದ್ಯಕ್ಕೆ ಪ್ರವಾಸ ಮಾಡುವುದು ಸುರಕ್ಷಿತವಲ್ಲ. ಯಾಕಂದ್ರೆ ಸೇನಾ ದಂಗೆಯ ಕಾರಣ ದೇಶದಾದ್ಯಂತ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿದ್ದು, ಭದ್ರತಾ ಪಡೆಗಳು ಮತ್ತು ಪ್ರಜಾಪ್ರಭುತ್ವ ಪರ ಹೋರಾಟಗಾರರ ನಡುವೆ ನಿರಂತರ ಗಲಭೆಗಳು ನಡೆಯುತ್ತಿವೆ.
ವೆನೆಜುವೆಲಾ
ಇಲ್ಲಿ ರಾಜಕೀಯ ಯುದ್ಧವಿಲ್ಲದಿದ್ದರೂ, ಜಗತ್ತಿನಲ್ಲೇ ಅತಿ ಹೆಚ್ಚು ಅಪರಾಧ ದರ ಹೊಂದಿರುವ ದೇಶವಿದು. ಅದರಲ್ಲೂ, ಸಾರ್ವಜನಿಕವಾಗಿ ಹಗಲು ದರೋಡೆ, ಸಶಸ್ತ್ರ ಆಕ್ರಮಣ ಮತ್ತು ಅಗತ್ಯ ವಸ್ತುಗಳ ತೀವ್ರ ಅಭಾವ ಪ್ರವಾಸಿಗರನ್ನು ಸಂಕಷ್ಟಕ್ಕೆ ಈಡುಮಾಡುತ್ತದೆ.
ಯೆಮೆನ್
ಹೌತಿ ಬಂಡುಕೋರರು ಮತ್ತು ಸರ್ಕಾರದ ನಡುವಿನ ಅಂತರ್ಯುದ್ಧದ ಕಾರಣ ಇಲ್ಲಿ ಸಶಸ್ತ್ರ ಗುಂಪುಗಳ ನಡುವಿನ ನಿರಂತರ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ಸಾಮಾನ್ಯ. ಇದರೊಂದಿಗೆ ದೇಶದಲ್ಲಿ ಆಹಾರ, ಶುದ್ಧ ನೀರು ಮತ್ತು ವೈದ್ಯಕೀಯ ಸೌಲಭ್ಯಗಳ ತೀವ್ರ ಕೊರತೆಯಿದೆ. ಭದ್ರತಾ ಏಜೆನ್ಸಿಗಳ ಪ್ರಕಾರ ಇದು ಪ್ರವಾಸಕ್ಕೆ ತೀರ ದುಸ್ತರವಾದ ಜಾಗ.
ಸಿರಿಯಾ
ದಶಕಗಳಿಗೂ ಹೆಚ್ಚು ಕಾಲದಿಂದ ದೇಶದಲ್ಲಿ ಉಗ್ರಗಾಮಿ ಸಂಘಟನೆಗಳ ಸಕ್ರಿಯತೆ, ಸಾರ್ವಜನಿಕರ ಮೇಲಿನ ಬಾಂಬ್ ದಾಳಿ, ರಾಸಾಯನಿಕ ಅಸ್ತ್ರಗಳ ಬಳಕೆ ಮತ್ತು ವಿದೇಶಿಗರನ್ನು ಅಪಹರಿಸುವ ಭೀತಿ ಹೆಚ್ಚಾಗಿದೆ. ಯಾವುದೇ ಪ್ರವಾಸಿ ಮೂಲಸೌಕರ್ಯಗಳು ಇಲ್ಲಿ ಸುರಕ್ಷಿತವಾಗಿ ಉಳಿದಿಲ್ಲ. ಅದ್ರಲ್ಲೂ, ಇತೀಚೆಗೆ ಫ್ರಾನ್ಸ್ ಅಧ್ಯಕ್ಷರು ಸಿರಿಯಾಗೆ ಭೇಟಿ ನೀಡಿದಾಗ ಅವರನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




