ಹೊಸೂರು ರಸ್ತೆ

Video: ಸ್ಕೂಟಿಗೆ ಸಿಮೆಂಟ್ ಲಾರಿ ಡಿಕ್ಕಿ; BCA ವಿದ್ಯಾರ್ಥಿನಿ ಸಾವು; ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಇಂಚರಾ ಎಂದಿನಂತೆ ಇಂದು ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹೊಸೂರು ರಸ್ತೆಯ ಸವೆರಾ ಟೀ ಸ್ಟಾಲ್ ಬಳಿ ಸ್ಕೂಟಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ.

ಹೊಸೂರು ರಸ್ತೆಯಲ್ಲಿ ಕಾರೊಂದರಲ್ಲಿ 9 ಕೋಟಿ ರೂ ವಶಪಡಿಸಿಕೊಂಡ ಐಟಿ ಅಧಿಕಾರಿಗಳು!
ಹೊಸೂರು ರಸ್ತೆಯ ಸಿಗ್ನಲ್ ಒಂದರ ಬಳಿ ಪೊಲೀಸರು KL 20 T 8629 ನೋಂದಣಿ ಸಂಖ್ಯೆಯ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಬೆಂಗಳೂರಿನಿಂದ ಹೊಸೂರಿನ ಕಡೆಗೆ ತೆರಳುತ್ತಿದ್ದ ಈ ಕಾರನ್ನು ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳೊಂದಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಬೆಂಗಳೂರು: ಮೆಟ್ರೋ ಹಳದಿ ಮಾರ್ಗ ಎಫೆಕ್ಟ್; ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಪ್ರಮಾಣದಲ್ಲಿ ಇಳಿಕೆ
ಸಂಜೆಯ ಪೀಕ್ ಸಮಯದಲ್ಲಿ (ಸಂಜೆ 4 ರಿಂದ ರಾತ್ರಿ 9 ರವರೆಗೆ) ಶೇ. 32ರಷ್ಟು (ಆರ್‌ವಿ ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳವರೆಗೆ 21 ಕಿ.ಮೀ) ಇಳಿಕೆ ಕಂಡುಬಂದಿದೆ.

ಹೊಸೂರು ರಸ್ತೆಯ ಸುರಂಗ ಮಾರ್ಗ, ಸ್ಕೈವಾಕ್'ಗಳು ದುಸ್ಥಿತಿಯಲ್ಲಿ: ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಸೌಕರ್ಯ!
ಗಾರ್ವೆಬಾವಿಪಾಳ್ಯ, ಕೂಡ್ಲು ಗೇಟ್, ಸಿಂಗಸಂದ್ರ ಮತ್ತು ಹೊಸೂರಿನಿಂದ ಬೆಂಗಳೂರು ರಸ್ತೆಯ ಉದ್ದಕ್ಕೂ ಐದು ಸ್ಕೈವಾಕ್‌ಗಳು ಇದ್ದು, ಈ ಸ್ಕೈವಾಕ್ ಗಳು ದುಸ್ಥಿತಿಗೆ ತಲುಪಿವೆ.

ಮೈಸೂರು, ಹೊಸೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್: ಸಂಚಾರ ಅಸ್ತವ್ಯಸ್ತ
ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ರಜೆಯ ಹಿನ್ನೆಲೆಯಲ್ಲಿ ನಗರದಿಂದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ತೆರಳುವ ಜನರಿಂದ ಶನಿವಾರ ಬೆಂಗಳೂರು-ಮೈಸೂರು ರಸ್ತೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮತ್ತು ಹೊಸೂರು ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬೆಂಗಳೂರು: ಕಾರು-ಬಸ್ ಡಿಕ್ಕಿ, ಇಬ್ಬರು ಸಜೀವ ದಹನ
ಭಾನುವಾರ ಬೆಳಗಿನ ಜಾವ ಕಾರು-ಬಸ್ ನಡುವೆ ಡಿಕ್ಕಿ ಸಂಭವಿಸಿ ಉಂಟಾದ ಭೀಕರ ಅಪಘಾತಕ್ಕೆ ಇಬ್ಬರು ಸಜೀವ ದಹನವಾದ ಘಟನೆ ಬೆಂಗಳೂರಿನ ಚಂದಾಪುರ ಸಮೀಪ ನಡೆದಿದೆ.

ಸಿನಿಮೀಯ ರೀತಿಯಲ್ಲಿ ಪತಿಗೆ ಗುಂಡಿಕ್ಕಿದ ಪತ್ನಿ!
ಕುಡಿದ ಅಮಲಿನಲ್ಲಿ ಆರಂಭವಾದ ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿ ಶೂಟೌಟ್ ನಲ್ಲಿ ಅಂತ್ಯವಾಗಿದೆ....

ಪ್ರತ್ಯೇಕ ಅಪಘಾತ: ಟೆಕ್ಕಿ ಸೇರಿ ಇಬ್ಬರ ಸಾವು
ನಗರದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಟೆಕ್ಕಿ ಸೇರಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯ...

