ಸಿಆರ್ ಪಿಎಫ್ ಯೋಧರು

ಜಮ್ಮು-ಕಾಶ್ಮೀರ: ಶ್ರೀನಗರ ಎನ್‌ಕೌಂಟರ್‌ನಲ್ಲಿ ಇಬ್ಬರು CRPF ಯೋಧರು, ಇಬ್ಬರು ಪೊಲೀಸರಿಗೆ ಗಾಯ
ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ದೊರೆತ ನಂತರ ಭದ್ರತಾ ಪಡೆಗಳು ಬೆಳಿಗ್ಗೆ ಖನ್ಯಾರ್‌ನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಇದು ಎನ್ ಕೌಂಟರ್ ಗೆ ತಿರುಗಿದ್ದು, ಉಗ್ರರು ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಹೀಗಾಗಿ ಪ್ರತಿದಾಳಿ ನಡೆಸಲಾಗಿದೆ

ಸಿಆರ್ ಪಿಎಫ್ ಸಿಬ್ಬಂದಿ ಪತ್ನಿಯರ ಈ ಕಾರ್ಯಕ್ಕೆ ಚಪ್ಪಾಳೆ ತಟ್ಟಲೇ ಬೇಕು!
ಕೊರೋನಾ ವಿರುದ್ಧ ತಮ್ಮ ಪತಿಯಂದಿರೊಂದಿಗೆ ಹೋರಾಟಕ್ಕೆ ಇಳಿದಿರುವ ಸಿಆರ್ ಪಿಎಫ್ ಸಿಬ್ಬಂದಿ ಪತ್ನಿಯರು ಆರೋಗ್ಯ ಸೇವೆ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ) ಕಿಟ್ ಗಳು ಮತ್ತು ಮಾಸ್ಕ್ ಗಳನ್ನು ವಿತರಿಸುತ್ತಿದ್ದಾರೆ.

ಜಮ್ಮು-ಕಾಶ್ಮೀರ: ಗುಂಡು ಹಾರಿಸಿ ಮೂವರು ಸಹೋದ್ಯೋಗಿಗಳನ್ನು ಕೊಂದ ಸಿಆರ್ ಪಿಎಫ್ ಸಿಬ್ಬಂದಿ!
ಮೂವರು ಸಿಆರ್ ಪಿಎಫ್ ಯೋಧರನ್ನು ಸಹೋದ್ಯೋಗಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಮ್ಮು-ಕಾಶ್ಮೀರದ ಉಧಮ್ ಪುರ್ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ಮಾ.20 ರಂದು ನಡೆದಿದೆ.

ಪುಲ್ವಾಮ ದಾಳಿಯ ಎಫೆಕ್ಟ್: ಸೈನಿಕರಿಗೆ ವಾಣಿಜ್ಯ ವಿಮಾನಗಳಲ್ಲಿ ಸಂಚರಿಸಲು ಅನುಮತಿ
ಪುಲ್ವಾಮದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಯೋಧರಿಗೆ ಹೆಚ್ಚುವರಿಯಾಗಿ ಕೆಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ.

ಪಾಕಿಸ್ತಾನಕ್ಕೆ ಜಾಗತಿಕವಾಗಿ ಬುದ್ಧಿ ಕಲಿಸಲು ಸದ್ದಿಲ್ಲದೇ ಮದ್ದರೆಯುತ್ತಿದೆ ಭಾರತ: ಮುಂದಿದೆ ಮಾರಿ ಹಬ್ಬ!
ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರ ಪಾಕ್ ನ್ನು ಒಂಟಿಯನ್ನಾಗಿಸುವುದಕ್ಕೆ ಮತ್ತಷ್ಟು ತೀವ್ರವಾದ ಪ್ರಯತ್ನ ಮುಂದುವರೆಸಿದೆ.

ಗರ್ಭಿಣಿ ಪತ್ನಿ, ಮಗಳ ಮದುವೆಗೆ ಸಿದ್ಧತೆ....! ಸಿಆರ್ ಪಿಎಫ್ ಹುತಾತ್ಮ ಯೋಧರ ಕುಟುಂಬಸ್ಥರ ಕನಸು ಈಗ ನುಚ್ಚು ನೂರು!
ಪುಲ್ವಾಮದಲ್ಲಿ ಪಾಪಿ ಪಾಕಿಸ್ತಾನದ ಉಗ್ರರು ನಡೆಸಿದ ಸ್ಫೋಟದಲ್ಲಿ ಹುತಾತ್ಮ ಯೋಧರಷ್ಟೇ ಆಹುತಿಯಾಗದೇ ಅವರ ಕುಟುಂಬ ಸದಸ್ಯರ ಕನಸುಗಳೂ ಸುಟ್ಟು ಬೂದಿಯಾಗಿವೆ.

ಹುತಾತ್ಮ ಯೋಧರ ಪಾರ್ಥಿವ ಶರೀರಕ್ಕೆ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಅಂತಿಮ ನಮನ
ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸಿಆರ್ ಪಿಎಫ್ ಯೋಧರ ಪಾರ್ಥಿವ ಶರೀರವಿರುವ ಪೆಟ್ಟಿಗೆಗಳನ್ನು ಪಾಲಮ್ ವಿಮಾನ ನಿಲ್ದಾಣಕ್ಕೆ ಸಂಜೆ 7 ಗಂಟೆ ಸುಮಾರಿಗೆ ತರಲಾಯಿತು.

ಹುತಾತ್ಮ ಯೋಧರ ಶವಪೆಟ್ಟಿಗೆಗೆ ಹೆಗಲು ಕೊಟ್ಟ ಗೃಹ ಸಚಿವ ರಾಜನಾಥ್ ಸಿಂಗ್, ಡಿಜಿಪಿ ದಿಲ್ಬಾಗ್ ಸಿಂಗ್
ಪುಲ್ವಾಮ ದಾಳಿಯಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ಸಿಆರ್ ಪಿಎಫ್ ಯೋಧರ ಪಾರ್ಥಿವ ಶರೀರವಿದ್ದ ಪೆಟ್ಟಿಗೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಬುದ್ ಗಾಂನಲ್ಲಿಂದು ಹೆಗಲು ನೀಡಿದರು.

ಉರಿಯನ್ನೂ ಮೀರಿಸಿದ ಪುಲ್ವಾಮ ಭಯೋತ್ಪಾದಕ ದಾಳಿ: ಪಾಕ್ ಗೆ ಭಾರತದ ವಿದೇಶಾಂಗ ಇಲಾಖೆ ತರಾಟೆ!
ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ದಾಳಿಗೆ 40 ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

