ಜಮ್ಮು-ಕಾಶ್ಮೀರ: ಗುಂಡು ಹಾರಿಸಿ ಮೂವರು ಸಹೋದ್ಯೋಗಿಗಳನ್ನು ಕೊಂದ ಸಿಆರ್ ಪಿಎಫ್ ಸಿಬ್ಬಂದಿ!
ಮೂವರು ಸಿಆರ್ ಪಿಎಫ್ ಯೋಧರನ್ನು ಸಹೋದ್ಯೋಗಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಮ್ಮು-ಕಾಶ್ಮೀರದ ಉಧಮ್ ಪುರ್ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ಮಾ.20 ರಂದು ನಡೆದಿದೆ.

Published On :
ಶ್ರೀನಗರ: ಮೂವರು ಸಿಆರ್ ಪಿಎಫ್ ಯೋಧರನ್ನು ಸಹೋದ್ಯೋಗಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಮ್ಮು-ಕಾಶ್ಮೀರದ ಉಧಮ್ ಪುರ್ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ಮಾ.20 ರಂದು ನಡೆದಿದೆ.
"ಬಟಾಲ್ ಬಾಲಿಯಾ ಕ್ಯಾಂಪ್ ನಲ್ಲಿದ್ದ 187 ನೇ ಬೆಟಾಲಿಯನ್ ನ ಸಿಆರ್ ಪಿಎಫ್ ಯೋಧರ ನಡುವೆ ವಾಗ್ವಾದ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಪೈಕಿ ಓರ್ವ ಸಿಆರ್ ಪಿಎಫ್ ಯೋಧ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, 3 ಯೋಧರು ಮೃತಪಟ್ಟಿದ್ದಾರೆ, ಘಟನೆ ನಂತರ ಆ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಸಿಆರ್ ಪಿಎಫ್ ಅಧಿಕಾರಿ ಹೇಳಿದ್ದಾರೆ.
ಒಟ್ಟಾರೆ 10 ಲಕ್ಷ ಯೋಧರಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು, ಪುಲ್ವಾಮ ಸ್ಫೋಟದಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದ ಹಿನ್ನೆಲೆಯಲ್ಲಿ ಹೋಲಿ ಆಚರಣೆ ಮಾಡದೇ ಇರಲು ನಿರ್ಧರಿಸಿದ್ದರು. ಈ ನಿರ್ಧಾರದ ಬೆನ್ನಲ್ಲೇ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ಇಂಥದ್ದೊಂದು ದುರ್ಘಟನೆ ನಡೆದಿದೆ. (ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


