ಸರ್ಕಾರಿ ಆದೇಶ

ಇನ್ಮುಂದೆ ಎಲ್ಲಾ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ 10 ಗಂಟೆಯೊಳಗೆ ಕಚೇರಿಯಲ್ಲಿಬೇಕು: CM ಡಿಕೆಶಿ ಖಡಕ್ ಸೂಚನೆ
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ, ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಇನ್ಮುಂದೆ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟ: ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಹಾಲು ವಿತರಿಸಲು ಆದೇಶ
ಪೂರ್ವ ಪ್ರಾಥಮಿಕ ತರಗತಿಗಳು ಈಗಾಗಲೇ ಪ್ರಾರಂಭವಾದ ಸರ್ಕಾರಿ ಶಾಲೆಗಳಲ್ಲಿ, PM-ಪೋಷಣ್ ಯೋಜನೆಯಡಿಯಲ್ಲಿ ಮಧ್ಯಾಹ್ನ ಊಟ, ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ಹಾಲು ಮತ್ತು ಡಿಸೆಂಬರ್ 1 ರಿಂದ ಮೊಟ್ಟೆ ಅಥವಾ ಬಾಳೆಹಣ್ಣುಗಳನ್ನು ನೀಡಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನೋಟಿಫಿಕೇಶನ್, ಡಿನೋಟಿಫಿಕೇಶನ್ ಎರಡರ ಮೇಲೂ ಸರ್ಕಾರಿ ಆದೇಶ ಪ್ರಕಟಿಸಿ: ಹೈಕೋರ್ಟ್ ಆದೇಶ
ಸ್ವಾಧೀನದಿಂದ ಭೂಮಿಯನ್ನು ಡಿನೋಟಿಫೈ ಮಾಡುವ ಎಲ್ಲಾ ಸರ್ಕಾರಿ ಆದೇಶಗಳು ಮತ್ತು ಅಂತಹ ಡಿನೋಟಿಫಿಕೇಶನ್‌ಗಳನ್ನು ರದ್ದುಪಡಿಸುವ ನಂತರದ ಸರ್ಕಾರಿ ಆದೇಶಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿ ಆಸ್ತಿ ದಾಖಲೆಗಳ ಭಾಗವಾಗಿ ಮಾಡಬೇಕೆಂದು ಶೀಘ್ರವೇ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಅಪರೂಪದ ಪ್ರಸಂಗ: ಮುಂಬಡ್ತಿ ಪಡೆದಿದ್ದ 100ಕ್ಕೂ ಹೆಚ್ಚು ಕಂದಾಯ ಇಲಾಖೆ ನೌಕರರಿಗೆ ಹಿಂಬಡ್ತಿ!
ಕಲಬುರಗಿ ಜಿಲ್ಲೆಯ 68 ದ್ವಿತೀಯ ದರ್ಜೆ ಸಹಾಯಕ/ಗ್ರಾಮ ಆಡಳಿತಾಧಿಕಾರಿಗಳು, 33 ಮಂದಿ ಪೇದೆಗಳು ಸೇರಿದಂತೆ ವರ್ಷದ ಹಿಂದೆ ಬಡ್ತಿ ಪಡೆದಿದ್ದ ಕಂದಾಯ ಇಲಾಖೆಯ 100ಕ್ಕೂ ಅಧಿಕ ನೌಕರರಿಗೆ ಈಗ ಸೇವೆಯಲ್ಲಿ ಹಿಂಬಡ್ತಿ ನೀಡಲಾಗಿದೆ.

ಅನ್ನಭಾಗ್ಯ: ಬಿಪಿಎಲ್ ಫಲಾನುಭವಿಗಳಿಗೆ ಹಣ ವರ್ಗಾವಣೆಗೆ ಸರ್ಕಾರ ಆದೇಶ, ಜೂನ್ ತಿಂಗಳ ಅಕ್ಕಿ ಪಡೆಯದವರಿಗಿಲ್ಲ ಹಣ!!
‘ಅನ್ನ ಭಾಗ್ಯ’ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆಗೆ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಕೊರೋನಾವೈರಸ್: ಮಾರ್ಚ್ 31ರವರೆಗೂ ಎಲ್ಲಾ ಶಿಕ್ಷಕರು ಮನೆಯಿಂದಲೇ ಕೆಲಸ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಒಂದರಿಂದ ಆರನೇ ತರಗತಿವರೆಗಿನ ತರಗತಿಗಳು ರದ್ದುಗೊಂಡ ಬೆನ್ನಲ್ಲೇ , ಏಳು ಮತ್ತು 10ನೇ ತರಗತಿಯನ್ನು ಮುಂದೂಡಲಾಗಿರುವ ಸರ್ಕಾರ ಇದೀಗ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಎಲ್ಲಾ ಶಿಕ್ಷಕರು ಮಾರ್ಚ್ 31ರವರೆಗೂ ಮನೆಯಿಂದಲೇ ಕೆಲಸ ಮಾಡುವಂತೆ ನಿರ್ದೇಶಿಸಿದೆ.

ಬಳ್ಳಾರಿ ಹಾಲು ಒಕ್ಕೂಟದಿಂದ ಸರ್ಕಾರಿ ಆದೇಶ ಉಲ್ಲಂಘನೆ?: ಎಂಡಿ ಸರ್ವಾಧಿಕಾರಿ ಧೋರಣೆಗೆ ಬೇಸತ್ತ ನಿರ್ದೇಶಕರು
ರೈತರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ಉದ್ದೇಶಕ್ಕೆ ಪ್ರತಿ ಲೀಟರ್ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಳ ಮಾಡಿ ಸರ್ಕಾರ ಫೆ.1ರಿಂದಲೇ ಜಾರಿಯಾಗುವಂತೆ ಇಡೀ ರಾಜ್ಯದಾದ್ಯಂತ ಆದೇಶ ಮಾಡಿದೆ. ಆದರೆ ಬಳ್ಳಾರಿ ಹಾಲು ಒಕ್ಕೂಟ ಸರ್ಕಾರದ ಆದೇಶ ಉಲ್ಲಂಘಿಸಿರುವ ಘಟನೆ ಬೆಳಕಿಗೆ ಬಂದಿದೆ.

