ರಾಜ್ಯ

ಅಪರೂಪದ ಪ್ರಸಂಗ: ಮುಂಬಡ್ತಿ ಪಡೆದಿದ್ದ 100ಕ್ಕೂ ಹೆಚ್ಚು ಕಂದಾಯ ಇಲಾಖೆ ನೌಕರರಿಗೆ ಹಿಂಬಡ್ತಿ!

ಕಲಬುರಗಿ ಜಿಲ್ಲೆಯ 68 ದ್ವಿತೀಯ ದರ್ಜೆ ಸಹಾಯಕ/ಗ್ರಾಮ ಆಡಳಿತಾಧಿಕಾರಿಗಳು, 33 ಮಂದಿ ಪೇದೆಗಳು ಸೇರಿದಂತೆ ವರ್ಷದ ಹಿಂದೆ ಬಡ್ತಿ ಪಡೆದಿದ್ದ ಕಂದಾಯ ಇಲಾಖೆಯ 100ಕ್ಕೂ ಅಧಿಕ ನೌಕರರಿಗೆ ಈಗ ಸೇವೆಯಲ್ಲಿ ಹಿಂಬಡ್ತಿ ನೀಡಲಾಗಿದೆ.

ಅಪರೂಪದ ಪ್ರಸಂಗ: ಮುಂಬಡ್ತಿ ಪಡೆದಿದ್ದ 100ಕ್ಕೂ ಹೆಚ್ಚು ಕಂದಾಯ ಇಲಾಖೆ ನೌಕರರಿಗೆ ಹಿಂಬಡ್ತಿ!
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನಮ್
Published On :

ಕಲಬುರಗಿ: ಹುದ್ದೆಯಲ್ಲಿ ಹಿಂಬಡ್ತಿ ಪಡೆದ ಅಪರೂಪದ ಪ್ರಕರಣವಿದು. ಕಲಬುರಗಿ ಜಿಲ್ಲೆಯ 68 ದ್ವಿತೀಯ ದರ್ಜೆ ಸಹಾಯಕ/ಗ್ರಾಮ ಆಡಳಿತಾಧಿಕಾರಿಗಳು, 33 ಮಂದಿ ಪೇದೆಗಳು ಸೇರಿದಂತೆ ವರ್ಷದ ಹಿಂದೆ ಬಡ್ತಿ ಪಡೆದಿದ್ದ ಕಂದಾಯ ಇಲಾಖೆಯ 100ಕ್ಕೂ ಅಧಿಕ ನೌಕರರಿಗೆ ಈಗ ಸೇವೆಯಲ್ಲಿ ಹಿಂಬಡ್ತಿ ನೀಡಲಾಗಿದೆ.

ಅಧಿಕೃತ ಮೂಲಗಳ ಪ್ರಕಾರ, ಕಲಬುರಗಿ ಜಿಲ್ಲೆಯ ಕಂದಾಯ ಇಲಾಖೆಯ ವಿವಿಧ ಕಚೇರಿಗಳಲ್ಲಿ 68 ನೌಕರರು (33 ನೌಕರರು ದ್ವಿತೀಯ ವಿಭಾಗ ಸಹಾಯಕರಾಗಿ ಮತ್ತು 35 ಉದ್ಯೋಗಿಗಳು ಗ್ರಾಮಾಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ) ಪ್ರಥಮ ವಿಭಾಗದ ಸಹಾಯಕರಾಗಿ (ಎಫ್‌ಡಿಎ) ಬಡ್ತಿ ಪಡೆದಿದ್ದರು. 17-07-2021ರಿಂದ ಪೂರ್ವಾನ್ವಯವಾಗುವಂತೆ ಎಫ್ ಡಿಎ ಹುದ್ದೆಯಲ್ಲಿ ವೇತನ ಹೆಚ್ಚಳ ಮತ್ತು ಬಡ್ತಿ ನೀಡಿ 18-05-2023 ರಂದು ಆದೇಶ ನೀಡಲಾಗಿತ್ತು.

ದ್ವಿತೀಯ ವಿಭಾಗದ ಸಹಾಯಕರು (FDA) ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿಗಳಿಗೆ ಬಡ್ತಿ ನೀಡಿ ಹುದ್ದೆ ನಿಯೋಜನೆ ಮಾಡುವಾಗ ಎಷ್ಟು ಎಫ್‌ಡಿಎ ಹುದ್ದೆಗಳು ಖಾಲಿ ಇವೆ ಎಂಬ ಅಂಶವನ್ನು ಅಂದಿನ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳು ಪರಿಗಣಿಸಿರಲಿಲ್ಲ ಎಂಬ ಅಂಶ ಗೊತ್ತಾಗಿದೆ. ಬಡ್ತಿ ಪಡೆದ ನೌಕರರು ಯಾವುದೇ ಇಲಾಖಾ ವಿಚಾರಣೆ ಎದುರಿಸಿದ್ದಾರೆಯೇ ಎಂಬ ವಿವರಗಳನ್ನು ಪಡೆಯುವುದು ಅಗತ್ಯವಾಗಿತ್ತು ಮತ್ತು ವಿಚಾರಣೆಯ ಅಂತಿಮ ವರದಿಯನ್ನು ನೀಡಬೇಕಾಗಿತ್ತು. ಆದರೆ ಬಡ್ತಿ ನೀಡುವಾಗ ಈ ವಿಧಾನವನ್ನು ಅನುಸರಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಕಲಬುರಗಿಯಲ್ಲಿ ಎಫ್‌ಡಿಎ ಹುದ್ದೆಗಳು ಖಾಲಿ ಇಲ್ಲದಿದ್ದರೂ ಬಡ್ತಿ ನೀಡಿರುವುದರಿಂದ ಬಡ್ತಿ ನೀಡುವ ಪ್ರಕ್ರಿಯೆ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರು ಕಂದಾಯ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ಅಗತ್ಯ ಕ್ರಮ ಕೈಗೊಂಡು ಸರಕಾರಕ್ಕೆ ಅನುಪಾಲನಾ ವರದಿ ಕಳುಹಿಸುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ಸೂಚಿಸಿದರು.


ಇದರ ಆಧಾರದ ಮೇಲೆ ವಿಚಾರಣೆ ನಡೆಸಿ ದಿನಾಂಕ 18-05-2023ರ ಬಡ್ತಿ ಆದೇಶವನ್ನು ಈಗಿನ ಜಿಲ್ಲಾಧಿಕಾರಿ ಫೌಜಿಯಾ ತರನಮ್ ಅವರು 14-02-2014 ರ ಅಧಿಸೂಚನೆಯ ಮೂಲಕ ಹಿಂಪಡೆದಿದ್ದು, ನೌಕರರು ತಮ್ಮ ಮೂಲ ಹುದ್ದೆಗೆ ಮರಳಲು ಸೂಚಿಸಿದ್ದಾರೆ.

ಡಿಸಿ ಪ್ರತಿಕ್ರಿಯೆ

ತಾವು ಸರ್ಕಾರದ ಆದೇಶವನ್ನು ಪಾಲಿಸಿರುವುದಾಗಿ ಜಿಲ್ಲಾಧಿಕಾರಿ ಫೌಜಿಯಾ ತರನಮ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡಿ’ ಗ್ರೂಪ್ ನೌಕರರ ಜೇಷ್ಠತಾ ಪಟ್ಟಿಯನ್ನು 16-02-2024 ರಂದು ಪ್ರಕಟಿಸಲಾಗಿದ್ದು, ಸಂಬಂಧಪಟ್ಟ ನೌಕರರು ತಮ್ಮ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳೊಳಗೆ ಸಲ್ಲಿಸಲು ಸೂಚನೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.