ದೇಶದೆಹಲಿ- ವಾರಣಾಸಿ ಬುಲೆಟ್ ರೈಲು ಪ್ರಸ್ತಾಪ: ರೈಲ್ವೆ ಮಂಡಳಿಯಿಂದ ವರದಿ ತಿರಸ್ಕಾರ
ದೆಹಲಿ ಮತ್ತು ವಾರಣಾಸಿ ನಡುವಿನ ಉದ್ದೇಶಿತ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಕುರಿತ ವರದಿಯನ್ನು ರೈಲ್ವೆ ಮಂಡಳಿ ತಿರಸ್ಕರಿಸಿದೆ. ಮಾರ್ಗದುದ್ದಕ್ಕೂ ಹಲವು ತಿರುವುಗಳು ಬರುವುದರಿಂದ ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಬುಲೆಟ್ ರೈಲಿಗೆ ಇದು ಸೂಕ್ತವಲ್ಲ ಎಂದು ರೈಲ್ವೆ ಮಂಡಳಿ ವರದಿ ತಿರಸ್ಕರಿಸಿರುವುದಾಗಿ ಮೂಲಗಳು ಹೇಳಿವೆ.