ದೆಹಲಿ- ವಾರಣಾಸಿ ಬುಲೆಟ್ ರೈಲು ಪ್ರಸ್ತಾಪ: ರೈಲ್ವೆ ಮಂಡಳಿಯಿಂದ ವರದಿ ತಿರಸ್ಕಾರ
ದೆಹಲಿ ಮತ್ತು ವಾರಣಾಸಿ ನಡುವಿನ ಉದ್ದೇಶಿತ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಕುರಿತ ವರದಿಯನ್ನು ರೈಲ್ವೆ ಮಂಡಳಿ ತಿರಸ್ಕರಿಸಿದೆ. ಮಾರ್ಗದುದ್ದಕ್ಕೂ ಹಲವು ತಿರುವುಗಳು ಬರುವುದರಿಂದ ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಬುಲೆಟ್ ರೈಲಿಗೆ ಇದು ಸೂಕ್ತವಲ್ಲ ಎಂದು ರೈಲ್ವೆ ಮಂಡಳಿ ವರದಿ ತಿರಸ್ಕರಿಸಿರುವುದಾಗಿ ಮೂಲಗಳು ಹೇಳಿವೆ.

ನವದೆಹಲಿ: ದೆಹಲಿ ಮತ್ತು ವಾರಣಾಸಿ ನಡುವಿನ ಉದ್ದೇಶಿತ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಕುರಿತ ವರದಿಯನ್ನು ರೈಲ್ವೆ ಮಂಡಳಿ ತಿರಸ್ಕರಿಸಿದೆ. ಮಾರ್ಗದುದ್ದಕ್ಕೂ ಹಲವು ತಿರುವುಗಳು ಬರುವುದರಿಂದ ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಬುಲೆಟ್ ರೈಲಿಗೆ ಇದು ಸೂಕ್ತವಲ್ಲ ಎಂದು ರೈಲ್ವೆ ಮಂಡಳಿ ವರದಿ ತಿರಸ್ಕರಿಸಿರುವುದಾಗಿ ಮೂಲಗಳು ಹೇಳಿವೆ.
ಬುಲೆಟ್ ರೈಲು ಯೋಜನೆ ಕುರಿತು ರೈಲ್ವೆ ಮಂಡಳಿ ಕಾರ್ಯದರ್ಶಿ ಆರ್ ಎನ್ ಸಿಂಗ್ ನೇತೃತ್ವದಲ್ಲಿ ಕಳೆದ ವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 2ರ ಮಾರ್ಗದುದ್ದಕ್ಕೂ ಬುಲೆಟ್ ರೈಲು ಕಾರಿಡಾರ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು.
ಈ ಕುರಿತ ಅಧ್ಯಯನ ವರದಿಯನ್ನು ರಾಷ್ಟ್ರೀಯ ಹೈ ಸ್ಪೀಡ್ ರೈಲ್ವೆ ಕಾರ್ಪೋರೇಷನ್ ನಿಯಮಿತದಿಂದ ಸಭೆಯಲ್ಲಿ ಮಂಡಿಸಲಾಯಿತು. ಕಡಿಮೆ ಬೆಲೆಯಲ್ಲಿ ಭೂ ಸ್ವಾಧೀನ ಮತ್ತು ಕಡಿಮೆ ನಿರ್ಮಾಣ ವೆಚ್ಚಕ್ಕೆ ಈ ವರದಿ ನೆರವಾಗಲಿದೆ ಎಂದು ಹೇಳಲಾಗಿತ್ತು.
ಆದಾಗ್ಯೂ, ದೆಹಲಿ ಮತ್ತು ವಾರಣಾಸಿ ನಡುವಿನ ಅನೇಕ ಕಡೆಗಳಲ್ಲಿ ತಿರುವುಗಳು ಹೆಚ್ಚಾಗಿ ಬರುವುದರಿಂದ ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಹೈ ಸ್ಪೀಡ್ ರೈಲಿಗೆ ಅತ್ಯಂತ ಮಾರಕವಾಗಲಿದೆ ಎಂದು ಸಭೆಯಲ್ಲಿ ಹೇಳಲಾಯಿತು ಎಂದು ಮೂಲಗಳು ತಿಳಿಸಿವೆ. ಇದೀಗ ಗಂಟೆಗೆ 160 -200 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ವಂದೇ ಭಾರತ್ ಸೆಮಿ ಹೈ ಸ್ಪೀಡ್ ರೈಲು ಕಾರ್ಯಾಚರಣೆಯತ್ತ ಗಮನ ಹರಿಸುವಂತೆ ರೈಲ್ವೆ ಮಂಡಳಿ ಸಲಹೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


