ರೆಮಿಡಿಸಿವಿರ್

ಅಕ್ರಮವಾಗಿ ರೆಮಿಡಿಸಿವಿರ್ ಮಾರಾಟ: ಬೆಂಗಳೂರಿನಲ್ಲಿ ಸ್ಟಾಫ್ ನರ್ಸ್ ಬಂಧನ
ನಗರದಲ್ಲಿ ಅಕ್ರಮವಾಗಿ ರೆಮಿಡಿಸಿವಿರ್ ಮಾರಾಟ ಮಾಡುತ್ತಿದ್ದ ಮತ್ತೋರ್ವ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮನು (26) ಬಂಧಿತ ಆರೋಪಿ.

ಮೇ 17 ರಿಂದ 23 ರವರೆಗಿನ ಬಳಕೆಗಾಗಿ ಕೇಂದ್ರದಿಂದ ರಾಜ್ಯಕ್ಕೆ 4.25 ಲಕ್ಷ 'ರೆಮಿಡಿಸಿವಿರ್' ವಯಲ್ಸ್ ಹಂಚಿಕೆ-ಸದಾನಂದಗೌಡ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಮೇ 17 ರಿಂದ 23ರವರೆಗಿನ ಬಳಕೆಗಾಗಿ23 ಲಕ್ಷ ರೆಮಿಡಿಸಿವಿರ್ ಇಂಜೆಕ್ಷನ್ ಹಂಚಿಕೆ ಮಾಡಿರುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಹೇಳಿದ್ದಾರೆ.

ಸಾಸ್ಟ್ ಪೋರ್ಟಲ್ ನಲ್ಲಿ ಆಕ್ಸಿಜನ್, ರೆಮಿಡಿಸಿವಿರ್, ಬೆಡ್ ಗಳ ಮಾಹಿತಿ: ಅಶ್ವತ್ಥ ನಾರಾಯಣ
ಆಮ್ಲಜನಕ, ರೆಮಿಡಿಸಿವಿರ್ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿರುವ ಸರಕಾರಿ ಬೆಡ್‌ಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ (sast) ಪೋರ್ಟಲ್ʼನಲ್ಲಿ ಸಿಗುವ ಹಾಗೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರು ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಕೋಟಾದನುಸಾರ ರೆಮಿಡಿಸಿವಿರ್ ಪೂರೈಸದ ಕಂಪನಿಗಳಿಗೆ ನೋಟಿಸ್- ಅಶ್ವತ್ಥ ನಾರಾಯಣ
ರೆಮಿಡಿಸಿವಿಆರ್ ಇಂಜೆಕ್ಷನ್ ನ್ನು ಕೋಟಾದನುಸಾರ ಪೂರೈಸದ ಕಂಪೆನಿಗಳಿಗೆ ನೊಟೀಸ್ ನೀಡುವುದಾಗಿ ರೆಮಿಡಿಸಿವಿರ್ ಇಂಜೆಂಕ್ಷನ್ ಪೂರೈಕೆ ಜವಾಬ್ದಾರಿ ಹೊತ್ತಿರುವ ಡಿಸಿಎಂ ಅಶ್ವತ್ಥ ನಾರಾಯಣ್ ಎಚ್ಚರಿಸಿದ್ದಾರೆ.

ವಿವಿಧ ರಾಜ್ಯಗಳಿಗೆ ಮೇ 10 ರಿಂದ 16 ರವರೆಗಿನ ಬಳಕೆಗಾಗಿ ಕೇಂದ್ರದಿಂದ 19.2 ಲಕ್ಷ ರೆಮಿಡಿಸಿವಿರ್ ವಯಲ್ಸ್ ಹಂಚಿಕೆ
ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ ರೆಮಿಡಿಸಿವಿರ್ ಇಂಜೆಕ್ಷನ್ ವಯಲ್ಸ್ ಗಳನ್ನುಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.

ಕಾಳಸಂತೆಯಲ್ಲಿ ರೆಮಿಡಿಸಿವಿರ್ ಮಾರಾಟ: 90 ಮಂದಿ ಬಂಧನ
ರೆಮಿಡಿಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಸುಮಾರು 90 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಗುರುವಾರ ತಿಳಿಸಿದ್ದಾರೆ.

ಕಾಳಸಂತೆಯಲ್ಲಿ ರೆಮಿಡಿಸಿವಿರ್ ಮಾರಾಟ ಮಾಡಿದಲ್ಲಿ ಜೈಲಿಗೆ: ಸಚಿವ ಡಾ. ಸುಧಾಕರ್
ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ನೀಡಲಾಗುವ ರೆಮಿಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಅಂಥವರ ವಿರುದ್ಧ ಎಫ್.ಐ.ಆರ್. ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಕಳ್ಳ ಮಾರಾಟಗಾರರಿಗೆ ಎಚ್ಚರಿಸಿದ್ದಾರೆ.

ಕೊರೋನಾ ಹೆಚ್ಚಳ: ಕೇಂದ್ರ ಸರ್ಕಾರದಿಂದ 4.50 ಲಕ್ಷ ರೆಮಿಡಿಸಿವಿರ್ ವಯೆಲ್ ಆಮದು
ರೆಮಿಡಿಸಿವಿರ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತ, ಇತರ ದೇಶಗಳಿಂದ ಈ ಔಷಧವನ್ನು ಆಮದು ಮಾಡಿಕೊಳ್ಳಲಾರಂಭಿಸಿದೆ.

ರೆಮಿಡಿಸಿವಿರ್ ನ ಲಕ್ಷಾಂತರ ಬಾಟಲಿ ರಫ್ತು ಮಾಡಿರಬಹುದು,ಈಗ ಅದರ ಕೊರತೆಯಿಂದ ಜನ ನರಳುವಂತಾಗಿದೆ-ಹೈಕೋರ್ಟ್
ಕೋವಿಡ್-19 ಇಂಜೆಕ್ಷನ್ ರೆಮಿಡಿಸಿವಿರ್ ನ ಲಕ್ಷಾಂತರ ಬಾಟಲಿಗಳನ್ನು ಭಾರತ ರಫ್ತು ಮಾಡಿರಬಹುದು. ಆದರೆ, ತನ್ನ ಸ್ವಂತ ದೇಶದ ಜನರು ಈ ಇಂಜೆಕ್ಷನ್ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.

