ರೆಮಿಡಿಸಿವಿರ್ ನ ಲಕ್ಷಾಂತರ ಬಾಟಲಿ ರಫ್ತು ಮಾಡಿರಬಹುದು,ಈಗ ಅದರ ಕೊರತೆಯಿಂದ ಜನ ನರಳುವಂತಾಗಿದೆ-ಹೈಕೋರ್ಟ್
ಕೋವಿಡ್-19 ಇಂಜೆಕ್ಷನ್ ರೆಮಿಡಿಸಿವಿರ್ ನ ಲಕ್ಷಾಂತರ ಬಾಟಲಿಗಳನ್ನು ಭಾರತ ರಫ್ತು ಮಾಡಿರಬಹುದು. ಆದರೆ, ತನ್ನ ಸ್ವಂತ ದೇಶದ ಜನರು ಈ ಇಂಜೆಕ್ಷನ್ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.

ನವದೆಹಲಿ: ಕೋವಿಡ್-19 ಇಂಜೆಕ್ಷನ್ ರೆಮಿಡಿಸಿವಿರ್ ನ ಲಕ್ಷಾಂತರ ಬಾಟಲಿಗಳನ್ನು ಭಾರತ ರಫ್ತು ಮಾಡಿರಬಹುದು. ಆದರೆ, ತನ್ನ ಸ್ವಂತ ದೇಶದ ಜನರು ಈ ಇಂಜೆಕ್ಷನ್ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.
ಭಾರತದಲ್ಲಿನ ಅನೇಕ ಕಂಪನಿಗಳು ಈ ಇಂಜೆಕ್ಷನ್ ಉತ್ಪಾದಿಸಲಿದ್ದು, ಲಕ್ಷಾಂತರ ಬಾಟಲಿಗಳನ್ನು ರಫ್ತು ಮಾಡಿರಬಹುದು. ಆದರೆ, ನಮ್ಮ ದೇಶದಲ್ಲಿನ ರೋಗಿಗಳಿಗೆ ಸಾಕಾಗುವಷ್ಟು ಇಂಜೆಕ್ಷನ್ ಇಲ್ಲದಂತಾಗಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಹೇಳಿದರು.
ದೆಹಲಿಯಲ್ಲಿ ಈ ಇಂಜೆಕ್ಷನ್ ಕೊರತೆಯಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದ್ದು, ಇವುಗಳಿಗೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಬಹುದೇ ಎಂದು ಕೇಂದ್ರ ಸರ್ಕಾರ, ಡಿಸಿಜಿಐ ಮತ್ತು ಐಸಿಎಂಆರ್ ನ್ನು ನ್ಯಾಯಾಲಯ ಕೇಳಿದೆ.
ದೆಹಲಿ ಸರ್ಕಾರಕ್ಕೆ ಎಷ್ಟು ಇಂಜೆಕ್ಷನ್ ನ್ನು ಹಂಚಿಕೆ ಮಾಡಲಾಗಿದೆ. ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ.ಯಾರಾದರೂ ನೇರವಾಗಿ ಈ ಇಂಜೆಕ್ಷನ್ ಖರೀದಿಗೆ ತಯಾರಕರು ಅಥವಾ ಪೂರೈಕೆದಾರರನ್ನು ಸಂಪರ್ಕಿಸಬಹುದೇ ಎಂದು ಕೇಂದ್ರ ಸರ್ಕಾರವನ್ನು ನ್ಯಾಯಾಲಯ ಕೇಳಿದ್ದು, ಈ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ಮುಂದೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


