ವಿಶೇಷಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸುವ ಮೂಲಕ ಮಾದರಿಯಾದ ದಾವಣಗೆರೆಯ ಯುವ ಮಿತ್ರರು!
ತಮ್ಮ ವಯೋಮಾನದ ಇತರರಿಗಿಂತ ಭಿನ್ನವಾಗಿ, ಈ ಯುವಕರು ಮುಂಜಾನೆ ಎದ್ದು, ಬೆನ್ನಿಗೆ, ಸೋಂಕುನಿವಾರಕಗಳನ್ನು ಹೊಂದಿರುವ ಚೀಲ, ಪಂಪ್ ಗಳನ್ನು ಕಟ್ಟಿಕೊಂಡು ಮನೆ ಬಿಡುತ್ತಾರೆ. ದಾವಣಗೆರೆ ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚಗೊಳಿಸುವ ಮೂಲಕ ಕೋವಿಡ್-19 ರ ವಿರುದ್ಧ ಹೋರಾಡಲು ಹೊರಟ ಯುವಕರ ಕಥೆ ಇದು.