ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸುವ ಮೂಲಕ ಮಾದರಿಯಾದ ದಾವಣಗೆರೆಯ ಯುವ ಮಿತ್ರರು!
ತಮ್ಮ ವಯೋಮಾನದ ಇತರರಿಗಿಂತ ಭಿನ್ನವಾಗಿ, ಈ ಯುವಕರು ಮುಂಜಾನೆ ಎದ್ದು, ಬೆನ್ನಿಗೆ, ಸೋಂಕುನಿವಾರಕಗಳನ್ನು ಹೊಂದಿರುವ ಚೀಲ, ಪಂಪ್ ಗಳನ್ನು ಕಟ್ಟಿಕೊಂಡು ಮನೆ ಬಿಡುತ್ತಾರೆ. ದಾವಣಗೆರೆ ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚಗೊಳಿಸುವ ಮೂಲಕ ಕೋವಿಡ್-19 ರ ವಿರುದ್ಧ ಹೋರಾಡಲು ಹೊರಟ ಯುವಕರ ಕಥೆ ಇದು.

ದಾವಣಗೆರೆ: ತಮ್ಮ ವಯೋಮಾನದ ಇತರರಿಗಿಂತ ಭಿನ್ನವಾಗಿ, ಈ ಯುವಕರು ಮುಂಜಾನೆ ಎದ್ದು, ಬೆನ್ನಿಗೆ, ಸೋಂಕುನಿವಾರಕಗಳನ್ನು ಹೊಂದಿರುವ ಚೀಲ, ಪಂಪ್ ಗಳನ್ನು ಕಟ್ಟಿಕೊಂಡು ಮನೆ ಬಿಡುತ್ತಾರೆ. ದಾವಣಗೆರೆ ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚಗೊಳಿಸುವ ಮೂಲಕ ಕೋವಿಡ್-19 ರ ವಿರುದ್ಧ ಹೋರಾಡಲು ಹೊರಟ ಯುವಕರ ಕಥೆ ಇದು.
ಎರಡನೇ ಅಲೆ ಸಮಯದಲ್ಲಿ ಎಲ್ಲರೂ ಕೋವಿಡ್-19 ಭಯದಿಂದ ವಾಸಿಸುತ್ತಿದ್ದಾಗ, ಈ 20 ವರ್ಷದ ಯುವತಿ ಹಾಗೂ 16 ವರ್ಷದ ಆಕೆಯ ಸ್ನೇಹಿತ ಬೀದಿಗಳಲ್ಲಿ ಸೋಂಕುನಿವಾರಕಗಳನ್ನು ಸಿಂಪಡಿಸಲು ಮತ್ತು ಸಾರ್ವಜನಿಕರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಸೌಜನ್ಯ ಮತ್ತು ಅವಳ ಸ್ನೇಹಿತ ರುದ್ರೇಶ್ ಈ ಅಪೂರ್ವ ಸೇವೆ ಮಾಡುತ್ತಿರುವ ಜೋಡಿ. ಪ್ರತಿದಿನ ಬೆಳಿಗ್ಗೆ ಪ್ರಾರಂಭವಾಗಿ ವಿವಿಧ ಕಡೆಗಳಲ್ಲಿ ಸೋಡಿಯಂ ಹೈಪೋಕ್ಲೋರೈಡ್ ಮತ್ತು ಡೆಟ್ಟೋಲ್ ಮಿಶ್ರಣವನ್ನು ಸಿಂಪಡಿಸುತ್ತಾರೆ. ಇಲ್ಲಿಯವರೆಗೆ, ಅವರು ಪಿಜೆ ಎಕ್ಸ್ ಟೆನ್ಷನ್, ಎಂಸಿಸಿ ಎ ಮತ್ತು ಬಿ ಬ್ಲಾಕ್ ಗಳು, ದುರ್ಗಮ್ಮ ದೇವಸ್ಥಾನ, ಕೆಟಿಜೆ ನಗರ, ಕೆಟಿಜೆ ನಗರ ಪೊಲೀಸ್ ಠಾಣೆ, ಚ್ಲಾಕ್ ಟವರ್, ಚಾಮರಾಜ್‌ಪೇಟೆ, ಎಂಜಿ ರಸ್ತೆ, ರಾಮ್ ಆಂಡ್ ಕೊ ಸರ್ಕಲ್, ವಿನೋಭ ನಗರ, ಚರ್ಚ್ ರಸ್ತೆ ಮತ್ತು ಇತರ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡಿದ್ದಾರೆ. ಅಲ್ಲದೆ ಕೋವಿಡ್ -19 ರೋಗಿಗಳ ಸುಮಾರು ನಾಲ್ಕು ಮನೆಗಳನ್ನು ಸ್ವಚ್ಚಗೊಳಿಸಿದ್ದಾರೆ.
ಸೌಜನ್ಯ ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ. ಕೆಲಸ ಮಾಡುವಾಗ ಟ್ರಿಪಲ್ ಮಾಸ್ಕ್, ಫೇಸ್ ಶೀಲ್ಡ್ ಮತ್ತು ಕೈಗವಸುಗಳನ್ನು ಧರಿಸುತ್ತಾರೆ. ಆರಂಭಿಕ ಹಂತಗಳಲ್ಲಿ, ಜನರು ಅವರ ಕೆಲಸ ನೋಡಿ ಹಾಸ್ಯ ಮಾಡಿದ್ದರು.ಆದರೆ ಈಗ ನಿಧಾನವಾಗಿ ಎಲ್ಲರೂ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.ಸೌಜನ್ಯ ದಾವಣಗೆರೆ ನಗರದಲ್ಲಿ ಮನೆಮಾತಾಗಿದ್ದಾರೆ.
ದಾವಣಗೆರೆಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ (ಸಿಬಿಝಡ್)ಸೌಜನ್ಯ ತನ್ನ ಅಧ್ಯಯನವನ್ನು ಮುಂದುವರೆಸುವ ಜೊತೆಗೆ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವುದರಿಂದ ಆಕೆ ಭವಿಷ್ಯದಲ್ಲಿ ಫುಡ್ ಸೈಂಟಿಸ್ಟ್ ಆಗುವ ಕನಸು ಹೊಂದಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ ನ ಭಾಗವಾಗಿರುವ ಈಕೆ ಸಾಮಾಜಿಕ ಸೇವೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ.. ಅವರು 2016 ರ ಅತ್ಯುತ್ತಮ ಗೈಡ್ ಎಂಬ ರಾಜ್ಯ ಪ್ರಶಸ್ತಿ ಗೆದ್ದಿದ್ದಾರೆ.
ಸೌಜನ್ಯ ನಿರಂತರವಾಗಿ ಚಿಗಟೆರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ ಮತ್ತು ಸಹಾಯಕ್ಕಾಗಿ ವಿನಂತಿಸಿದ ಸ್ನೇಹಿತರ ಪೋಷಕರಿಗೆ ಆಹಾರವನ್ನು ಪೂರೈಸುತ್ತಿದ್ದಾರೆ. ಅವರಿಗೆ ಆಕೆಯ ತಂದೆ ಶಡಕ್ಷರಿ ಅಜ್ಜಂಪುರ ಶೆಟ್ಟಿಮತ್ತು ತಾಯಿ ಶಿಲ್ಪಾ ಬೆಂಬಲ ನೀಡುತ್ತಾರೆ, ಅವರು ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಎಂದಿಗೂ ಆಕ್ಷೇಪಿಸಿಲ್ಲ.
ಟಿಎನ್‌ಐಇಯೊಂದಿಗೆ ಮಾತನಾಡಿದ ಸೌಜನ್ಯ ಅಜ್ಜಂಪುರ ಶೆಟ್ಟಿ "ನೈರ್ಮಲ್ಯದ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಾಧಕ-ಬಾಧಕಗಳ ಬಗ್ಗೆ ನನ್ನ ತಾಯಿ ಮತ್ತು ತಂದೆ ನನಗೆ ಮಾಹಿತಿ ನೀಡಿದರು ಮತ್ತು ನಿರ್ಧಾರವನ್ನು ನನಗೆ ಬಿಟ್ಟರು. ನನ್ನ ಏಕೈಕ ಉತ್ತರವೆಂದರೆ - ನಾನು ಸೋಂಕಿಗೆ ಒಳಗಾಗಬೇಕೆಂದರೆ ಅದು ಮನೆಯಲ್ಲಿದ್ದರೂ ಸಂಬವಿಸಲಿದೆ. ಆದರೆ ಕೆಲಸ ಮಾಡುವುದರಿಂದ ಮಾನವಕುಲದ ಸೇವೆ ಮಾಡುವ ತೃಪ್ತಿ ನನಗೆ ಇರುತ್ತದೆ."
"ಕಳೆದ ಲಾಕ್‌ಡೌನ್ ಅವಧಿಯಲ್ಲಿ, ನನ್ನ ಕುಟುಂಬವು ಅಗತ್ಯವಿರುವವರಿಗೆ ಪಡಿತರವನ್ನು ವಿತರಿಸಿದೆ. ಈ ಸಮಯದಲ್ಲಿ, ನಾನು ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಯೋಚಿಸಿದೆ ಮತ್ತು 2,800 ರೂಗಳನ್ನು ಪಾವತಿಸುವ ಮೂಲಕ ಪಂಪ್ ಖರೀದಿಸಿದೆ ಮತ್ತು ಪ್ರತಿ ವಾರ ನಾನು ಸೋಡಿಯಂ ಹೈಪೋಕ್ಲೋರೈಡ್ ಮತ್ತು ಡೆಟಾಲ್ ಖರೀದಿಗೆ 5,000 ರಿಂದ 8,000 ರೂ., ಖರ್ಚು ಮಾಡುತ್ತೇನೆ".
"ಜನರು ರಸ್ತೆಗಳಲ್ಲಿ ಪ್ರಯಾಣಿಸಲು ಪ್ರಾರಂಭಿಸುವ ಮೊದಲು ನಾವು ನಮ್ಮ ಕೆಲಸವನ್ನು ಮುಗಿಸುತ್ತೇವೆ. ಇದು ಸಮಾಜಕ್ಕೆ ಸಲ್ಲಿಸುವ ಗೌರವದ ಒಂದು ಸಣ್ಣ ಸಂಕೇತವಾಗಿದೆ ಮತ್ತು ನಾವು ಬಹುಪಾಲು ಪ್ರದೇಶಗಳನ್ನು ಎರಡು ಮೂರು ಬಾರಿ ಸ್ವಚ್ಚ ಮಾಡುತ್ತೇವೆ" ಎಂದು ಅವರು ಹೇಳಿದರು.
"ನನ್ನ ಕೆಲಸ ಮುಗಿದ ನಂತರ, ನಾನು ಸ್ನಾನ ಮಾಡುತ್ತೇನೆ ಮತ್ತು ನಂತರ ಆರನೇ ಸೆಮಿಸ್ಟರ್ ಬಿಎಸ್ಸಿ ಕೋರ್ಸ್ ಗಾಗಿ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತೇನೆ" ಎಂದು ಅವರು ವಿವರಿಸುತ್ತಾರೆ.
ಸಿದ್ಧೇಶ್ವರ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ರುದ್ರೇಶ್ ಅವರು ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ತಮ್ಮ ಕರ್ತವ್ಯ ಎಂದು ಹೇಳುತ್ತಾರೆ. ತಹಶೀಲ್ದಾರ್ ಗಿರೀಶ್ ಈ ಜೋಡಿಯನ್ನು ಶ್ಲಾಘಿಸಿದ್ದು ಹೆಚ್ಚಿನ ಯುವಕರು ಸಾಮಾಜ ಸೇವೆ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


