ಮೂತ್ರ ವಿಸರ್ಜನೆ

ಛತ್ರಪತಿ ಸಂಭಾಜಿ ಮಹಾರಾಜ್ ನಾಮಫಲಕದ ಬಳಿ ಮೂತ್ರ ವಿಸರ್ಜನೆ ಮಾಡಿದ್ದ ವಿಡಿಯೋ ವೈರಲ್, ಟ್ರೋಲ್; ಅವಮಾನ ಸಹಿಸಲಾಗದೆ ಯುವಕ ಆತ್ಮಹತ್ಯೆ!
ತನ್ನ ತಪ್ಪಿನ ಅರಿವಾಗುತ್ತಿದ್ದಂತೆಯೇ ಈ ಯುವಕ ಹಾಗೂ ಆತನ ಸ್ನೇಹಿತ ವಿಡಿಯೋ ಮಾಡಿ ಸಾರ್ವಜನಿಕರ ಕ್ಷಮೆ ಕೋರಿದ್ದರು.

ಲಿಫ್ಟ್‌ನಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ ಡೆಲಿವರಿ ಏಜೆಂಟ್; ಆರೋಪಿಗೆ ಥಳಿತ, ಪ್ರಕರಣ ದಾಖಲು
ಅಲ್ಲಿನ ನಿವಾಸಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.

ಮೀರತ್: ವಿದ್ಯಾರ್ಥಿಗೆ ಥಳಿಸಿ, ಮೂತ್ರ ವಿಸರ್ಜನೆ; ನಾಲ್ವರ ಬಂಧನ
ನವೆಂಬರ್ 13 ರಂದು ಘಟನೆ ನಡೆದಿದ್ದು ಯುವಕರ ಗುಂಪೊಂದು ವಿದ್ಯಾರ್ಥಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ ಆ ಬಳಿಕ ವಿದ್ಯಾರ್ಥಿಯ ಮುಖದ ಮೇಲೆ ಓರ್ವ ಮೂತ್ರ ವಿಸರ್ಜನೆ ಮಾಡಿ ಅಮಾನುಷವಾಗಿ ವರ್ತಿಸಿದ್ದಾನೆ.

ಹೆಚ್ಚಿನ ಹಣ ನೀಡಲು ನಿರಾಕರಿಸಿದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; ಬಾಯಿಗೆ ಮೂತ್ರ ವಿಸರ್ಜನೆ!
ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ಸಾಲದಾತ ಮತ್ತು ಆತನ ಸಹಚರರು ದಲಿತ ಮಹಿಳೆಯೊಬ್ಬರನ್ನು ವಿವಸ್ತಗೊಳಿಸಿ, ಹಲ್ಲೆ ನಡೆಸಿ ಮತ್ತು ಬಾಯಿಗೆ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಪ್ರಮುಖ ಆರೋಪಿಗಳಾದ ಪ್ರಮೋದ್ ಸಿಂಗ್ ಮತ್ತು ಆತನ ಪುತ್ರ ಅಂಶು ಸಿಂಗ್ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಪಿ RSS ಕಚೇರಿ ಗೇಟ್ ಬಳಿ ಮೂತ್ರ ವಿಸರ್ಜನೆ: 3 ಬಂಧನ
ಉತ್ತರ ಪ್ರದೇಶ ಆರ್ ಎಸ್ಎಸ್ ಕಚೇರಿ ಗೇಟ್ ಬಳಿ ವ್ಯಕ್ತಿಯೋರ್ವ ಮೂತ್ರ ವಿಸರ್ಜನೆ ಮಾಡಿದ್ದು ಈಗ ಆ ಪ್ರದೇಶದಲ್ಲಿ ಘರ್ಷಣೆಗೆ ಕಾರಣವಾಗಿದೆ.

ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ: ಆದಿವಾಸಿ ಯುವಕನ ಮೇಲೆ 'ಬಿಜೆಪಿ ವ್ಯಕ್ತಿ' ಮೂತ್ರ ವಿಸರ್ಜನೆ: ವಿಡಿಯೋ ವೈರಲ್
ಬಿಜೆಪಿ ಶಾಸಕನ ಬೆಂಬಲಿಗನೊಬ್ಬ ಆದಿವಾಸಿ ಬುಡಕಟ್ಟು ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶ ಸಿಧಿ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಪ್ರದೇಶ ರಾಜ್ಯದಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸಬೇಕಾಗಿದೆ.

ಮತ್ತೊಂದು ಮೂತ್ರ ವಿಸರ್ಜನೆ ಘಟನೆ: ಈ ಬಾರಿ ರೈಲಿನಲ್ಲಿ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್‌ನಿಂದಲೇ ಅವಾಂತರ
ಮತ್ತೊಂದು ಮೂತ್ರ ವಿಸರ್ಜನೆ ಪ್ರಕರಣ ನಡೆದಿದ್ದು, ಈ ಬಾರಿ ಅಮೃತಸರ ಮತ್ತು ಕೋಲ್ಕತ್ತಾ ನಡುವಿನ ಅಕಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ವರದಿಯಾಗಿದೆ. ರೈಲಿನಲ್ಲಿ ನಿಯೋಜನೆಗೊಂಡಿದ್ದ ಬಿಹಾರದ ಟಿಟಿಇ ಮುನ್ನಾ ಕುಮಾರ್ ಎಂಬಾತ ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಕುಡಿದ ಅಮಲಿನಲ್ಲಿ ಅಮೆರಿಕನ್ ಏರ್‌ಲೈನ್ ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ
ನ್ಯೂಯಾರ್ಕ್-ನವದೆಹಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನದ ಪ್ರಯಾಣಿಕರೊಬ್ಬರು ಕುಡಿದ ಅಮಲಿನಲ್ಲಿ ವಿಮಾನದಲ್ಲಿದ್ದ ಸಹ ಪುರುಷ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಭಾನುವಾರ ಮೂಲಗಳು ತಿಳಿಸಿವೆ.

ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಯ ಸೀಟಿನ ಮೇಲೆ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜನೆ; ದೂರು ದಾಖಲಿಸಲು ಚಿಂತನೆ
ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಕುಡಿದ ಮತ್ತಿನಲ್ಲಿ ಮಹಿಳಾ ಸಹ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ದೂರು ದಾಖಲಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

