ನೂತನ ಸಂಸತ್ ಭವನ

ಹೊಸ ಸಂಸತ್ ಭವನವನ್ನು ‘ಮೋದಿ ಮಲ್ಟಿಪ್ಲೆಕ್ಸ್’​ ಎಂದು ಕರೆದ ಜೈರಾಮ್ ರಮೇಶ್: ಬಿಜೆಪಿ ತೀವ್ರ ಕಿಡಿ
ದೇಶ

ಹೊಸ ಸಂಸತ್ ಭವನವನ್ನು ‘ಮೋದಿ ಮಲ್ಟಿಪ್ಲೆಕ್ಸ್’​ ಎಂದು ಕರೆದ ಜೈರಾಮ್ ರಮೇಶ್: ಬಿಜೆಪಿ ತೀವ್ರ ಕಿಡಿ

ನೂತನ ಸಂಸತ್ ಭವನವನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕೆಂದು ಟೀಕೆ ಮಾಡಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ಹೊಸ ಸಂಸತ್ ಭವನಕ್ಕೆ ಪ್ರವೇಶ: ಲೋಕಸಭಾ, ರಾಜ್ಯಸಭಾ ಸದಸ್ಯರಿಗೆ ಪ್ರಧಾನಿ ಮೋದಿ ಸಾಥ್, ವಿಶೇಷ ಅಧಿವೇಶನ ಆರಂಭ
ದೇಶ

ಹೊಸ ಸಂಸತ್ ಭವನಕ್ಕೆ ಪ್ರವೇಶ: ಲೋಕಸಭಾ, ರಾಜ್ಯಸಭಾ ಸದಸ್ಯರಿಗೆ ಪ್ರಧಾನಿ ಮೋದಿ ಸಾಥ್, ವಿಶೇಷ ಅಧಿವೇಶನ ಆರಂಭ

ಹೊಸ ಸಂಸತ್ ಭವನಕ್ಕೆ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಪ್ರವೇಶಿಸಿದ್ದು, ಈ ವೇಳೆ ಕೇಂದ್ರ ಸಚಿವರು ಮತ್ತು ಇತರ ಸಂಸದರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ನೂತನ ಕಟ್ಟಡದೊಳಗೆ ಆಗಮಿಸಿದರು. ಇದರೊಂದಿಗೆ ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭಗೊಂಡಿದೆ.

ಇತಿಹಾಸ ಪುಟಕ್ಕೆ ಹಳೇ ಸಂಸತ್ ಭವನ: ಇಂದಿನಿಂದ ಹೊಸ ಸಂಸತ್‌ ಕಟ್ಟಡದಲ್ಲಿ 5 ದಿನ ವಿಶೇಷ ಅಧಿವೇಶನ
ದೇಶ

ಇತಿಹಾಸ ಪುಟಕ್ಕೆ ಹಳೇ ಸಂಸತ್ ಭವನ: ಇಂದಿನಿಂದ ಹೊಸ ಸಂಸತ್‌ ಕಟ್ಟಡದಲ್ಲಿ 5 ದಿನ ವಿಶೇಷ ಅಧಿವೇಶನ

ಸಂಸತ್ತಿನ ವಿಶೇಷ ಅಧಿವೇಶನದ ಕಲಾಪಗಳು ಮಂಗಳವಾರದಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಆರಂಭವಾಗುತ್ತಿದ್ದು, ಇದರ ನಡುವಲ್ಲೇ ಬ್ರಿಟೀಷರ ಆಳ್ವಿಕೆ, 2ನೇ ಮಹಾಯುದ್ಧ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಗಳಿಗೆ, ಸಂವಿಧಾನ ರಚನೆ ಹೀಗೆ ಹಲವಾರು ಐತಿಹಾಸಿಕ ಹಾಗೂ ವಿವಾದಾತ್ಮಕ ಮಸೂದೆಗಳಿಗೆ ಸಾಕ್ಷಿಯಾಗಿದ್ದ ನವದೆಹಲಿಯ ಹಳೆಯ ಸಂಸತ್ ಭವನ ಇತಿಹಾಸದ ಪುಟ ಸೇರಲು ಕ್ಷಣಗಣನೆ ಆರಂಭವಾಗಿದೆ.

ವಿಶೇಷ ಅಧಿವೇಶನದಲ್ಲಿ CEC ಮತ್ತು EC ನೇಮಕಾತಿಗಳ ಮಸೂದೆ ಮಂಡನೆ ಇಲ್ಲ: ಮೂಲಗಳು
ದೇಶ

ವಿಶೇಷ ಅಧಿವೇಶನದಲ್ಲಿ CEC ಮತ್ತು EC ನೇಮಕಾತಿಗಳ ಮಸೂದೆ ಮಂಡನೆ ಇಲ್ಲ: ಮೂಲಗಳು

ಇಂದಿನಿಂದ ಆರಂಭವಾಗಿರುವ ಸಂಸತ್ತಿನ ಐದು ದಿನಗಳ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಬಯಸಿಲ್ಲ ಎಂದು ಮೂಲಗಳು ತಿಳಿಸಿವೆ.

ಸಂಸತ್ ಪ್ರವೇಶಿಸುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ, ಹಳೆ ಸಂಸತ್ ಭವನ ನಮಗೆಂದಿಗೂ ಪ್ರೇರಣೆ: ಪ್ರಧಾನಿ ಮೋದಿ
ದೇಶ

ಸಂಸತ್ ಪ್ರವೇಶಿಸುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ, ಹಳೆ ಸಂಸತ್ ಭವನ ನಮಗೆಂದಿಗೂ ಪ್ರೇರಣೆ: ಪ್ರಧಾನಿ ಮೋದಿ

ಸಂಸತ್‌ನಲ್ಲಿ ಸೋಮವಾರ 5 ದಿನಗಳ ವಿಶೇಷ ಅಧಿವೇಶನ ಆರಂಭವಾಗಿದೆ. ಮಂಗಳವಾರ ನೂತನ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗುವುದರಿಂದ ಹಾಗೂ ಹಳೆಯ ಭವನದಲ್ಲಿ ಕೊನೆಯ ಅಧಿವೇಶನ ಆಗಿರುವುದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಹಳೆಯ ಸಂಸತ್‌ ಭವನದ ಕುರಿತು ಮಾತನಾಡಿದರು.

ನೂತನ ಸಂಸತ್ ಭವನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್
ದೇಶ

ನೂತನ ಸಂಸತ್ ಭವನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್

ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್​ ಅವರು, ನೂತನ ಸಂಸತ್ ಭವನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಹೊಸ ಸಂಸತ್ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಖರ್ಗೆ ಗೈರು, ಇದೇ ಕಾರಣ!
ದೇಶ

ಹೊಸ ಸಂಸತ್ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಖರ್ಗೆ ಗೈರು, ಇದೇ ಕಾರಣ!

ನೂತನ ಸಂಸತ್ ಭವನದಲ್ಲಿ ಭಾನುವಾರ ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ತಿಳಿಸಿದ್ದು, ‘ಸಾಕಷ್ಟು ತಡವಾಗಿ’ ಆಹ್ವಾನ ಬಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 

'ಧರ್ಮ ಎಂಬುದು ಜೀವನದ ಅವಿಭಾಜ್ಯ ಅಂಗವೇ ಹೊರತು ಕೇವಲ ಪೂಜಾ ಪದ್ಧತಿ ಅಲ್ಲ ಎಂಬ ಸತ್ಯ ಗೊತ್ತಿರಲಿ'
ರಾಜ್ಯ

'ಧರ್ಮ ಎಂಬುದು ಜೀವನದ ಅವಿಭಾಜ್ಯ ಅಂಗವೇ ಹೊರತು ಕೇವಲ ಪೂಜಾ ಪದ್ಧತಿ ಅಲ್ಲ ಎಂಬ ಸತ್ಯ ಗೊತ್ತಿರಲಿ'

ನೂತನ ಸಂಸತ್ ಭವನ ಕಟ್ಟಡ ಕುರಿತು ಟೀಕಿಸಿ ಟ್ವೀಟ್ ಮಾಡಿದ್ದ ಸಂಸದ ಕಪಿಲ್ ಸಿಬಲ್ ಅವರಿಗೆ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

ನೂತನ ಸಂಸತ್ ಭವನ ಲೋಕಾರ್ಪಣೆ: ಸ್ಪೀಕರ್​ ಆಸನದ ಬಳಿ ಐತಿಹಾಸಿಕ 'ಸೆಂಗೋಲ್'​ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ
ದೇಶ

ನೂತನ ಸಂಸತ್ ಭವನ ಲೋಕಾರ್ಪಣೆ: ಸ್ಪೀಕರ್​ ಆಸನದ ಬಳಿ ಐತಿಹಾಸಿಕ 'ಸೆಂಗೋಲ್'​ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನೂತನ ಸಂಸತ್ ಭವನದ ಲೋಕಾರ್ಪಣೆ ಸಮಾರಂಭ ಭಾನುವಾರ ಆರಂಭಗೊಂಡಿದ್ದು, ಪುರೋಹಿತರಿಂದ ಸೆಂಗೋಲ್​​ ಸ್ವೀಕರಿಸಿದ ಪ್ರಧಾನಿ ಮೋದಿಯವರು ಲೋಕಸಭಾ ಸ್ಪೀಕರ್​ ಆಸನದ ಬಳಿ​ ಪ್ರತಿಷ್ಠಾಪನೆ ಮಾಡಿದ್ದಾರೆ.