ದೇಶಮಣಿಪುರ: 6 ನಾಗಾಗಳ ಹತ್ಯೆ ಬೆನ್ನಲ್ಲೇ ಕುಕಿ ಸಮುದಾಯದ ಇಬ್ಬರ ಬರ್ಬರ ಹತ್ಯೆ; 30 ಮನೆಗಳು ಸುಟ್ಟು ಕರಕಲು!
ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಸದಸ್ಯರನ್ನು ಗುರುವಾರ ಬೆಳಿಗ್ಗೆ 4:55ಕ್ಕೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ವೇಳೆ ಮೂವತ್ತು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ಈ ಘಟನೆ ಕಾಮ್ಜಾಂಗ್ ಜಿಲ್ಲೆಯ ಕುಲ್ತುಹ್ ಕುಕಿ ಗ್ರಾಮದಲ್ಲಿ ಸಂಭವಿಸಿದೆ.