ಮಣಿಪುರ: 6 ನಾಗಾಗಳ ಹತ್ಯೆ ಬೆನ್ನಲ್ಲೇ ಕುಕಿ ಸಮುದಾಯದ ಇಬ್ಬರ ಬರ್ಬರ ಹತ್ಯೆ; 30 ಮನೆಗಳು ಸುಟ್ಟು ಕರಕಲು!
ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಸದಸ್ಯರನ್ನು ಗುರುವಾರ ಬೆಳಿಗ್ಗೆ 4:55ಕ್ಕೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ವೇಳೆ ಮೂವತ್ತು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ಈ ಘಟನೆ ಕಾಮ್ಜಾಂಗ್ ಜಿಲ್ಲೆಯ ಕುಲ್ತುಹ್ ಕುಕಿ ಗ್ರಾಮದಲ್ಲಿ ಸಂಭವಿಸಿದೆ.

ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಸದಸ್ಯರನ್ನು ಗುರುವಾರ ಬೆಳಿಗ್ಗೆ 4:55ಕ್ಕೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ವೇಳೆ ಮೂವತ್ತು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ಈ ಘಟನೆ ಕಾಮ್ಜಾಂಗ್ ಜಿಲ್ಲೆಯ ಕುಲ್ತುಹ್ ಕುಕಿ ಗ್ರಾಮದಲ್ಲಿ ಸಂಭವಿಸಿದೆ. ಈ ಘಟನೆಗೂ ಒಂದು ದಿನ ಮುನ್ನ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಆರು ನಾಗಾಗಳ ಶವಗಳು ಪತ್ತೆಯಾಗಿತ್ತು. ಮೇ 13ರಂದು ಲಿಲೋನ್ ವೈಫೇಯಿ ಗ್ರಾಮದಿಂದ ಹಲವು ನಾಗಗಳನ್ನು ಅಪಹರಿಸಲ್ಪಟ್ಟಿದ್ದು ಆರು ಜನರ ಮೃತದೇಹ ಪತ್ತೆಯಾಗಿತ್ತು.
ಪೊಲೀಸರ ಪ್ರಕಾರ, ಎರಡೂ ಘಟನೆಗಳ ನಂತರ ಈ ಪ್ರದೇಶಗಳಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದ್ದು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಪೊಲೀಸರ ಪ್ರಕಾರ, ಬುಧವಾರ ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಎಲ್ಲಾ ಶವಗಳನ್ನು ಪೊರೊಂಪತ್ ಆಸ್ಪತ್ರೆಗೆ ತರಲಾಯಿತು. ಶವಗಳು ಬಂದ ಸುದ್ದಿ ಕೇಳಿ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಜನಸಂದಣಿಯಿಂದಾಗಿ ಉದ್ವಿಗ್ನತೆ ಹೆಚ್ಚಾಯಿತು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಘಟನೆಯ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಇತರ ಭದ್ರತಾ ಸಂಸ್ಥೆಗಳ ತಂಡಗಳು ಸ್ಥಳಕ್ಕೆ ಬಂದಿವೆ. ನಾಗಾಗಳ ಹತ್ಯೆಗೆ ಪ್ರತಿಕ್ರಿಯೆಯಾಗಿ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಸೇನಾಪತಿ ಜಿಲ್ಲೆಯ ಕರೋಂಗ್ ಪ್ರದೇಶದಲ್ಲಿ, ಕೆಲವರು ಸರಕುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳಿಗೆ ಬೆಂಕಿ ಹಚ್ಚಿದರು. ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಕಚೇರಿಯನ್ನು ಧ್ವಂಸಗೊಳಿಸಲಾಯಿತು. ತಮೆಂಗ್‌ಲಾಂಗ್ ಜಿಲ್ಲೆಯ ತಮೆಯ್ ಪ್ರದೇಶದಲ್ಲಿಯೂ ಜನರು ಗಲಾಟೆ ಮಾಡಿದರು.
ಜೂನ್ 8 ರಂದು ಕಾಂಗ್‌ಪೋಕ್ಪಿ ಜಿಲ್ಲೆಯ ಪೊಂಗ್‌ರಿಂಗ್‌ಲಾಂಗ್ ರೊಂಗ್‌ಮೈ ನಾಗಾ ಗ್ರಾಮದಲ್ಲಿ ಕುಕಿ ಉಗ್ರರು ಗುಂಡು ಹಾರಿಸಿದರು. ಈ ಘಟನೆಯ ನಂತರ, ಕಾಣೆಯಾದ ನಾಗಾ ಗ್ರಾಮ ಕಾವಲುಗಾರ ಚುಂಜಾಂಗ್ಲುಂಗ್ ಪನ್ಮೆಯ್ ಅವರ ಶವವನ್ನು ಕಾಡಿನಿಂದ ವಶಪಡಿಸಿಕೊಳ್ಳಲಾಯಿತು. ಅವರ ತಲೆಗೆ ಗುಂಡು ಹಾರಿಸಲಾಗಿತ್ತು. ಕೇಂದ್ರ ಸರ್ಕಾರವು ಕುಕಿ ಪಡೆಗಳನ್ನು ಛಾಯಾ ಯುದ್ಧಕ್ಕೆ ಬಳಸುತ್ತಿದೆ ಎಂದು ನಾಗಾ ಗುಂಪುಗಳು ಆರೋಪಿಸಿವೆ.
ಮೂರು ವರ್ಷಗಳಲ್ಲಿ 731 ಸಾವುಗಳು
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಉದ್ವಿಗ್ನತೆಯಿಂದಾಗಿ, ಹೆಚ್ಚಿನ ಸಂಖ್ಯೆಯ ಜನರು ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಆರ್‌ಟಿಐ ಮೂಲಕ ಕೋರಲಾದ ಮಾಹಿತಿಯ ಪ್ರಕಾರ, ಮೂರು ವರ್ಷಗಳಲ್ಲಿ 731 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಚುರಾಚಂದ್‌ಪುರದಲ್ಲಿ ಅತಿ ಹೆಚ್ಚು 248 ಸಾವುಗಳು ಸಂಭವಿಸಿವೆ. ನಂತರ ಬಿಷ್ಣುಪುರದಲ್ಲಿ 151 ಸಾವುಗಳು ಮತ್ತು ಕಾಂಗ್‌ಪೋಕ್ಪಿಯಲ್ಲಿ 128 ಸಾವುಗಳು ಸಂಭವಿಸಿವೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ 43,676 ಜನರು ಸ್ಥಳಾಂತರಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



