ದುರ್ಗೆಯ 9 ಅವತಾರಗಳು
ಒಂಬತ್ತು ದಿನ, 9 ರೂಪ; ನವರಾತ್ರಿ ನವಶಕ್ತಿಯ ಕಥೆ
ನವರಾತ್ರಿಯ ಒಂಬತ್ತು ದಿನಗಳನ್ನು ದೇವಿಯ ಒಂಬತ್ತು ರೂಪಗಳ ಆರಾಧನೆಗೆ ಸಮರ್ಪಿಸಲಾಗಿದೆ. ಅವುಗಳೆಂದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ದುರ್ಗಾ ಅಥವಾ ಪರಾಶಕ್ತಿ.
ದುರ್ಗೆಯ ಒಂಬತ್ತು ರೂಪಗಳು; ಬದುಕಿಗೆ ಬೆಳಕಾಗುವ 9 ಜ್ಯೋತಿಗಳು!
ದುರ್ಗೆಯ ಪ್ರತಿಯೊಂದು ರೂಪವೂ ಒಂದು ವಿಶಿಷ್ಟ ಗುಣವನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯಿದೆ. ಆ ಗುಣಗಳನ್ನು ಇಂದಿನ ಬದುಕಿನೊಂದಿಗೆ ಬೆಸೆಯುವ ಪ್ರಯತ್ನ ಮಾಡಿದರೆ, ನವರಾತ್ರಿ ಕೇವಲ ಆಚರಣೆಯಾಗಿ ಉಳಿಯದೆ ಆತ್ಮಾವಲೋಕನದ ಹಬ್ಬವೂ ಆಗಬಲ್ಲದು.

