ದರೋಡೆ ಪ್ರಕರಣ

ಬೆಂಗಳೂರು: ಪೊಲೀಸ್ ID Card ತೋರಿಸಿ 20 ಲಕ್ಷ ರೂ ದರೋಡೆ! CID ಇನ್ಸ್ ಪೆಕ್ಟರ್ ಪರಾರಿ, ತೀವ್ರ ಹುಡುಕಾಟ
ಸಿಐಡಿ ಪೊಲೀಸ್ ಜೀಪ್ ನಲ್ಲಿ ಬಂದಿದ್ದವರು ನಮ್ಮಿಂದ 20 ಲಕ್ಷ ರೂ. ತೆಗೆದುಕೊಂಡು ಹೋಗಿದ್ದಾರೆ ಎಂದು ಕೇರಳ ಮೂಲದ ಯುವಕರು ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು: ಬಂಧಿಸಲು ಹೋದ ಪೊಲೀಸರ ಮೇಲೇ ಚಾಕು ದಾಳಿ; ದರೋಡೆ ಪ್ರಕರಣದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ
ತಿರುಪಾಳ್ಯ ಸಮೀಪ ಚಹಾ ಕುಡಿಯಲು ತೆರಳಿದ್ದಾಗ, ಆರೋಪಿ ಜೀವಾ ಮತ್ತು ಆತನ ಸಹಚರರು ಕಾರಿನಲ್ಲಿ ಬಂದು ದೂರುದಾರನ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಫೋನ್ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದರು.

ಹಾವೇರಿ: 6 ದುಷ್ಕರ್ಮಿಗಳಿಂದ ಆಭರಣ ಅಂಗಡಿಯಲ್ಲಿ ದರೋಡೆ; 40 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು!
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕನಶಿ ಹೊಸೂರು ಗ್ರಾಮದ ಆಭರಣ ಅಂಗಡಿಯಲ್ಲಿ ಶನಿವಾರ ಮುಂಜಾನೆ 1.45ರಿಂದ 2.30ರ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು: ಚಿನ್ನಾಭರಣ ದರೋಡೆ ಪ್ರಕರಣ ಬೇಧಿಸಲು ನೆರವಾದ ಮೊಬೈಲ್ ಫೋನ್
ಆರೋಪಿಗಳಲ್ಲಿ ಒಬ್ಬ ಸ್ಥಳದಿಂದ ಪರಾರಿಯಾಗುವಾಗ ತನ್ನ ಮೊಬೈಲ್ ಫೋನ್ ಅನ್ನು ಕೆಳಗೆ ಬೀಳಿಸಿ ಹೋಗಿದ್ದ. ಪೊಲೀಸರು ರಾಜಸ್ಥಾನದ ಐದು ಜನರನ್ನು ಬಂಧಿಸಿ 9.1 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಉಪನ್ಯಾಸಕರ ಮನೆಯಿಂದ 1.5 ಕೋಟಿ ರೂ, 50 ಗ್ರಾಂ ಚಿನ್ನ ಲೂಟಿ!
ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯ ವಿನಾಯಕನಗರದ 5ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ.

ವಿಜಯಪುರದಲ್ಲಿ 53 ಕೋಟಿ ರೂ ದರೋಡೆ ಪ್ರಕರಣ: ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರ ಬಂಧನ
ಬಂಧಿತ ಆರೋಪಿಗಳನ್ನು ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್ ಮಿರಿಯಾಲ(41) ಮತ್ತು ಅವರ ಸಹಚರರಾದ ಚಂದ್ರಶೇಖರ್ ನೇರೆಲ್ಲಾ(38) ಹಾಗೂ ಸುನಿಲ್ ನರಸಿಂಹಲು ಮೋಕಾ(40) ಎಂದು ಗುರುತಿಸಲಾಗಿದೆ.

ಮೊಬೈಲ್ ದರೋಡೆ ಪ್ರಕರಣ ಭೇದಿಸಿದ ಪೊಲೀಸರು; 18 ಫೋನ್, 2 ದ್ವಿಚಕ್ರ ವಾಹನ ವಶ
ಆರೋಪಿಗಳು ಅನೇಕ ದರೋಡೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಕದ್ದ ಫೋನ್‌ಗಳ ಮಾಲೀಕರನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮುಂದುವರೆದಿದೆ.

Watch | ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಶೂಟೌಟ್: ದರೋಡೆಕೋರರ ಕಾಲಿಗೆ ಪೊಲೀಸ್ ಗುಂಡು

Video: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ Shootout; ದರೋಡೆಕೋರರ ಕಾಲಿಗೆ ಗುಂಡು, ಇಬ್ಬರ ಬಂಧನ
ದರೋಡೆ ಮತ್ತು ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

