ದೇಶಕ್ವಾರಂಟೈನ್ ತಪ್ಪಿಸಿಕೊಳ್ಳಲು ಪ್ರಯಾಣಿಕರ ಹೊಸ ತಂತ್ರ, ವಿಮಾನ ಲ್ಯಾಂಡಿಂಗೂ ಮೊದಲೇ ಮಾತ್ರೆ ಸೇವನೆ: ಆಘಾತಕಾರಿ ಮಾಹಿತಿ!
ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಂದಾಗಿ ವಿಶ್ವದ 150 ರಾಷ್ಟ್ರಗಳು ತತ್ತರಿಸುತ್ತಿದ್ದು, ಸೋಂಕು ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಸರ್ಕಾರದ ಈ ಎಲ್ಲ ಪ್ರಯತ್ನಗಳೂ ನಿರ್ಲಕ್ಷಿತ ಜನರಿಂದಾಗಿ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.